ಮಂಗಳೂರಿನ ಸ್ಥಳೀಯ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ನಡೆಯುತ್ತಿದ್ದ ನೇರ ಚರ್ಚೆ ವೇಳೆ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಹಾಗೂ ಅವರ ಕುಟುಂಬದವರ ಮೇಲೆ ಹಲ್ಲೆಯ ಬೆದರಿಕೆಯೊಡ್ಡಲಾಗಿದೆ. ಇದನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕೀಯ ನಾಯಕ/ಕಿಯರು ಖಂಡಿಸಿದ್ದಾರೆ.
ಸೆಪ್ಟೆಂಬರ್ 30 ರಂದು ಸುದ್ದಿವಾಹನಿಯೊಂದರಲ್ಲಿ ಮಂಗಳೂರಿನ ಸುರತ್ಕಲ್ ನಲ್ಲಿ ವಿದ್ಯಾರ್ಥಿಗಳ ಮೇಲಿನ ನೈತಿಕ ಪೊಲೀಸ್ ಗಿರಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿತ್ ಸೆಪ್ಟೆಂಬರ್ 26 ರಂದು ಮಲ್ಪೆ ಬೀಚ್‌ನಿಂದ ಹಿಂದಿರುಗಿದ ವೈದ್ಯಕೀಯ ವಿದ್ಯಾರ್ಥಿಗಳ ಗುಂಪಿಗೆ ಕಿರುಕುಳ ನೀಡಿದ್ದಕ್ಕಾಗಿ ಬಲಪಂಥೀಯ ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದ ಕುರಿತು ಲಾವಣ್ಯ ಬಲ್ಲಾಳ್ ಪ್ರಶ್ನಿಸಿದ್ದರು. ಇದೆ ವೇಳೆ ವ್ಯಕ್ತಿಯೊಬ್ಬ ಫೋನ್ ಮಾಡಿ ಲಾವಣ್ಯ ಅವರಲ್ಲಿ ಮಾತನಾಡಬೇಕೆಂದು ನಿರೂಪಕರಲ್ಲಿ ಕೇಳಿಕೊಳ್ಳುತ್ತಾನೆ.
ಅದರಂತೆ ಲಾವಣ್ಯ ಬಳ್ಳಾಲ್ ಅವರಿಗೆ ಪ್ರಶ್ನೆ ಮಾಡಿದ ವ್ಯಕ್ತಿ’ ನೀವು ಆರ್ ಎಸ್ ಎಸ್, ಬಜರಂಗದಳದ ಬಗ್ಗೆ ಹೇಗೆ ಹಗುರವಾಗಿ ಮಾತನಾಡುತ್ತೀರಿ. ನಿಮ್ಮ ಮಗಳನ್ನು ಕಾರಿನಲ್ಲಿ ಕೂರಿಸಿ ನೀವು ಆರ್ ಎಸ್ ಎಸ್ ಬಗ್ಗೆ ಮಾತನಾಡಿದ್ದೀರಲ್ಲ, ನೀವು ಹೊರಗಡೆ ಬಂದು ಮಾತನಾಡಿ, ನಾವು ನಿಮಗೆ ಸಾರ್ವಜನಿಕವಾಗಿಯೇ ಹಲ್ಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ. ಈ ವೇಳೆ ನಿರೂಪಕ ಸೇರಿದಂತೆ ಚರ್ಚೆಯಲ್ಲಿ ಭಾಗವಹಿಸಿದವರು ಆತನ ಹೇಳಿಕೆಯನ್ನು ಖಂಡಿಸಿದ್ದಾರೆ.
ಲಾವಣ್ಯ ಹೇಳುವ ಪ್ರಕಾರ, ಸಾಮಾಜಿಕ ಜಾಲತಾಣದ ಸೆಪ್ಟೆಂಬರ್ 26 ಪೋಸ್ಟ್ನಿಂದ ನಿಂದನೆ ಮತ್ತು ಬೆದರಿಕೆಗಳು ಶುರುವಾದವು, ಚರ್ಚೆಯಲ್ಲಿ ಘಟನೆಯನ್ನು ಬಗ್ಗೆ ಅವರು ತುಳು ಭಾಷೆಯಲ್ಲಿ ಮಾತನಾಡಿದ್ದಾರೆ.

ಆಕೆ ಸೆಪ್ಟೆಂಬರ್ 26 ರಂದು ಸುರತ್ಕಲ್ ನಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸುತ್ತಿದ್ದು, ಐವರು ಆರೋಪಿಗಳು ಉಡುಪಿಯ ಮಲ್ಪೆ ಬೀಚ್ ನಿಂದ ಹಿಂದಿರುಗುತ್ತಿದ್ದ ಆರು ವೈದ್ಯಕೀಯ ವಿದ್ಯಾರ್ಥಿಗಳನ್ನು ತಡೆದು ಮುಸ್ಲಿಮರ ಸಮ್ಮುಖದಲ್ಲೇ ಏಕೆ ಪ್ರಯಾಣಿಸುತ್ತಿದ್ದೀರಿ ಎಂದು ಕೇಳಿದ್ದಾರೆ. ಆರೋಪಿಗಳು ವಿದ್ಯಾರ್ಥಿಗಳನ್ನು ನಿಂದಿಸಿದ್ದಾರೆ ನಂತರ ಸ್ಥಳದಲ್ಲಿದ್ದ ಟ್ರಾಫಿಕ್ ಇನ್ಸ್ಪೆಕ್ಟರ್ ಪರಿಸ್ಥಿತಿಯನ್ನುತಿಳಿಗೊಳಿಸಲು ಮುಂದಾಗಿದ್ದಾರೆ
.
ಟಿಎನ್ಎಂ ಜೊತೆ ಮಾತನಾಡಿದ ಲಾವಣ್ಯ, ಕರಾವಳಿ ಕರ್ನಾಟಕದಲ್ಲಿ ನೈತಿಕ ಪೊಲೀಸ್ ಪ್ರಕರಣಗಳ ಕುರಿತು ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದರು. “ಭಜರಂಗದಳವು ನಮ್ಮ ಯುವಕರನ್ನು ತಮ್ಮ ರಾಜಕೀಯ ಲಾಭಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿದೆ. ಪೋಷಕರನ್ನು ಹೊರತುಪಡಿಸಿ ಬೇರೆ ಯಾರಿಗೂ ಮಕ್ಕಳನ್ನು ಶಿಸ್ತು ಕಲಿಸುವ ಹಕ್ಕಿಲ್ಲ. ಪೋಷಕರಿಗೆ ಏನಾದರೂ ತಪ್ಪು ನಡೆಯುತ್ತಿದೆ ಎಂದು ಭಾವಿಸಿದರೆ ಅವರು ಸಂವಿಧಾನದ ಅಡಿಯಲ್ಲಿ ಪೊಲೀಸರಿಗೆ ಮಾಹಿತಿ ನೀಡಬಹುದು. ಪೊಲೀಸರು ಕ್ರಮ ಕೈಗೊಳ್ಳಬೇಕು ಹೊರತು ಬೇರೆ ಯಾರಿಗೂ ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕಿ ಮತ್ತು ಜಯನಗರ ಶಾಸಕಿ ಸೌಮ್ಯ ರೆಡ್ಡಿ ತಮ್ಮ ಸಹೋದ್ಯೋಗಿ ಲಾವಣ್ಯ ವಿರುದ್ಧದ ಬೆದರಿಕೆಗಳ ವಿರುದ್ಧ ಮಾತನಾಡಿದ್ದು. “ಇದು ನಿಜಕ್ಕೂ ಕರುಣಾಜನಕವಾಗಿದೆ. ಹಗಲು ಹೊತ್ತಿನಲ್ಲಿಯೇ ಮಹಿಳೆಗೆ ಬೆದರಿಕೆ ಹಾಕಲಾಗಿದೆ ಮತ್ತು ಯಾವುದೇ ಕ್ರಮ ಕೈಗೊಂಡಿಲ್ಲ ” ಈ ಘಟನೆಯಲ್ಲಿನ ಅಪರಾಧಿಗಳನ್ನು ವಿರುದ್ಧ ಕ್ರಮ ಕೈಕೊಳ್ಳುತ್ತೀರಿ ಎಂಬ ನಂಬಿಕೆ ಇಡಬಹುದೇ ಎಂದು ಡಿಜಿಪಿ, ರಾಜ್ಯ ಮುಖ್ಯಮಂತ್ರಿ ಬೊಮ್ನಾಯಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ಲಾವಣ್ಯ ಅವರಿಗೆ ಬೆದರಿಕೆ ಹಾಕಿದ ಕುರಿತು ಶಾಸಕಿ ಲಕ್ಷಿ ಟ್ವೀಠ್ ಮಾಡಿದ್ದು, ಮಂಗಳೂರಿನ ಸ್ಥಳೀಯ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ನಡೆಯುತ್ತಿದ್ದ ನೇರ ಚರ್ಚೆ ವೇಳೆ ನಮ್ಮ ಪಕ್ಷದ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಹಾಗೂ ಅವರ ಕುಟುಂಬದವರ ಮೇಲೆ ಹಲ್ಲೆ ಮಾಡುವುದಾಗಿ ಬೆದರಿಕೆಯೊಡ್ಡಲಾಗಿದೆ, ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಮಹಿಳೆಯರನ್ನು ಗೌರವಿಸಬೇಕಾದ ನಾಡಿನಲ್ಲಿ ಇಂಥಹ ಅಹಿತಕರ ಹೇಳಿಕೆಗಳು ಶೋಭೆ ತರುವುದಿಲ್ಲ, ಎಲ್ಲಿಯತನಕ ಮಹಿಳೆಯರ ಮೇಲೆ ಅವಹೇಳನಕಾರಿಗಳು, ಹಲ್ಲೆಗಳು, ದೌರ್ಜನ್ಯಗಳ ನಡೆಯುತ್ತವೆಯೋ ಅಲ್ಲಿಯವರೆಗೆ ನಮ್ಮ ಹೋರಾಟ. ಕೂಡಲೇ ಸಂಘ ಪರಿವಾರಕ್ಕೆ ಸೇರಿದವರೆನ್ನಲಾದ ಈ ದುಷ್ಕರ್ಮಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತರನ್ನು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಕರ್ನಾಟಕದಲ್ಲಿ ಮಹಿಳಾ ರಾಜಕೀಯ ನಾಯಕರನ್ನು ನಿಂದಿಸುವುದು ಅಥವಾ ಟಾರ್ಗೆಟ್ ಮಾಡುವುದು ಇದೇ ಮೊದಲಲ್ಲ. ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ‘ನೈಟ್ ಕಲ್ಚರ್’ ಮೂಲಕ ಶಾಸಕರಾದರು ಎಂದು ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಪ್ರತಿಕ್ರಿಯಿಸಿದ ಕೆಲ ದಿನಗಳ ನಂತರ ಲಾವಣ್ಯ ವಿರುದ್ಧ ಬೆದರಿಕೆಗಳು ಬಂದಿವೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕೂಡಲೇ ಸಂಘ ಪರಿವಾರಕ್ಕೆ ಸೇರಿದವರೆನ್ನೆನ್ನಲಾದ ಈ ದುಷ್ಕರ್ಮಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದ್ದಾರೆ.
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ದಾಖಲಿಸಿರುವ ದತ್ತಾಂಶವು ಈ ವರ್ಷ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 60 ಕ್ಕೂ ಹೆಚ್ಚು ಕೋಮು ಘಟನೆಗಳು ನಡೆದಿರುವುದನ್ನು ತೋರಿಸುತ್ತದೆ.