
ಬೆಂಗಳೂರು: ‘ನನ್ನ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಹೇಗಾದರೂ ಮಾಡಿ ಜೈಲಿಗೆ ಕಳುಹಿಸಲೇಬೇಕು ಎಂದು ಕುತಂತ್ರ ಹೆಣೆಯಲಾಗುತ್ತಿದ್ದು, ನಾನೂ ಎಲ್ಲದಕ್ಕೂ ಸಿದ್ಧನಾಗಿದ್ದೇನೆ’ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.ಏನೂ ಇಶ್ಯು ಇಲ್ಲದೇ ಇವರು ಸಿಎಂ ವಿರುದ್ಧ ಪಾದಯಾತ್ರೆ ಮಾಡುತ್ತಿದ್ದಾರೆ. ದೋಸ್ತಿ ನಾಯಕರ ಪಾದಯಾತ್ರೆ ಬಗ್ಗೆ ಕುಟುಕಿದ ಡಿಕೆಶಿ ಅವರು, ಪಾದಯಾತ್ರೆಯಲ್ಲಿ ಏನಾದ್ರೂ ಸದ್ದು ಇದೆಯಾ? .. ಸುಮ್ಮನೇ ಹೋಗ್ತಾ ಇದ್ದಾರೆ.

ಸಿಎಂ ಹಾಗೂ ನನ್ನ ವಿರುದ್ಧ ದಾಖಲೆಗಳಿಲ್ಲದೇ ವಿಪಕ್ಷದವರು ಮಾತನಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.ಅತ್ತ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಅಮಿತ್ ಶಾ ಅವರನ್ನು ಭೇಟಿಯಾಗಿ, ನಮ್ಮ ವಿರುದ್ಧ ಸುಳ್ಳು ಆರೋಪಗಳ ಪಟ್ಟಿಯನ್ನು ನೀಡಿ, ಒಳಗೆ ಹಾಕಿಸಲು ಸಂಚು ರೂಪಿಸುತ್ತಿದ್ದಾರೆ. ದೇವೇಗೌಡರು ಅವರ ಕುಟುಂಬದ ರಕ್ಷಣೆ ಮಾಡಬೇಕಲ್ವಾ ಎಂದು ಡಿಕೆಶಿ ವ್ಯಂಗ್ಯವಾಡಿದ್ದಾರೆ.











