ಸೆಪ್ಟೆಂಬರ್ 9 ರಿಂದ ಏಷ್ಯಾ ಕಪ್ ಟೂರ್ನಿ (Asia cup 2025) ಆರಂಭವಾಗಿದ್ದು, ಹಾಲಿ ಚಾಂಪಿಯನ್ ಭಾರತ (Team india) ಈ ಬಾರಿಯೂ ಉತ್ತಮ ಫಾರ್ಮ್ ನಲ್ಲಿ ಕಾಣಿಸಿಕೊಂಡಿದೆ. ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಕ್ರಿಕೆಟ್ ಶಿಶು ಯು.ಎ.ಇ ವಿರುದ್ಧ ಭಾರತ ಸುಲಭದ ಜನ ಸಾಧಿಸಿದ್ದು ಇಂದು (ಸೆ.15) ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಇಂದಿನ ಪಂದ್ಯದಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು (Pakistan) ಎದುರಿಸಲಿದೆ.

ಹೌದು, ಏಷ್ಯಾ ಕಪ್ ಟೂರ್ನಿ 2025 ರ ಎರಡನೇ ಪಂದ್ಯದಲ್ಲಿ ಭಾರತ ತನ್ನ ಭದ್ಧ ವೈರಿ ಪಾಕಿಸ್ತಾನವನ್ನು ಎದುರಿಸಲಿದೆ. ಹೀಗಾಗಿ ಈ ಒಂದ್ಯ ತೀವ್ರ ರೋಚಕತೆಗೆ ಸಾಕ್ಷಿಯಾಗಲಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯ ವೀಕ್ಷಿಸಲು ತುದಿಗಾಲಲ್ಲಿ ನಿಂತು ಕಾದಿದ್ದಾರೆ.

ಪಹಲ್ಗಾಮ್ ದಾಳಿಯ ನಂತರ ಭಾರತ ಪಕ್ಷಿತನದ ನಡುವೆ ಸಂಪಂದ ಸಂಪೂರ್ಣ ಹಾಳಾಗಿದೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಆಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನದ ಹುಟ್ಟಡಗಿಸಿತ್ತು. ಆ ಬಳಿಕ ಭಾರತ ಮತ್ತು ಪಾಕ್ ನಡುವೆ ನದಿ ನೀರು ಹಂಚಿಕೆ ನಿರ್ಬಂಧ ಸೇರಿದಂತೆ ಭಾರತ ಅನೇಕ ಕಠಿಣ ಕ್ರಮಗಳಿಗೆ ಮುಂದಾಗಿತ್ತು.
ಈ ಎಲ್ಲಾ ಬೆಳವಣಿಗೆಗಳ ಬಳಿಕ ಇದೇ ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಲಿದ್ದು ಇಂದಿನ ಪಂದ್ಯ ಕದನ ಕುತೂಹಲಕ್ಕೆ ಸಾಕ್ಷಿಯಾಗಲಿದೆ.

