ಎರಡೂವರೆ ದಶಕಗಳಿಂದ ಗುಜರಾತ್‌ನಲ್ಲಿ ಅಧಿಕಾರದಿಂದ ದೂರವೇ ಉಳಿದಿರುವ ಪ್ರತಿಪಕ್ಷ ಕಾಂಗ್ರೆಸ್ ‘ದ್ವಾರಕಾ ಘೋಷಣೆ’ (Dwarka Declaration) ಯನ್ನು ಪ್ರಕಟಿಸುವ ಮೂಲಕ ಗುಜರಾತ್ ರಾಜ್ಯದ ಬಗ್ಗೆ ತನ್ನ ಅಭಿವೃದ್ಧಿಯ ದೃಷ್ಟಿಕೋನವನ್ನು ಪ್ರದರ್ಶಿಸಿದೆ.
ವರ್ಷಾಂತ್ಯಕ್ಕೆ ಗುಜರಾತ್ (Gujarat) ರಾಜ್ಯ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದೆ. ಗುಜರಾತಿನ ದ್ವಾರಕಾದಲ್ಲಿ ಮೂರು ದಿನಗಳ ಕಾಲ ನಡೆದ ಚಿಂತನ ಶಿಬಿರದ ಕೊನೆಯ ದಿನ ‘ದ್ವಾರಕಾ ಘೋಷಣೆ’ ಘೋಷಿಸುವ ಮೂಲಕ ಚುನಾವಣಾ ವೇದಿಕೆ ಸಿದ್ಧಮಾಡಿಕೊಂಡಿದೆ.
ಶಿಬಿರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮಾತನಾಡುತ್ತ, “ದೂರದೃಷ್ಟಿಯೊಂದಿಗೆ ನಾವೆಲ್ಲ ಜನಸಾಮಾನ್ಯರ ಬಳಿಗೆ ಹೋಗಬೇಕೆಂದು ಪಕ್ಷದ ಕಾರ್ಯಕರ್ತರಿಗೆ ಹುರಿದುಂಬಿಸಿದರು.
ಗುಜರಾತ್ ಕಾಂಗ್ರೆಸ್ ವಕ್ತಾರ ಮನೀಶ್ ದೋಷಿ ʼದಿ ವೀಕ್ʼ (THE WEEK ) ನೊಂದಿಗೆ ಪ್ರತಿಕ್ರಿಯಿಸಿ, ಸಭೆಯಲ್ಲಿ ನಡೆದ ಚರ್ಚೆಗಳ ಆಧಾರದ ಮೇಲೆ ಈ ಘೋಷಣೆ ಮಾಡಲಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.
500 ಕ್ಕೂ ಹೆಚ್ಚು ಕಾಂಗ್ರೆಸ್ಸಿನ ಪ್ರಮುಖ ಕಾರ್ಯಕರ್ತರು ಭಾಗಿಯಾಗಿ ಪಕ್ಷದ ಸಿದ್ಧಾಂತ, ಪ್ರಸ್ತುತ ಸಮಸ್ಯೆಗಳು, ಪಕ್ಷದ ಕಾರ್ಯವೈಖರಿ ಮತ್ತು ಮುಂದಿನ ಮಾರ್ಗಗಳ ಕುರಿತು ಚರ್ಚಿಸಿದರು ಸಭೆಯಲ್ಲಿ ಚರ್ಚಿಸಿದ್ದಾರೆ. ಇಲ್ಲಿ ಭಾಗವಹಿಸಿದವರನ್ನು ಹಲವಾರು ಗುಂಪುಗಳಾಗಿ ವಿಂಗಡಿಸಿ, ಒಂದೊಂದು ಗುಂಪಿಗೂ ಒಂದೊಂದು ಜವಾಬ್ದಾರಿ ನೀಡಲಾಗಿದೆ.
ರೂ. 500ಕ್ಕಿಂತ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್!
‘ದ್ವಾರಕಾ ಘೋಷಣೆ’ ಯಲ್ಲಿ ರೂ. 500ಕ್ಕಿಂತ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ನೀಡುವುದು, (Giving gas cylinders for less than Rs 500) ಹೆಚ್ಚಿನ ತೆರಿಗೆ ಮನ್ನಾ, ಕೃಷಿ ಸಾಲ ಮನ್ನಾ, ಕೋವಿಡ್-19ಕ್ಕೆ (Covid-19 ) ಬಲಿಯಾದವರ ಕುಟುಂಬಕ್ಕೆ ₹4 ಲಕ್ಷ ಪರಿಹಾರ ನೀಡುವುದು ಈ ಘೋಷಣೆಯ ಪ್ರಮುಖ ಅಂಶಗಳಾಗಿವೆ.
ಶಿಕ್ಷಣದ ಖಾಸಗೀಕರಣದಿಂದ ಪೋಷಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಕಾಂಗ್ರೆಸ್ ʼಮಹಾತ್ಮಾ ಗಾಂಧಿ ಮಾದರಿ ಶಾಲೆʼ (Mahatma Gandhi Model School) ಯನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದೆ.
ರೈತರ ವಿದ್ಯುತ್ ಬಿಲ್‌ಗಳನ್ನು (electricity bills) ಅರ್ಧದಷ್ಟು ಕಡಿತಗೊಳಿಸಲಾಗುವುದು ಮತ್ತು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿರ್ಧರಿಸಲಾಗುವುದು ಎಂದು ಕಾಂಗ್ರೆಸ್ ತಿಳಿಸಿದೆ.
ನಗರ ಪ್ರದೇಶಗಳಲ್ಲಿ ವಾರ್ಡ್‌ವಾರು ʼತ್ರಿರಂಗ ಕ್ಲಿನಿಕ್ʼ (Triranga Clinics) ಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಣೆಯಲ್ಲಿ ತಿಳಿಸಲಾಗಿದೆ. ಈ ಕ್ಲಿನಿಕ್ ಗಳಲ್ಲಿ ವಿವಿಧ ಕಾಯಿಲೆಯ ಚಿಕಿತ್ಸೆಯೂ ಲಭ್ಯವಾಗುವಂತೆ ನೋಡಿಕೊಳ್ಳುವುದು ಕ್ಲಿನಿಕ್‌ನ ಕಲ್ಪನೆಯಾಗಿದೆ. ಈ ಮೂಲಕ ನಾಗರಿಕ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ಬಲಪಡಿಸಲಾಗುವ ಗುರಿಯನ್ನು ನೀಡಿದ್ದಾರೆ.
10 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ
ಮುಖ್ಯವಾಗಿ ‘ದ್ವಾರಕಾ ಘೋಷಣೆ’ ಯಲ್ಲಿ 10 ಲಕ್ಷ ಉದ್ಯೋಗ (10 lakh jobs) ಸೃಷ್ಟಿಸುವ ಭರವಸೆಯನ್ನು ನೀಡಲಾಗಿದೆ. ವಿವಿಧ ಸರ್ಕಾರಿ ಇಲಾಖೆಗಳಲ್ಲಿ 5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧಿಷ್ಠ ಸಮಯ ನಿಗಧಿಮಾಡಲಾಗಿದೆ.
ಬರುವ ದಿನಗಳಲ್ಲಿ ಪಕ್ಷದ ನೀತಿಗಳನ್ನು ಜನಸಾಮಾನ್ಯರ ಮುಂದಿಡಲಾಗುವುದು ಎಂದು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಠಾಕೂರ್ (Jagdish Thakor ) ವಿವರಿಸಿದ್ದು, ಸ್ವಚ್ಛ ಮತ್ತು ಸಮರ್ಥ ಸರಕಾರ ನೀಡಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.
ಒಟ್ಟಾರೆಯಾಗಿ ಕಾಂಗ್ರೆಸ್ ಎರಡೂವರೆ ದಶಕದಿಂದ ಅಧಿಕಾರ ಕೇಂದ್ರದಿಂದ ದೂರ ಉಳಿದು, ಈ ಭಾರೀ ಹೇಗಾದರೂ ಮಾಡಿ ಗುಜರಾತಿನ ಅಧಿಕಾರದ ಗದ್ದುಗೆಗೆ ಏರಲು ಈಗಿನಿಂದಲೇ ಯೋಜನೆ ಹಾಕಿಕೊಂಡಂತೆ ಕಾಣುತ್ತಿದೆ. ‘ದ್ವಾರಕಾ ಘೋಷಣೆ’ ಕಾಂಗ್ರೆಸ್ಸಿಗೆ ಲಾಭ ತಂದುಕೊಡುತ್ತಾ ಎಂಬುದನ್ನು ಕಾದು ನೋಡಬೇಕು.