• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸೆರೆಮನೆಯಲ್ಲಿದ್ರೂ ದರ್ಶನ್‌ ಹೆಸರು ಹಾಳು ಮಾಡಲು ನಡೆಯಿತಾ ಹುನ್ನಾರ..?

ಪ್ರತಿಧ್ವನಿ by ಪ್ರತಿಧ್ವನಿ
December 10, 2025
in Top Story, ಕರ್ನಾಟಕ, ಸಿನಿಮಾ
0
ಸೆರೆಮನೆಯಲ್ಲಿದ್ರೂ ದರ್ಶನ್‌ ಹೆಸರು ಹಾಳು ಮಾಡಲು ನಡೆಯಿತಾ ಹುನ್ನಾರ..?
Share on WhatsAppShare on FacebookShare on Telegram

ಅತ್ತ ರೇಣುಕಾಸ್ವಾಮಿ (Renukaswamy)  ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌(Darshan), ಕತ್ತಲೆ ಕೋಣೆಯೊಳಗೆ ಜಾಮೀನಿಗಾಗಿ ಎದುರು ನೋಡುತ್ತಿದ್ದರೆ, ಇತ್ತ ಸೆರೆ ಮನೆಯಲ್ಲಿರುವ ದರ್ಶನ್‌ ಮೇಲೆಯೇ ಕಾಣದ ಕೈಗಳು ಷಡ್ಯಂತ್ರ ಮಾಡುತ್ತಿವೆಯಾ ಎನ್ನುವ ಅನುಮಾನ ದರ್ಶನ್‌ ಅಭಿಮಾನಿಗಳಿಗೆ ಮೂಡುತ್ತಿದೆ. ಇದಕ್ಕೆ ನಿದರ್ಶನ ಎನ್ನುವಂತೆ ಒಂದಾದ ಮೇಲೊಂದು ಘಟನೆ ನಡೆಯುತ್ತಲೇ ಇದೆ.

ADVERTISEMENT
Darshan Devil: ದರ್ಶನ್‌ ಅನುಪಸ್ಥಿತಿಯಲ್ಲೂ ʼಡೆವಿಲ್ʼ ಭರ್ಜರಿ ಹವಾ...ಅಡ್ವಾನ್ಸ್ ಟಿಕೆಟ್‌ ಬುಕಿಂಗ್‌ನಲ್ಲೂ ಹಾವಳಿ.!

ಮೊದಲು ಪರಪ್ಪನ ಅಗ್ರಹಾರದಲ್ಲಿದ್ದ ದರ್ಶನ್‌ ಫೋಟೋ ವೈರಲ್‌ ಆಗಿದ್ದು, ಆ ಬಳಿಕ ಬೆಂಗಳೂರಿನಿಂದ ದರ್ಶನ್‌ ಅನ್ನು ಬಳ್ಳಾರಿಗೆ ಶಿಫ್ಟ್‌ ಮಾಡಲಾಯಿತು. ಬಳ್ಳಾರಿ ಜೈಲಿನಲ್ಲಿ ಒದ್ದಾಡ್ತಿದ್ದ ದರ್ಶನ್‌ಗೆ ಕರ್ನಾಟಕ ಹೈಕೋರ್ಟ್‌ ಜಾಮೀನು ನೀಡಿ ಬಿಡುಗಡೆ ಭಾಗ್ಯ ನೀಡಿತು. ಹೊರ ಬಂದ ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ದರ್ಶನ್‌ ಮತ್ತೆ ಜೈಲು ಸೇರುವಂತಾಯಿತು.

ಜಾಮೀನು ಪಡೆದು ಹೊರ ಬಂದಿದ್ದ ದರ್ಶನ್‌ ಡಿವಿಲ್‌ ಸಿನಿಮಾದ ಬಾಕಿ ಉಳಿದ ಕೆಲಸಗಳನ್ನು ಮುಗಿಸಿಕೊಟ್ಟಿದ್ದರು. ಹೀಗಾಗಿ ಡೆವಿಲ್‌ ಚಿತ್ರತಂಡ ಚಿತ್ರದ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಸಿನಿಮಾ ಭರ್ಜರಿ ಬಿಡುಗಡೆಗೆ ಪ್ಲಾನ್‌ ಮಾಡಿದೆ. ನಾಳೆ ಅಂದರೆ ಡಿಸೆಂಬರ್‌ ೧೧ ಡೆವಿಲ್‌ ಸಿನಿಮಾ ರಾಜ್ಯಾದ್ಯಂತ ಅಬ್ಬರಿಸಲಿದೆ. ಈಗಾಗಲೇ ಜನಪ್ರಿಯ ಚಿತ್ರಮಂದಿರಗಳಲ್ಲಿ ಡೆವಿಲ್‌ ಸ್ವಾಗತಿಸಲು ಭರ್ಜರಿ ತಯಾರಿ ಮಾಡಿದ್ದು, ದರ್ಶನ್‌ ಅನುಪಸ್ಥಿತಿಯಲ್ಲಿ ಅಭಿಮಾನಿಗಳೇ ಸಿನಿಮಾ ಗೆಲ್ಲಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇನ್ನು ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಕೂಡ ಡೆವಿಲ್‌ಗೆ ಸಾಥ್‌ ನೀಡುತ್ತಿದ್ದು, ಪತಿ ಹಾಗೂ ಸೆಲೆಬ್ರೆಟಿಗಳ ನಡುವೆ ಸೇತುವೆಯಾಗಿದ್ದಾರೆ.

Darshan Fans : ದರ್ಶನ್‌-ಸುದೀಪ್‌ ಒಂದಾಗೋಕೆ ಅವ್ನು ಬಿಡ್ತಿಲ್ಲ #pratidhvani #darshanthoogudeepa #kichcha

ಡೆವಿಲ್‌ ಚಿತ್ರತಂಡದ ಪ್ರಮೋಷನ್‌, ಸೆಲೆಬ್ರೆಟಿಗಳ ಶತಪ್ರಯತ್ನ , ವಿಜಯಲಕ್ಷ್ಮಿ ಸಾಥ್‌ನಿಂದ ಡೆವಿಲ್‌ ಗೆಲುವಿನ ಭರವಸೆಯಲ್ಲಿದ್ದರೇ, ಇದೇ ಸಮಯದಲ್ಲಿ ನಟ ದರ್ಶನ್‌ ಹೆಸರು ಕೆಡಿಸುವ ಪ್ರಯತ್ನಗಳು ನಡೆಯಿತಾ ಎನ್ನುವ ಪ್ರಶ್ನೆ ಕೆಲ ದರ್ಶನ್‌ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಕೂಡ ಇದೆ. ಕಳೆದ ಕೆಲ ದಿನಗಳಿಂದ ದರ್ಶನ್‌ ಜೈಲಿನಲ್ಲಿ ತಮ್ಮ ಸಹ ಕೈದಿಗಳಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎನ್ನುವ ಸುದ್ದಿ ಏಕಾಏಕಿ ಹರಿದಾಡಿತ್ತು. ಈ ಸುದ್ದಿಯ ಬಗ್ಗೆ ಸ್ವತಃ ವಿಜಯಲಕ್ಷ್ಮಿ ಅವರೇ ಸ್ಪಷ್ಟನೆ ನೀಡಿದ್ದು, ನಾನೇ ಜೈಲಿಗೆ ಹೋಗಿ ಎಲ್ಲರನ್ನೂ ವಿಚಾರಿಸಿದ್ದೇನೆ. ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದರು.

Rahul Gandhi: ಜ್ಞಾನೇಶ್ ಕುಮಾರ್ ಆಯ್ಕೆಯ ಸೀಕ್ರೆಟ್ ಬಿಚ್ಚಿಟ್ಟ ರಾಹುಲ್ ಗಾಂಧಿ..! #Brazilianwoman

ಈ ಸುದ್ದಿ ತಣ್ಣಗಾಗುತ್ತಿದ್ದಂತೆ ಇದೀಗ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಸಮಾಧಿ ನಾಮಫಲಕ ಧ್ವಂಸ ಮಾಡಿರುವ ಸುದ್ದಿ ಹೊರ ಬಿದ್ದಿದೆ. ರುಧ್ರ ಭೂಮಿ ಬಳಿ ಲೇಔಟ್ ನಿರ್ಮಾಣದ ವೇಳೆ ಸಮಾಧಿಗೆ ಧಕ್ಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲೇ ದರ್ಶನ್‌ ಜೈಲು ಸೇರಿರುವುದರಿಂದ ಹಾಗೂ ಡೆವಿಲ್‌ ರಿಲೀಸ್‌ಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವ ಸಮಯದಲ್ಲಿ ಇಂತಹ ಘಟನೆ ನಡೆದಿರುವುದರಿಂದ ದರ್ಶನ್‌ ಹೆಸರು ಹಾಳು ಮಾಡಲು ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿರಬಹುದಾ..? ಎನ್ನುವ ಅನುಮಾನವನ್ನು ದರ್ಶನ್‌ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ರೀತಿ ಕಾಣದ ಕೈಗಳು ಜೈಲಿನಲ್ಲಿರುವ ದರ್ಶನ್‌ ಮೇಲೆಯೇ ಷಡ್ಯಂತ್ರ ಮಾಡುತ್ತಿವೆಯಾ ಎನ್ನುವ ಅನುಮಾನ ಹುಟ್ಟಿಕೊಂಡಿದೆ.

Tags: actor darshan arrestDarshanDevilRenukaswamy Murder Case
Previous Post

ಡೇಟಾ ಇಲ್ಲದ ಮೊಬೈಲ್ ಕೊಟ್ಟು ಪೊಲೀಸರಿಗೆ ಯಾಮಾರಿಸಿದ್ರಾ ಧನ್ವೀರ್..?

Next Post

ಚಿತ್ರೀಕರಣ ಮುಗಿಸಿದ ʼಮಹಾಕವಿʼ: ವಿಭಿನ್ನ ಪಾತ್ರದಲ್ಲಿ ಕಿಶೋರ್‌, ಅನುಷಾ ರೈ

Related Posts

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?
Top Story

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

by ಪ್ರತಿಧ್ವನಿ
May 1, 2026
0

ಬೆಂಗಳೂರು : ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಪ್ರಸಿದ್ಧಿ ಪಡೆದಿರುವ ನಟಿಗೆ ನಿರ್ಮಾಪಕರೊಬ್ಬರು ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ. ಧಾರವಾಹಿಯಲ್ಲಿ ನಟಿಸಿದ ನಟಿಗೆ ಸಂಭಾವನೆ ನೀಡದ ನಿರ್ಮಾಪಕರಿಂದ ವಂಚನೆ...

Read moreDetails
ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

May 1, 2026
ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

May 1, 2026
ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

May 1, 2026
“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

May 1, 2026
Next Post
ಚಿತ್ರೀಕರಣ ಮುಗಿಸಿದ ʼಮಹಾಕವಿʼ: ವಿಭಿನ್ನ ಪಾತ್ರದಲ್ಲಿ ಕಿಶೋರ್‌, ಅನುಷಾ ರೈ

ಚಿತ್ರೀಕರಣ ಮುಗಿಸಿದ ʼಮಹಾಕವಿʼ: ವಿಭಿನ್ನ ಪಾತ್ರದಲ್ಲಿ ಕಿಶೋರ್‌, ಅನುಷಾ ರೈ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada