• Home
  • About Us
  • ಕರ್ನಾಟಕ
Wednesday, January 28, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ನವಸಂಕಲ್ಪ ಹೊತ್ತ ಕಾಂಗ್ರೆಸ್; 2023-24 ಚುನಾವಣೆ ಗೆಲುವಿಗೆ ಮಂತ್ರ ಪಟನೆ

ಪ್ರತಿಧ್ವನಿ by ಪ್ರತಿಧ್ವನಿ
June 2, 2022
in ಕರ್ನಾಟಕ, ರಾಜಕೀಯ
0
ನವಸಂಕಲ್ಪ ಹೊತ್ತ ಕಾಂಗ್ರೆಸ್; 2023-24 ಚುನಾವಣೆ ಗೆಲುವಿಗೆ ಮಂತ್ರ ಪಟನೆ
Share on WhatsAppShare on FacebookShare on Telegram

ಕಳೆದ ತಿಂಗಳು ರಾಜಸ್ಥಾನದ ಉದಯ್ಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನ್ ಶಿಬಿರಕ್ಕೆ ಪರ್ಯಾಯವಾಗಿ ರಾಜ್ಯ ಕಾಂಗ್ರೆಸ್ ನಾಯಕರು ಎರಡು ದಿನಗಳ ನವಸಂಕಲ್ಪ ಶಿಬಿರವನ್ನ ಬೆಂಗಳೂರು ನಗರದ ಹೊರವಲಯದ ರೆಸಾರ್ಟ್ ಒಂದರಲ್ಲಿ ಆಯೋಜಿಸಿದ್ದಾರೆ.

ADVERTISEMENT

ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ಸಿನ ಸುಮಾರು 450ಕ್ಕು ಹೆಚ್ಚು ಮುಖಂಡರು ಭಾಗಯಾಗಿದ್ದು ಎಲ್ಲಾ ಹಾಲಿ ಹಾಗು ಮಾಜಿ ಶಾಸಕರು ಶಿಬಿರದಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ 2023-24ರ ಚುನಾವಣೆ ಎದುರಿಸುವುದು ಹಾಗು ಗೆಲುವಿನ ರೋಡ್ಮ್ಯಾಪ್ ರೂಪಿಸಲಾಗುವುದು ಎಂದು ಹೇಳಲಾಗಿದೆ.

ಒಟ್ಟು ಆರು ಸಮಿತಿಗಳನ್ನು ರಚಿಸಲಾಗಿದ್ದು ಇಲ್ಲಿ ನಾಯಕರು ಪ್ರತ್ಯೇಕವಾಗಿ ತಮ್ಮ ತಮ್ಮ ಆನಿಸಿಕೆಗಳನ್ನು ಹಂಚಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾನು ಆದ್ಯಕ್ಷನಾಗಿ ಕಾಂಗ್ರೆಸ್ ಭವನದಲ್ಲಿ ಪದಗ್ರಹಣ ಮಾಡುವ ಸಮಯದಲ್ಲಿ ಒಂದು ಮಾತನ್ನ ಹೇಳಿದೆ ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ಹೇಳಿದ್ದನ್ನ ನೆನಪಿಸಿಕೊಂಡರು.

ಮುಂದುವರೆದು, ಕಳೆದ 7-8 ತಿಂಗಳ ಹಿಂದೆ ಶಿಬಿರವನ್ನ ನಡೆಸಲು ಯೋಜಿಸಲಾಗಿತ್ತು. ಆದರೆ, ಉಪಚುನಾವಣೆಗಳು, ಅಧಿವೇಶನ ಹಾಗು ಪ್ರತಿಭಟನೆಗಳಿದ್ದ ಕಾರಣ ಶಿಬಿರವನ್ನ ನಡೆಸಲು ಸಾಧ್ಯವಾಗಿರಲಿಲ್ಲ.

ಆದರೆ, ಎಐಸಿಸಿ ಸೂಚನೆ ಹಾಗು ಮಾರ್ಗದರ್ಶನದ ಮೇರೆಗೆ ಕರ್ನಾಟಕದಲ್ಲಿ ಶಿಬಿರವನ್ನ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಚುನಾವಣೆ ಎದುರಿಸುವುದು ಹಾಗು ಯಾವ ರೀತಿ ಹೋರಾಟ ಮಾಡಬೇಕು ಎಂಬುದರ ಕುರಿತು ಉದಯ್ಪುರದಲ್ಲಿ ಚರ್ಚಿಸಲಾಗಿತ್ತು. ರಾಜಸ್ಥಾನದ ಶಿಬಿರದಲ್ಲಿ ಪಾಲ್ಗೊಂಡವರನ್ನೇ 6 ವಿವಿಧ ಸಮಿತಿಗಳ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.

ಪಕ್ಷದ ಎಲ್ಲಾ ನಾಯಕರು ಹಾಗು ಕಾರ್ಯಕರ್ತರು ಕನಿಷ್ಠ 15-20ದಿನ ಪಕ್ಷ ಸಂಘಟನೆಗಾಗಿ ಮುಡಿಪಿಡಬೇಕು. ಸ್ಥಳೀಯ ಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಪಕ್ಷಕ್ಕೆ ಬರಮಾಡಿಕೊಳ್ಳಬೇಕು, ಬೂತ್ ಮಟ್ಟದಲ್ಲಿ ಸಭೆ ನಡೆಸಬೇಕು ಹಾಗು ಅಸಮಾಧಾನಿತರನ್ನು ಸಮಾಧಾನ ಮಾಡಬೇಕು.

ಪ್ರತಿ ಜಿಲ್ಲಾ ಕೇಂದ್ರಗಳಲ್ಲು ಆಗಷ್ಟ್ 9-15ರ ವರೆಗೆ ತಿರಂಗಾ ಯನ್ನು ಮಾಡಬೇಕು. ಇದರ ಜೊತೆಜೊತೆಗೆ ಶಿಬಿರದಲ್ಲಿ ಚರ್ಚಿಸಲಾದ ವಿಚಾರಗಳನ್ನು ಯಾವ ನಾಯಕರು ಸಹ ಮಾಧ್ಯಮಗಳ ಮುಂದೆ ತೆರೆದಿಡಬಾರದು ಎಂದು ಖಡಕ್ ಸೂಚನೆ ನೀಡಿದ್ದಾರೆ.

ನಂತರ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸೈದ್ದಾಂತಿಕ ನೆಲೆಗಟ್ಟು ಹಾಗು ರಾಜಕೀಯವಾಗಿ ಚುನಾವಣೆ ಎದುರಿಸಲು ರೋಡ್ ಮ್ಯಾಪ್ ತಯಾರಿಸುವ ಬಗ್ಗೆ ಶಿಬಿರದಲ್ಲಿ ಪ್ರಮುಖವಾಗಿ ಚರ್ಚಿಸಲಾಗುವುದು.

ಮುಂದುವರೆದು ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ ಅದಕ್ಕೆ ಪೂರಕವೆಂಬಂತೆ ನಾವು ನಡೆಸಿದ ಸಮೀಕ್ಷೆಯಲ್ಲಿ ಅತಿ ಹೆಚ್ಚು ಜನರು ಕಾಂಗ್ರೆಸ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಮುಂದಿನ ದಿನಗಳಲ್ಲಿ ಬದಲಾವಣೆಯ ಪರ್ವ ಕರ್ನಾಟಕದಿಂದಲೇ ಆರಂಭವಾಗುತ್ತದೆ ಎಂದು ಬಣ್ಣಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ 2024ಕ್ಕೆ ಲೋಕಸಭಾ ಚುನಾವಣೆ ಇದೆ, ಕರ್ನಾಟಕದಲ್ಲಿ 2023ರಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡಯಲಿದೆ. ಇವುಗಳ ಜೊತೆಗೆ ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳಿಗೆ, ಮಹಾನಗರ ಪಾಲಿಕೆ ಚುನಾವಣೆ ಬರುತ್ತಿದೆ.

ಈ ಹಿನ್ನೆಲೆಯಲ್ಲಿ ಇಂದು ನವ ಸಂಕಲ್ಪ ಚಿಂತನಾ ಶಿಬಿರ ಆಯೋಜಿಸಲಾಗಿದೆ. ಪಕ್ಷ ಬೂತ್ ಮಟ್ಟದಿಂದ ಕೆಪಿಸಿಸಿ ಮಟ್ಟದ ವರೆಗೆ ಸಂಘಟಿತಗೊಂಡರೆ ಚುನಾವಣೆಗಳ ಗೆಲುವು ಕಷ್ಟದ ಕೆಲಸವಲ್ಲ. ಇಂತಹ ಹಲವು ಚುನಾವಣೆಗಳನ್ನು ಯಶಸ್ವಿಯಾಗಿ ಪಕ್ಷ ಈಗಾಗಲೇ ಎದುರಿಸಿದೆ ಕೂಡ ಎಂದು ಹೇಳಿದ್ದಾರೆ.

ಸರ್ಕಾರ ಈಗ ತರಾತುರಿಯಲ್ಲಿ ಚುನಾವಣೆ ನಡೆಸಲು ಮುಂದಾಗಿದೆ ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಸಲು ಆದೇಶಿಸಲಾಗಿದೆ. ಆದ್ದರಿಂದ ನಮ್ಮ ಕಾರ್ಯಕರ್ತರು ಎಲ್ಲರು ಸಜ್ಜಾಗಿರಬೇಕು. ಚುನಾವಣೆ ವಿಚಾರದಲ್ಲಿ ರಾಜ್ಯ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ನೋಡಿದ್ದರೆ ಮಹಿಳೆಯರಿಗೆ ಹಾಗು ಹಿಂದುಳಿದವರಿಗೆ ಯಾವುದೇ ಮೀಸಲಾತಿಯನ್ನು ನೀಡಲು ಪಲವಿಲ್ಲ ಎಂಬ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಚಾಟಿ ಬೀಸಿದ್ದಾರೆ.

ಒಟ್ಟಿನಲ್ಲಿ ಕೆಪಿಸಿಸಿ ನಡೆಸುತ್ತಿರುವ ಎರಡು ದಿನಗಳ ಚಿಂತನಾ ಶಿಬಿರ ರಾಜ್ಯ ಹಾಗು ರಾಷ್ಟ್ರ ಕಾಂಗ್ರೆಸ್ನಲ್ಲಿ ಯಾವ ರೀತಿಯ ಬದಲಾವಣೆ ತರುತ್ತದೆ ಎಂಬುದನ್ನಕಾದು ನೋಡಬೇಕಿದೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಕನ್ನಡ ಮಾಧ್ಯಮದಲ್ಲಿ ಯುಪಿಎಸ್ ಸಿ ಪರೀಕ್ಷೆ ನಡೆಸಲು ಪ್ರಧಾನಿಗೆ ಮನವಿ

Next Post

ಕನ್ನಡ ಸಿನಿಮಾ ನೋಡಿ ಅನೋದಿಕ್ಕೆ ಮುಜುಗರ ಆಗುತ್ತೆ : Aditi Prabhudeva

Related Posts

Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!
Top Story

Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!

by ಪ್ರತಿಧ್ವನಿ
January 28, 2026
0

ಮೇಷ ರಾಶಿಯ ಇಂದಿನ ಭವಿಷ್ಯ ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ನಿಮ್ಮ ಸತತ ಪರಿಶ್ರಮಕ್ಕೆ ಮೇಲಧಿಕಾರಿಗಳಿಂದ ಮೆಚ್ಚುಗೆ ಮತ್ತು ಪ್ರೋತ್ಸಾಹ...

Read moreDetails
ಐರೋಪ್ ಒಕ್ಕೂಟ- ಭಾರತ ಮುಕ್ತ ಮಾರುಕಟ್ಟೆ ಒಪ್ಪಂದ

ಐರೋಪ್ ಒಕ್ಕೂಟ- ಭಾರತ ಮುಕ್ತ ಮಾರುಕಟ್ಟೆ ಒಪ್ಪಂದ

January 28, 2026
ಅರ್ಕಾವತಿ ಬಡಾವಣೆ ಭೂಸಂತ್ರಸ್ತರಿಗೆ ಡಿ.ಕೆ. ಶಿವಕುಮಾರ್ ಗುಡ್‌ ನ್ಯೂಸ್..!

ಅರ್ಕಾವತಿ ಬಡಾವಣೆ ಭೂಸಂತ್ರಸ್ತರಿಗೆ ಡಿ.ಕೆ. ಶಿವಕುಮಾರ್ ಗುಡ್‌ ನ್ಯೂಸ್..!

January 27, 2026
ಟ್ರಂಪ್‌ಗೆ ಸೆಡ್ಡು ಹೊಡೆದ ಭಾರತ : ಯುರೋಪ್‌ ಒಕ್ಕೂಟದೊಂದಿಗೆ ಮೋದಿಯ ಒಪ್ಪಂದಗಳೇನು..?

ಟ್ರಂಪ್‌ಗೆ ಸೆಡ್ಡು ಹೊಡೆದ ಭಾರತ : ಯುರೋಪ್‌ ಒಕ್ಕೂಟದೊಂದಿಗೆ ಮೋದಿಯ ಒಪ್ಪಂದಗಳೇನು..?

January 27, 2026
ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ

ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ

January 27, 2026
Next Post
ಕನ್ನಡ ಸಿನಿಮಾ ನೋಡಿ ಅನೋದಿಕ್ಕೆ ಮುಜುಗರ ಆಗುತ್ತೆ : Aditi Prabhudeva

ಕನ್ನಡ ಸಿನಿಮಾ ನೋಡಿ ಅನೋದಿಕ್ಕೆ ಮುಜುಗರ ಆಗುತ್ತೆ : Aditi Prabhudeva

Please login to join discussion

Recent News

BIG BREAKING: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನ: ಆಗಿದ್ದೇನು..?
Top Story

BIG BREAKING: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನ: ಆಗಿದ್ದೇನು..?

by ಪ್ರತಿಧ್ವನಿ
January 28, 2026
ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು
Top Story

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು

by ನಾ ದಿವಾಕರ
January 28, 2026
Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!
Top Story

Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!

by ಪ್ರತಿಧ್ವನಿ
January 28, 2026
ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ
Top Story

ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 27, 2026
ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ಹಣ ದರೋಡೆ: 1.37 ಕೋಟಿ ದೋಚಿ ಸಿಬ್ಬಂದಿ ಎಸ್ಕೇಪ್‌
Top Story

ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ಹಣ ದರೋಡೆ: 1.37 ಕೋಟಿ ದೋಚಿ ಸಿಬ್ಬಂದಿ ಎಸ್ಕೇಪ್‌

by ಪ್ರತಿಧ್ವನಿ
January 27, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

BIG BREAKING: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನ: ಆಗಿದ್ದೇನು..?

BIG BREAKING: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನ: ಆಗಿದ್ದೇನು..?

January 28, 2026
ಬಿಲ್ಡರ್ ಮನೆಯಲ್ಲಿ ಬರೋಬ್ಬರಿ 18 ಕೋಟಿ ರೂ. ವಸ್ತುಗಳ ದರೋಡೆ

ಬಿಲ್ಡರ್ ಮನೆಯಲ್ಲಿ ಬರೋಬ್ಬರಿ 18 ಕೋಟಿ ರೂ. ವಸ್ತುಗಳ ದರೋಡೆ

January 28, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!