ರಾಜ್ಯ ವಿಧಾನ ಪರಿಷತ್ನ 25 ಸ್ಥಾನಗಳಿಗೆ ಡಿ.10ರಂದು ಚುನಾವಣೆ ನಡೆಯಲಿದ್ದು, ನಾಳೆಯೇ ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಇಂದು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಿದೆ. ಸಂಜೆ ವೇಳೆ ಅಧಿಕೃತವಾಗಿ ಪಟ್ಟಿ ರಿಲೀಸ್ ಮಾಡಲಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಬಳಿಕ ರಾಜ್ಯ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸುರ್ಜೇವಾಲ ಕರೆ ಮಾಡಿ ಮಾತನಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಪಟ್ಟಿ ರಿಲೀಸ್ ಮಾಡುವ ಹಿನ್ನೆಲೆ ಸಿದ್ದರಾಮಯ್ಯರಿಂದ ಸಲಹೆ ಪಡೆದಿದ್ದಾರೆ. ಗೊಂದಲವಿದ್ದ ಕ್ಷೇತ್ರದ ಬಗ್ಗೆ ಸಿದ್ದರಾಮಯ್ಯ ಅವರು ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಅಭ್ಯರ್ಥಿ ಆಯ್ಕೆ ಕಸರತ್ತು!
ಕಾಂಗ್ರೆಸ್ ಎಂಎಲ್ಸಿ ಅಭ್ಯರ್ಥಿಗಳ ಟಿಕೆಟ್ ಫೈನಲ್ ಆಗಿದೆ. ಸದ್ಯದ ಮಾಹಿತಿ ಪ್ರಕಾರ ಹಾಲಿ ಎಂಎಲ್ಸಿ ಎಸ್. ಆರ್.ಪಾಟೀಲ್ ಟಿಕೆಟ್ ಕೈತಪ್ಪಿದೆ. ಹಾಲಿ ಎಂಎಲ್ಸಿ ಮುಂಡರಗಿ ನಗರಾಜ್ ಗೂ ಟಿಕೆಟ್ ಸಿಕ್ಕಿಲ್ಲ. ಮೈಸೂರು ಹಾಲಿ ಎಂಎಲ್ಸಿ ಧರ್ಮಸೇನಗೆ ನಿರಾಶೆಯಾಗಿದ್ದು, ಪ್ರೊ. ತಿಮ್ಮಯ್ಯಗೆ ಟೆಕೆಟ್ ನೀಡಲಾಗಿದೆ. ಮಂಡ್ಯದಲ್ಲಿ ವಿರೋಧದ ನಡುವೆಯೂ ದಿನೇಶ್ ಗೆ ಟಿಕೆಟ್ ನೀಡಲಾಗಿದೆ. ಎಸ್.ಎಂ.ಕೃಷ್ಣ ಹಾಗೂ ಎಸ್ ಟಿ ಸೋಮಶೇಖರ್ ಶಿಷ್ಯ ದಿನೇಶ್ಗೆ ಟಿಕೆಟ್ ನೀಡುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ಲಾನ್ ವರ್ಕೌಟ್ ಆಗಿದೆ. ವಿರೋಧದ ನಡುವೆಯೂ ಬಿಜೆಪಿಯ ಎ ಮಂಜು ಪುತ್ರ ಮಂಥರ್ ಗೌಡಗೆ ಕೊಡಗು ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿದೆ. ಇಲ್ಲೂ ಡಿ ಕೆ ಶಿವಕುಮಾರ್ ಸಫಲರಾಗಿದ್ದಾರೆ. ಫೈನಲ್ ಆಗಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಹೀಗಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
- ಬೆಂಗಳೂರು ನಗರ : ಕೆಜಿಎಫ್ ಬಾಬು
- ಬೆಂಗಳೂರು ಗ್ರಾಮಾಂತರ : ರವಿ
- ಕಲಬುರಗಿ : ಶಿವಾನಂದ ಪಾಟೀಲ್ ಮರ್ತೂರು
- ಬೀದರ್ : ಭೀಮೂಗೌಡ ಪಾಟೀಲ್
- ವಿಜಯಪುರ: ಸುನಿಲ್ ಗೌಡ ಪಾಟೀಲ್
- ಚಿಕ್ಕಮಗಳೂರು : ಗಾಯತ್ರಿ ಶಾಂತೇಗೌಡ
- ಕೋಲಾರ : ಅನಿಲ್ ಕುಮಾರ್
- ಮಂಡ್ಯ : ದಿನೇಶ್
- ಮೈಸೂರು : ತಿಮ್ಮಯ್ಯ
- ಹಾಸನ : ಶಂಕರಪ್ಪ
- ಮಂಗಳೂರು : ಮಂಜುನಾಥ ಭಂಡಾರಿ
- ಕಾರವಾರ : ಭೀಮಣ್ಣ ನಾಯ್ಕ
- ರಾಯಚೂರು : ಶರಣೇಗೌಡ ಬಯ್ಯಾಪುರ
- ಶಿವಮೊಗ್ಗ : ಪ್ರಸನ್ನಕುಮಾರ್
- ಬಳ್ಳಾರಿ : ಕೊಂಡಯ್ಯ
- ಬೆಳಗಾವಿ : ಚನ್ನರಾಜ್
- ಗದಗ : ಎಸ್.ಎಂ. ಪಾಟೀಲ್
- ಹಾವೇರಿ,ಧಾರವಾಡ- ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್
- ಉತ್ತರ ಕನ್ನಡ- ಸಾಯಿ ಗಾಂವ್ಕರ್
- ದಕ್ಷಿಣ ಪದವೀಧರ ಕ್ಷೇತ್ರ- ಜಿ ಮಾದೇಗೌಡ ಪುತ್ರ ಮಧು ಮಾದೇಗೌಡಗೆ ಟಿಕೆಸ್
- ಚಿತ್ರದುರ್ಗ- ದಾವಣಗೆರೆ – ಸೋಮಶೇಖರ್
- ಹಾಸನ- ಎಂ.ಶಂಕರ್
ಕರ್ನಾಟಕ ವಿಧಾನಮಂಡಲದ ಮೇಲ್ಮನೆ ವಿಧಾನ ಪರಿಷತ್ಗೆ ಚುನಾವಣೆ ಘೋಷಣೆಯಾಗಿದೆ.
2022ರ ಜನವರಿ 5ರಂದು 25 ಪರಿಷತ್ ಸದಸ್ಯರ ಅಧಿಕಾರ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ 10ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ ನಡೆದು, ಫಲಿತಾಂಶ ಹೊರ ಬೀಳಲಿದೆ. ನವೆಂಬರ್ 16ರಂದು ಅಧಿಸೂಚನೆ ಹೊರಡಿಸಲಾಗಿದೆ. ನವೆಂಬರ್ 23 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿರುತ್ತದೆ.