2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ(karnataka assembly election) ಇನ್ನು ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದೆ. ಇದೇ ಮೇ 10ರಂದು ಚುನಾವಣೆ ನಡೆಯಲಿದ್ದು, ಈಗಾಗಲೇ ರಾಜಕೀಯ ನಾಯಕರು ಅಬ್ಬರ ಮತ ಪ್ರಚಾರ ಮಾಡಿದ್ದಾರೆ. ಬಿಜೆಪಿ(BJP) ರಾಷ್ಟ್ರೀಯ ನಾಯಕರು ಸಹ ರಾಜ್ಯದ ನಾನಾ ಕಡೆ ತೆರಳಿ, ಮತಬೇಟೆ ನಡೆಸಿದ್ದಾರೆ. ಇಂದು ದೊಡ್ಡಬಳ್ಳಾಪುರದಲ್ಲಿ(Doddaballapur) ಕೇಂದ್ರ ಗೃಹ ಸಚಿವ ಅಮಿತ್ ಶಾ(Amith shah) ಭರ್ಜರಿ ರೋಡ್ ಶೋ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ನಾವು ಪೂರ್ಣ ಬಹುಮತ ಅಥವಾ ಕನಿಷ್ಠ ಅರ್ಧ ಅಂಕದ ಜೊತೆಗೆ 15 ಸ್ಥಾನಗಳಿಂದ ಚುನಾವಣೆಯಲ್ಲಿ(election) ಗೆಲ್ಲುತ್ತೇವೆ. ಈ 4 ವರ್ಷಗಳಲ್ಲಿ ಬಿ.ಎಸ್.ಯಡಿಯೂರಪ್ಪ(BS yediyurappa) ಹಾಗೂ ಬಸವರಾಜ ಬೊಮ್ಮಾಯಿಯವರ(basavaraj bommai) ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ಕಾಂಗ್ರೆಸ್ ಎಲ್ಲೆಡೆ ಸುಳ್ಳು ಭರವಸೆಗಳನ್ನ ನೀಡಿ ಚುನಾವಣೆಯಲ್ಲಿ ಸೋಲುತ್ತೆ. ಕಾಂಗ್ರೆಸ್ಸಿನವರು ಎಸ್ಡಿಪಿಐ(SDPI) ಮತ್ತು ಪಿಎಫ್ಐ(PFI ಬೆಂಬಲ ತೆಗೆದುಕೊಳ್ಳುತ್ತಿದ್ದಾರೆ. ಇದನ್ನ ರಾಜ್ಯದ ಜನತೆ ಇಷ್ಟಪಡಲ್ಲ. ಇಂದಿದ್ರ ಕಾಂಗ್ರೆಸ್ ಮೇಲೆ ಜನರಿಗೆ ಕೋಪ ಇದೆ ಅಂತ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ರು.