• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ: ಸಂತೋಷ್ ಲಾಡ್ ಸಂತಸ

ಪ್ರತಿಧ್ವನಿ by ಪ್ರತಿಧ್ವನಿ
November 23, 2024
in Top Story, ಅಂಕಣ, ಅಭಿಮತ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿದೇಶ, ವಿಶೇಷ, ಶೋಧ
0
Share on WhatsAppShare on FacebookShare on Telegram

ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ: ವೈಯಕ್ತಿಕ ಟೀಕೆಗಿಂತ, ಕೆಲಸ ಮುಖ್ಯ

ಅಭಿವೃದ್ಧಿ ಮಾಡಿದ್ದೇವೆ, ಜನ ಆಶೀರ್ವಾದ ಮಾಡಿದ್ದಾರೆ: ಸಂತೋಷ್‌ ಲಾಡ್‌ (Santosh Lad)

ADVERTISEMENT

ಚುನಾವಣೆಯಲ್ಲಿ ವೈಯಕ್ತಿಕ ಟೀಕೆಗಿಂತ ಅಭಿವೃದ್ಧಿ ಪರ ನಾವು ಮಾತನಾಡಿದ್ದೇವೆ. ಅದಕ್ಕೆ ಜನ ಆಶೀರ್ವಾದ ಮಾಡಿದ್ದಾರೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ (Minister Santosh Lad) ಹೇಳಿದರು.

ಇತ್ತೀಚೆಗೆ ನಡೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳೇ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ತಮ್ಮ ಅಧಿಕೃತ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಹಣ ಬಲ, ಸರ್ಕಾರದ ಬಲ ಬಳಸಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ ಎಂಬ ವಿರೋಧಪಕ್ಷಗಳ ಆರೋಪಕ್ಕೆ ಪ್ರತ್ಯುತ್ತರ ನೀಡಿದ ಲಾಡ್‌ ಅವರು, ರಾಜಕೀಯದಲ್ಲಿ ಟೀಕೆ ಹೊಸದಲ್ಲ. ಆದರೆ ನಾವು ಯಾರ ವಿರುದ್ಧವೂ ಟೀಕೆ ಮಾಡಿಲ್ಲ. ಸರ್ಕಾರ ಜನರಿಗಾಗಿ ಕೆಲಸ ಮಾಡಿದೆ. ಅದನ್ನೇ ಪ್ರಚಾರದಲ್ಲಿ ಹೇಳಿದೆವು. ಅದಕ್ಕೆ ನಮಗೆ ಜನರೂ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು.

Santhosh Lad: ಬಿಜೆಪಿ ಹೇಳಿಕೆಗೆ ಸಚಿವ ಸಂತೋಷ್‌ ಲಾಡ್‌ ಏನಂದ್ರು ಗೊತ್ತಾ..! #sandur #bjpjdsalliance #bellary

ಮೂರು ಕ್ಷೇತ್ರಗಳಲ್ಲಿನ ಗೆಲುವು ನಾಯಕರು, ಮುಖಂಡರು, ಕಾರ್ಯಕರ್ತರ ಗೆಲುವು. ನಮ್ಮ ಸರ್ಕಾರ ನೀಡಿದ ಗ್ಯಾರಂಟಿಗೆ ಸಿಕ್ಕ ಗೆಲುವು. ಇದು ಬಡವರ ಗೆಲುವು ಎಂದು ವಿಶ್ಲೇಷಿಸಿದರು.

ನಾವು ನಮ್ಮ ಸರ್ಕಾರ ಅಭಿವೃದ್ಧಿ ಬಗ್ಗೆ ಜನರಿಗೆ ತಿಳಿಸಿದೆವು. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವನ್ನು ಜನ ಒಪ್ಪಿಕೊಂಡಿದ್ದಾರೆ ಎಂಬುದು ಈ ಫಲಿತಾಂಶದಿಂದ ತಿಳಿದಿದೆ. ನಮ್ಮ ಮತದಾರರು ಪ್ರಜ್ಞಾವಂತರು. ಅವರು ಬಿಜೆಪಿಯ ಸುಳ್ಳುಗಳನ್ನು ನಂಬಲಿಲ್ಲ. ಆದ್ದರಿಂದ ಕಾಂಗ್ರೆಸ್‌ ಕೈ ಹಿಡಿದರು ಎಂದರು.

ಈ ಉಪ ಚುನಾವಣೆಯಲ್ಲಿ ಮುಡಾ ಹಗರಣ(Muda Scam), ವಾಲ್ಮೀಕಿ ಹಗರಣ (Valmiki Scam) ಹಾಗೂ ವಕ್ಫ್‌ ವಿವಾದ ಯಾವುದನ್ನೂ ಲೆಕ್ಕಿಸದೆ ಜನ ಕಾಂಗ್ರೆಸ್‌ ಬೆಂಬಲಿಸಿದ್ದಾರೆ. ಇಲ್ಲಿ ಯಾವುದೇ ಮ್ಯಾಜಿಕ್‌ ನಡೆದಿಲ್ಲ. ಎಲ್ಲಾ ವಿವಾದ ಮತ್ತು ಹಗರಣಗಳನ್ನು ಬಿಜೆಪಿ ಮತ್ತು ಜೆಡಿಎಸ್‌ ರಾಜಕೀಯಗೊಳಿಸಿದರು. ಅದರಿಂದ ಅವರಿಗೆ ನಷ್ಟವಾಯಿತೇ ಹೊರತು ಲಾಭವಾಗಲಿಲ್ಲ. ವಾಲ್ಮೀಕಿ ಹಗರಣದಲ್ಲಿ ತಪ್ಪಾಗಿದೆ. ತನಿಖೆ ನಡೆದಿದೆ. ಕೆಲವೇ ದಿನಗಳಲ್ಲಿ ಸತ್ಯ ಹೊರಬರಲಿದೆ ಎಂದು ಹೇಳಿದರು.

ಅಭಿವೃದ್ಧಿ ಮಾಡಿ ಓಟು ಕೇಳಿದರೆ ಪ್ರಜಾಪ್ರಭುತ್ವಕ್ಕೆ ಒಳ್ಳೆಯದು. ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಬಡವರು ಮತ್ತು ರೈತರಿಗೆ ಹೇಳಿಕೊಳ್ಳುವ ಯಾವುದೇ ಕಾರ್ಯಕ್ರಮ ಮಾಡಲಿಲ್ಲ. ಅವರಿಗೆ ಹೇಳಿಕೊಳ್ಳಲು ಏನೂ ಇಲ್ಲ. ಹಾಗಾಗಿ ಅವರು ಟೀಕೆ ಮಾಡುತ್ತಾರೆ. ಸೋತಾಗ ಏನು ಬೇಕಾದರೂ ಹೇಳಬಹುದು ಎಂದು ಹೇಳಿದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ (Maharastra Election) ಬಗ್ಗೆ ಮಾತನಾಡಿದ ಸಂತೋಷ್‌ ಲಾಡ್‌ ಅವರು, ಪ್ರಜಾಪ್ರಭುತ್ವದಲ್ಲಿ ಒಂದೇ ಪಕ್ಷದ ಸರ್ಕಾರ ಹೆಚ್ಚು ದಿನ ಅಧಿಕಾರದಲ್ಲಿರಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಆಳಿದರೂ ಅದಕ್ಕೆ ತನ್ನದೇ ಆದ ನೈತಿಕತೆ ಇರಬೇಕು. ಯಾವುದರ ಮೇಲೆ ಮತ ಕೇಳುತ್ತಾರೆ. ಮಾನದಂಡ ಏನು ಎಂಬುದು ತಿಳಿಯಬೇಕು ಎಂದರು.

ಮಹಾರಾಷ್ಟ್ರದಲ್ಲಿ ಆರು ತಿಂಗಳ ಹಿಂದೆ ಮೋದಿ ಬೇಡ ಎಂದು ಜನ ಓಟು ಹಾಕಿದ್ದರು. ಈಗ ಮತ್ತೆ ಮೋದಿಗೆ ಮತ ಹಾಕಿದ್ದಾರೆ. ಹಾಗಾದರೆ ಏನು ಬದಲಾವಣೆ ಆಯಿತು. ಇದನ್ನು ದೇಶದ ಭವಿಷ್ಯದ ದೃಷ್ಟಿಯಿಂದ ಯೋಚನೆ ಮಾಡಬೇಕು. ರಾಜಕೀಯ ಪಕ್ಷಗಳನ್ನು ಬದಿಗಿಟ್ಟು ಯಾಕೆ ಮತದಾರರು ಓಟು ಹಾಕುತ್ತಾ ಇದ್ದಾರೆ ಎಂಬುದನ್ನು ಅಧ್ಯಯನ ಮಾಡಬೇಕಿದೆ ಎಂದರು.

ಇಂತಹ ರಾಜಕೀಯ ಬೆಳವಣಿಗೆಗಳು ನಿಜಕ್ಕೂ ಎಚ್ಚರಿಕೆಯ ಗಂಟೆ. ಯಾವುದೇ ಮಾಧ್ಯಮಗಳೂ ಸಹ ಇಂತಹ ಫಲಿತಾಂಶ ಬರುತ್ತೆ ಎಂದು ಊಹೆ ಮಾಡಿರಲಿಲ್ಲ. ಮತದಾರರು ಯಾಕೆ ಹೀಗೆ ಮಾಡಿದರು ಎಂಬುದರ ವಿಶ್ಲೇಷಣೆ ಆಗಬೇಕು ಎಂದರು.

ಮಧ್ಯಪ್ರದೇಶದಲ್ಲಿ ಶೇಕಡಾ ಎಂಟರಷ್ಟು ಮತ ಪ್ರಮಾಣ ಜಾಸ್ತಿಯಾಗಿದೆ. ಯಾಕೆ ಆಗಿದೆ ಎಂಬುದರ ಬಗ್ಗೆ ತಿಳಿಯಬೇಕು. ಯಾವುದೇ ರಾಜಕೀಯ ಪಕ್ಷ ಗೆದ್ದರೂ ಮಾರ್ಜಿನ್‌ ಸಹ ಪ್ರಮುಖವಾಗಲಿದೆ. ಆರು ತಿಂಗಳಲ್ಲಿ ಜನರು ಮೋದಿ ಅವರಿಗೆ ಓಟು ನೀಡಿದ್ದಾರೆ ಎಂದರೆ ಏನಾಗುತ್ತಿದೆ ಎಂಬುದು ಪ್ರತಿಯೊಬ್ಬರಿಗೆ ತಿಳಿಯಬೇಕು ಎಂದರು.

ಅಧಿಕಾರದಲ್ಲಿರುವವರು ಬೇರೆಯವರನ್ನು ಟೀಕೆ ಮಾಡುವುದು ಒಳ್ಳೆಯ ಪ್ರಜಾಪ್ರಭುತ್ವದ ಲಕ್ಷಣ ಅಲ್ಲ. ಅಭಿವೃದ್ಧಿ ಬಗ್ಗೆ ಮಾತನಾಡಲಿ. ಜನರಿಗೆ ತಿಳಿಸಲಿ. ಕಾರ್ಯಕ್ರಮ ನೀಡಿದ್ದೇವೆ ಎಂದ ಮಾತ್ರಕ್ಕೆ ಜನ ಓಟು ಹಾಕಬೇಕು ಎಂದೇನಿಲ್ಲ. ಮೋದಿಯವರು ಯಾವ ಆಧಾರದ ಮೇಲೆ ಮತ ಕೇಳುತ್ತಿದ್ದಾರೆ ಎಂಬುದರ ಅಧ್ಯಯನ ಮಾಡಿದರೆ, ಅಂಕಿ ಅಂಶ ತೆಗೆದು ನೋಡಿದರೆ ಭಯ ಆಗುತ್ತದೆ ಎಂದರು.

Tags: BJPBy electionchannapattanacongressCongress PartyDK ShivakumarSantosh Ladsiddaramaiahಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

2028ರ ಚುನಾವಣೆ ಫಲಿತಾಂಶಕ್ಕೆ ರಾಜ್ಯದ ಜನರ ಮುನ್ನುಡಿ: DCM DK.ಶಿವಕುಮಾರ್ ಆತ್ಮವಿಶ್ವಾಸ

Next Post

ರಜತ್ ಗೆ ಕಿಚ್ಚನ ಖಡಕ್ ವಾರ್ನಿಂಗ್ – ಈ ವಾರ ಕಿಚ್ಚನ ಚಪ್ಪಾಳೆ ಯಾರಿಗೆ?

Related Posts

ಮೂಲಸೌಕರ್ಯ ಯೋಜನೆಗಳು ಸರ್ವಜ್ಞನಗರದ ಭವಿಷ್ಯವನ್ನು ಸಮೃದ್ದಗೊಳಿಸಲಿದೆ: ಸಚಿವ ಕೆ.ಜೆ.ಜಾರ್ಜ್
Top Story

ಮೂಲಸೌಕರ್ಯ ಯೋಜನೆಗಳು ಸರ್ವಜ್ಞನಗರದ ಭವಿಷ್ಯವನ್ನು ಸಮೃದ್ದಗೊಳಿಸಲಿದೆ: ಸಚಿವ ಕೆ.ಜೆ.ಜಾರ್ಜ್

by ಪ್ರತಿಧ್ವನಿ
March 5, 2026
0

-ತ್ಯಾಜ್ಯ ನೀರು ನಿರ್ವಹಣೆಗೆ ಆಧುನಿಕ ತಂತ್ರಜ್ಞಾನದ ಟಚ್‌ ಬೆಂಗಳೂರು, ಮಾರ್ಚ್ 4, 2026: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಭವಿಷ್ಯದ ದೃಷ್ಟಿಯಿಂದ ಮೂಲ ಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಮುಂದಿನ...

Read moreDetails
ಪ್ರತೀಕಾರದ ದಾಳಿಗೆ ಕಂಗಾಲಾದ ಟ್ರಂಪ್‌ : ಎಲ್ಲೇ ಇದ್ದರೂ ಬಿಡೋದಿಲ್ಲ ಎಂದ ಇರಾನ್..!

ಪ್ರತೀಕಾರದ ದಾಳಿಗೆ ಕಂಗಾಲಾದ ಟ್ರಂಪ್‌ : ಎಲ್ಲೇ ಇದ್ದರೂ ಬಿಡೋದಿಲ್ಲ ಎಂದ ಇರಾನ್..!

March 5, 2026
ಇರಾನ್‌ನ ಮುಂದಿನ ಸರ್ವಾಧಿಕಾರಿ ಯಾರೇ ಆಗಿರಲಿ ಕೊಲ್ಲುವುದೇ ನಮ್ಮ ಗುರಿ: ಇಸ್ರೇಲ್‌

ಇರಾನ್‌ನ ಮುಂದಿನ ಸರ್ವಾಧಿಕಾರಿ ಯಾರೇ ಆಗಿರಲಿ ಕೊಲ್ಲುವುದೇ ನಮ್ಮ ಗುರಿ: ಇಸ್ರೇಲ್‌

March 5, 2026
ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಕಳ್ಳಾಟ: ರಾಜ್ಯಾದ್ಯಂತ ಜನಾಂದೋಲನಕ್ಕೆ ಬಿಜೆಪಿ ಎಚ್ಚರಿಕೆ

ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಕಳ್ಳಾಟ: ರಾಜ್ಯಾದ್ಯಂತ ಜನಾಂದೋಲನಕ್ಕೆ ಬಿಜೆಪಿ ಎಚ್ಚರಿಕೆ

March 5, 2026
ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

March 4, 2026
Next Post
ರಜತ್ ಗೆ ಕಿಚ್ಚನ ಖಡಕ್ ವಾರ್ನಿಂಗ್ – ಈ ವಾರ ಕಿಚ್ಚನ ಚಪ್ಪಾಳೆ ಯಾರಿಗೆ?

ರಜತ್ ಗೆ ಕಿಚ್ಚನ ಖಡಕ್ ವಾರ್ನಿಂಗ್ - ಈ ವಾರ ಕಿಚ್ಚನ ಚಪ್ಪಾಳೆ ಯಾರಿಗೆ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada