ಇಂದು ಪ್ರಧಾನಿ ಮೋದಿ ಸರ್ಕಾರದ ಕೇಂದ್ರ ಸರ್ಕಾರದ ಮೂರನೆ ಅವಧಿಯ ಮೊದಲ ಪೂರ್ಣ ಬಜೇಟ್ ಮಂಡನೆಯಾಗಲಿದೆ.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೇಟ್ ಮಂಡನೆ ಮಾಡಲಿದ್ದಾರೆ.

ಇಂದಿನ ಬಜೇಟ್ ಮೇಲೆ ಹತ್ತು ಹಲವು ನಿರೀಕ್ಷೆಗಳಿದ್ದು, ಈ ಬಾರಿಯ ಬಜೇಟ್ ಗಾತ್ರ 50 ಲಕ್ಷ ಕೋಟಿ ದಾಟುವ ನಿರೀಕ್ಷೆಯಿದೆ.ಸತತ ಎಂಟನೆ ಬಾರಿಗೆ ಬಜೇಟ್ ಮಂಡನೆ ಮಾಡುತ್ತಿರೋ ನಿರ್ಮಲಾ ಸೀತಾರಾಮನ್,ಬೆಳಿಗ್ಗೆ 11 ಗಂಟೆಗೆ ಬಜೇಟ್ ಮಂಡನೆ ಆರಂಭ ಮಾಡಲಿದ್ದಾರೆ.

ಬಜೇಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಬಜೇಟ್ ಗೆ ಅನುಮೋದನೆ ನೀಡಲಿದ್ದು, ಆ ಬಳಿಕ ಬಜೇಟ್ ಮಂಡನೆಯಾಗಲಿದೆ. ಆ ಮೂಲಕ ಒಟ್ಟು ಎಂಟನೆ ಬಾರಿಗೆ ಬಜೇಟ್ ಮಂಡನೆ ಮಾಡಿದ ಖ್ಯಾತಿ ಸಿತಾರಾಮನ್ ಹೆಸರಿಗೆ ಬರಲಿದೆ.

ಈ ಹಿಂದೆ ಮಾಜಿ ಪ್ರಧಾನಿ ಮುರಾರ್ಜಿ ದೇಸಾಯಿ ಹೆಸರಲ್ಲಿ ಅತಿಹೆಚ್ಚು ಬಾರಿ ಬಜೇಟ್ ಮಂಡನೆ ಮಾಡಿರೋ ದಾಖಲೆಯಿತ್ತು.ಒಟ್ಟು 10 ಬಾರಿ ಕೇಂದ್ರ ದೇಸಾಯಿ ಬಜೇಟ್ ಮಂಡನೆ ಮಾಡಿದ್ರೆ, ನಂತರ ಮಾಜಿ ಸಚಿವ ಪಿ ಚಿದಂಬರಂ 9 ಬಾರಿ ಬಜೇಟ್ ಮಂಡಿಸಿದ್ದಾರೆ. ನಂತರದಲ್ಲಿ ಪ್ರಣಬ್ ಮುರ್ಖರ್ಜಿ ಎಂಟು ಬಾರಿ ಬಜೇಟ್ ಮಂಡನೆ ಮಾಡಿದ್ದಾರೆ.
ಈ ಎಲ್ಲರ ಬಳಿಕ 8ನೇ ಬಾರಿಗೆ ಬಜೇಟ್ ಮಂಡನೆ ಮಾಡಿ ತಮ್ಮ ಹೆಸರನ್ನ ಈ ಗುಂಪಿಗೆ ಇಂದು ನಿರ್ಮಲಾ ಸೀತಾರಾಮನ್ ಸೇರ್ಪಡೆ ಮಾಡಲಿದ್ದಾರೆ. 2019 ರಲ್ಲಿ ಮೋದಿ ಸರ್ಕಾರದ ಎರಡನೆ ಅವಧಿಯಲ್ಲಿ ಕೇಂದ್ರ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಜವಾಬ್ದಾರಿ ನಿರ್ವಹಿಸಿದ್ದಾರೆ.