2025ರ ಐಪಿಎಲ್ (Ipl 2025) ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಇಂದು (ಮಾ.೧೭) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy stadium) ಅದ್ಧೂರಿಯಾಗಿ ಆರ್‌ಸಿಬಿ ಅನ್ ಬಾಕ್ಸ್ ಇವೆಂಟ್ (RCB Unboxing) ನಡೆಯಲಿದೆ. ಕಳೆದ ಬಾರಿಯಂತೆ ಈ ಬಾರಿಯೂ 2025 ರ ಐಪಿಎಲ್ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನ್‌ಬಾಕ್ಸ್ ಹಮ್ಮಿಕೊಳ್ಳಲಾಗಿದೆ.

ಇಂದು ಮಧ್ಯಾಹ್ನ 3:30ರಿಂದ ಇವೆಂಟ್ ಆರಂಭವಾಗಲಿದೆ.ಈ ಹಿನ್ನಲೆ ಪೊಲೀಸರು ಅಲರ್ಟ್ ಆಗಿದ್ದು, ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಾಮುತ್ತಾ ಟ್ರಾಫಿಕ್ ನಿಯಂತ್ರಣಕ್ಕೆ ಮಾರ್ಗಸೂಚಿ ಹೊರಡಿಸಿದ್ದು, ಸ್ಟೇಡಿಯಂ ಸುತ್ತಲೂ ವಾಹನಗಳ ಪಾರ್ಕಿಂಗ್ ಗೆ ನಿರ್ಬಂಧ ವಿಧಿಸಲಾಗಿದೆ.

ಇನ್ನು ಈ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಡಿಜೆ ಸಾಂಗ್ ರೈಟರ್ ಮತ್ತು ರೆಕಾರ್ಡ್ ಪ್ರೊಡ್ಯೂಸರ್ ಡಿಜೆ ಮ್ಯಾಗ್, ಟಿಮ್ಮಿ ಟ್ರಂಪೆಟ್, ಮತ್ತು ಕನ್ನಡ ಗಾಯಕರಾದ ಸಂಜಿತ್ ಹೆಗ್ಡೆ ಹಾಗೂ ಐಶ್ವರ್ಯಾ ರಂಗರಾಜನ್ ಭಾಗಿಯಾಗಲಿದ್ದಾರೆ.ಇನ್ನುಳಿದಂತೆ ಕನ್ನಡ ಇಂಡಿಪೆಂಡೆಂಟ್ ಆರ್ಟಿಸ್ಟ್ ಆಲ್ ಓಕೆ, ಸಂಗೀತ ತಂಡಗಳಾದ ಸವಾರಿ ಬ್ಯಾಂಡ್ ನಿಂದ ಕೂಡ ಪರ್ಫಾಮೆನ್ಸ್ ಇರಲಿದೆ.