ವಿಶ್ವದ ದೊಡ್ಡಣ್ಣ ಅಮೆರಿಕಾ 47 ನೇ ಅಧ್ಯಕ್ಷರಾಗಿ ಪದಗ್ರಹಣವಾದ ನಂತರ ಹಲವರು ಆಕ್ರಮಣಕಾರಿ ನೀತಿಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ. ಈ ವೇಳೆ ಟ್ರಂಪ್ ಕೆಲ ನಿರ್ಧಾರಗಳು ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರಿಗೆ ಸಂಕಷ್ಟ ತಂದಿದ್ದು, ಇದೀಗ ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿ ಮೋದಿ ಕಾಲೆಳೆದಿದೆ.
ಅಮೇರಿಕಾ (America) ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald trump) ತಮ್ಮ ‘ಆಪ್ತಮಿತ್ರ’ ಎಂದೇ ಬಿಂಬಿಸಿಕೊಂಡಿರುವ ಮೋದಿಯವರನ್ನ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನಿಸದಿರುವ ಬೆನ್ನಲ್ಲೇ, ಅಧಿಕಾರ ಹಿಡಿಯುತ್ತಿದ್ದಂತೆಯೇ ಭಾರತಕ್ಕೆ ಮತ್ತೊಂದು ಮರ್ಮಾಘಾತ ನೀಡಿದ್ದಾರೆ.
ಅಮೇರಿಕಾದಲ್ಲಿ ಭಾರತ ಮೂಲದವರ ಜನ್ಮಸಿದ್ಧ ಪೌರತ್ವ ರದ್ದು ಮಾಡುವ ಆದೇಶ ಹೊರಡಿಸಲಾಗಿದೆ!
ಇದರಿಂದಾಗಿ 7.50 ಲಕ್ಷ ಭಾರತೀಯರು ಅಮೆರಿಕಾ ದೇಶ ಬಿಡಬೇಕಾದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೇ ಭಾರತದ ರಪ್ತಿನ ಮೇಲೆ 100% ತೆರಿಗೆ ವಿಧಿಸುವ ಎಚ್ಚರಿಕೆ ನೀಡಿದ್ದಾರೆ ಟ್ರಂಪ್!
‘ಆಪ್ತಮಿತ್ರ’ನ ಮೇಲೂ ‘ಕೆಂಗಣ್ಣು’ ಬೀರುವ ಎದೆಗಾರಿಕೆ ತೋರುತ್ತಾರಾ ‘ಸ್ವಯಂ ಘೋಷಿತ ವಿಶ್ವ ನಾಯಕ’ ಮೋದಿ?! ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಬಿಜೆಪಿಯ ಕಾಲೆಳೆದಿದೆ.