ಕಾಂಗ್ರೆಸ್ ಮುಖಂಡ ಹಾಗು ಗಾಯಕ ಸಿಧು ಮೂಸೇವಾಲಾ ಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ದ ವಿರೋಧ ಪಕ್ಷಗಳು ಹರಿಹಾಯ್ದಿವೆ.
ಗಾಯಕ ಸಿಧು ಮೂಸೇವಾಲಾ ಹತ್ಯೆ ರಾಜಕೀಯ ಪ್ರೇರಿತ ಎಂದು ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಕಿಡಿಕಾರಿದ್ದಾರೆ.
ಮುಂದುವರೆದು, ಪಂಜಾಬಿನಲ್ಲಿ ದಿನನಿತ್ಯ ಕೊಲೆ ಪ್ರಕರಣಗಳು ದಾಖಲಾಗುತ್ತಿವೆ ಪೊಲೀಸರು ಹತಾಶ ಮನೋಭಾವದಲ್ಲಿದ್ದಾರೆ ಅವರಿಗೆ ಯಾವುದೇ ಸರಿಯಾದ ಮಾರ್ಗದರ್ಶನ ಹಾಗು ನಿರ್ದೇಶನ ಸಿಗುತ್ತಿಲ್ಲ. ಸಿಧು ಹತ್ಯ ರಾಜಕೀಯ ಪ್ರೇರಿತವಾಗಿದ್ದು ಇದಕ್ಕೆ ಮುಖ್ಯಮಂತ್ರಿ ಭಗವಂತ್ ಮಾನ್ ನೇರ ಹೊಣೆ ಈ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮೂಸೇವಾಲಾಗೆ ನೀಡಿದ್ದ ಪೊಲೀಸ್ ಭದ್ರತೆಯನ್ನ ಹಿಂಪಡೆದ ಮಾರನೇ ದಿನವೇ ಸಿಧು ಮೇಲೆ ದಾಳಿಯಾಗಿದ್ದು ಎಕೆ-94 ರೈಫಲ್ನಲ್ಲಿ ಅವರ ದೇಹದ ಮೇಲೆ 30ಕ್ಕೂ ಹೆಚ್ಚು ಭಾರೀ ಗುಂಡು ಹಾರಿಸಲಾಗಿದೆ.
ಪ್ರಧಾನಿ ಹಾಗು ಗೃ ಕಚೇರಿಗೆ ಸಿಧು ಮೂಸೇವಾಲಾ ತಂದೆ ತಮ್ಮ ಮಗನ ಕೊಲೆ ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಪತ್ರ ಬರೆದಿದ್ದಾರೆ.