ಇತ್ತೀಚಿನ ದಿನಗಳಲ್ಲಿ ಕಾಂಟ್ಯಾಕ್ಟ್ ಲೆನ್ಸ್ ಅನ್ನ ಬಳಸುವ್ವವರ ಸಂಖ್ಯೆ ಹೆಚ್ಚಾಗಿದೆ… ಕೆಲವರು ತಮ್ಮ ಕಣ್ಣಿನ ದೃಷ್ಟಿಯ ಸಮಸ್ಯೆ ಇದ್ರೆ ಲೆನ್ಸ್ ಗಳನ್ನ ಬಳಸುವುದು ಸರಿ .ಆದರೆ ಸಾಕಷ್ಟು ಜನ ಫ್ಯಾಶನ್ ಗೋಸ್ಕರ ಲೆನ್ಸ್ ನ ಬಳಸುತ್ತಾರೆ. ಬೆಕ್ಕಿನ ಕಣ್ಣಿನಂತೆ ನಮಗೆ ಬೇಕು, ಐಶ್ವರ್ಯ ರೈಯಂತೆ ಬ್ಲೂ ಐಯ್ಸ್ ನಮ್ಮದಾಗಬೇಕು ಅಂತ ಸಾಕಷ್ಟು ಸೌಂದರ್ಯ ಪ್ರಿಯರು ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳಲು ಲೆನ್ಸ್ ಗಳನ್ನ ಬಳಸೋದು ಕಾಮನ್ ಆಗ್ಬಿಟ್ಟಿದೆ.

ಮದುವೆ ಸಮಾರಂಭದಲ್ಲಿ, ರಿಸೆಪ್ಶನ್ ಗಳಲ್ಲಿ , ಬರ್ತಡೆ ಪಾರ್ಟಿಗಳಲ್ಲಿ, ಟ್ರಿಪ್ಗಳಲ್ಲಿ ಹಾಗೂ ಫೋಟೋಶೂಟ್ ಹೀಗೆ ಯುವಕ ಯುವತಿಯರು ವಿಶೇಷ ಲುಕ್ಕಿಗಾಗಿ ವೆರೈಟಿ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಧರಿಸುತ್ತಾರೆ.ಕಾಂಟಾಕ್ಟ್ ಲೆನ್ಸ್ ಬಳಸಿ ಆಗಿರುವ ಅವಘಡ ಒಂದಲ್ಲ ಎರಡಲ್ಲ ಇತ್ತೀಚಿಗಷ್ಟೇ ನಟಿ ಜಾಸ್ಮಿನ್ ಬಾಸಿನ್ ಧರಿಸಿದ ಕಾಂಟ್ಯಾಕ್ಟ್ ಲೆನ್ಸ್ ನಿಂದ ಎದುರಿಸುವ ಅನಾಹುತ ನಿಮ್ಮೆಲ್ಲರಿಗೂ ಗೊತ್ತೇ ಇದೆ.ಹಾಗಾಗಿ ಈ ರೀತಿಯ ತೊಂದರೆಗಳನ್ನು ತಪ್ಪುಸಲು ಕಾಂಟಾಕ್ಟ್ ಲೆನ್ಸ್ ಬಳಸುವ ಮುನ್ನ ಈ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಉತ್ತಮ.

- ಕಾಂಟಾಕ್ಟ್ ಲೆನ್ಸ್ ಬಳಸುವ ಮುನ್ನ ನಿಮ್ಮ ಕೈಗಳನ್ನ ಚೆನ್ನಾಗಿ ತೊಳೆದು ಕೈಗಳು ಡ್ರೈ ಆದ ನಂತರ ಲೆನ್ಸ್ ಅನ್ನ ಬಳಸುವುದು ಉತ್ತಮ.
- ಲೆನ್ಸ್ ಧರಿಸುವಾಗ ಅಪ್ಪಿತಪ್ಪಿ ಕೈಯಿಂದ ಕೆಳಗೆ ಲೆನ್ಸ್ ಬಿದ್ದರೆ ಅದನ್ನು ಉಪಯೋಗಿಸುವ ಮುನ್ನ ಮತ್ತೆ ಸೊಲ್ಯೂಷನ್ ಬಳಸಿ ಕ್ಲೀನ್ ಮಾಡಿ ನಂತರ ಉಪಯೋಗಿಸಿ.
- ಲೆನ್ಸ್ ಉಪಯೋಗಿಸಿದ ನಂತರ ಅದನ್ನು ಕಣ್ಣುಗಳಿಂದ ತೆಗೆದು ಸ್ಟೋರೇಜ್ ಬಾಕ್ಸ್ ಒಳಗೆ ಹಾಕಿ ನಂತರ ಮೀರಿರುವ ಸೊಲ್ಯೂಷನ್ ಅನ್ನ ಹಾಕಿ ಮುಚ್ಚಿಡುವುದು ಉತ್ತಮ.
- ಲೆನ್ಸ್ ಗಳನ್ನು ಇಡುವಂತಹ ಸ್ಟೋರೇಜ್ ಬಾಕ್ಸ್ ಗಳನ್ನ ವಾರಕ್ಕೆ ಒಮ್ಮೆಯಾದರೂ ನೀರಿನಿಂದ ಚೆನ್ನಾಗಿ ವಾಶ್ ಮಾಡಿ.
- ದೃಷ್ಟಿ ಸಮಸ್ಯೆ ಇದ್ದವರು ಕನ್ನಡಕದ ಬದಲು ಲೆನ್ಸ್ ಅನ್ನು ಬಳಸುವ ಮುನ್ನ ವೈದ್ಯರ ಸಲಹೆಯನ್ನು ಕೇಳುವುದು ಒಳ್ಳೆಯದು.
- ರಾತ್ರಿ ಮಲಗುವಾಗ ಅಪ್ಪಿ ತಪ್ಪಿಯು ಮರೆತು ಲೆನ್ಸ್ ಧರಿಸಿ ಮಲಗಬೇಡಿ ಹಾಗೇ ಮಲಗಿದ್ರೆ ಕಣ್ಣಿನ ಕಾರ್ನ್ಯಾಜ್ ಆಗುವುದು ಖಂಡಿತ.
- ಸಾಕಷ್ಟು ಜನ ಲೆನ್ಸ್ ಗಳನ್ನ ಆನ್ಲೈನ್ ಮೂಲಕ ಖರೀದಿ ಮಾಡುತ್ತಾರೆ ಇದರಿಂದ ಲೆನ್ಸ್ ನ ಗುಣಮಟ್ಟದ ಬಗ್ಗೆ ಅರಿವು ಇರುವುದಿಲ್ಲ ಹಾಗಾಗಿ ಒಳ್ಳೆಯ ಬ್ರಾಂಡೆಡ್ ಲೆನ್ಸ್ ಗಳನ್ನು ಖರೀದಿ ಮಾಡಿ ನಂತರ ಬಳಸಿ.
- ಫ್ಯಾಶನ್ ಗಾಗಿ ಪ್ರತಿದಿನ ಲೆನ್ಸ್ ಗಳನ್ನು ಬಳಸುವುದರಿಂದ ಕಣ್ಣಿಗೆ ಇತರೆ ಸಮಸ್ಯೆಗಳು ಎದುರಾಗುತ್ತದೆ ಹಾಗಾಗಿ ವಾರಕ್ಕೆ ಒಂದು ಅಥವಾ ಎರಡು ಬಾರಿ ಲೆನ್ಸ್ ಗಳನ್ನ ಬಳಸಿ, ನಿಮಗೆ ಪ್ರತಿದಿನ ಲೆನ್ಸ್ ಬಳಸಲೇಬೇಕು ಎಂದಿದ್ದರೆ ಡಾಕ್ಟರ್ ಬಳಿ ಸಲಹೆಯನ್ನ ಪಡೆದುಕೊಳ್ಳಿ.
- ಕೆಲವೊಬ್ಬರಿಗೆ ಲೆನ್ಸ್ ಹಾಕಿದ ಬಳಿ ಕಣ್ಣು ಉರಿ ತುರಿಕೆ ಹಾಗೂ ಕಣ್ಣಲ್ಲಿ ನೀರು ಸೋರುತ್ತದೆ ಇಂಥ ಸಂದರ್ಭದಲ್ಲಿ ನೀವು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.











