• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ʻಕಾಂಗ್ರೆಸ್ ಪಕ್ಷ SDPI, PFI ಕಪಿಮುಷ್ಟಿಯಲ್ಲಿದೆʼ: ಸಿಎಂ ಬಸವರಾಜ ಬೊಮ್ಮಾಯಿ

ಪ್ರತಿಧ್ವನಿ by ಪ್ರತಿಧ್ವನಿ
May 4, 2023
in ರಾಜಕೀಯ
0
ʻಕಾಂಗ್ರೆಸ್ ಪಕ್ಷ SDPI, PFI ಕಪಿಮುಷ್ಟಿಯಲ್ಲಿದೆʼ: ಸಿಎಂ ಬಸವರಾಜ ಬೊಮ್ಮಾಯಿ
Share on WhatsAppShare on FacebookShare on Telegram

ಕಾಂಗ್ರೆಸ್(congress) ಪಕ್ಷ ಎಸ್‌ಡಿಪಿಐ(SDPI) ಹಾಗೂ ಪಿಎಫ್ಐ(PFI) ಕಪಿಮುಷ್ಟಿಯಲ್ಲಿದ್ದು, ಅದರಿಂದ ಹೊರಬರಲು ಸಾಧ್ಯವಿಲ್ಲ ಅಂತ ಸಿಎಂ ಬಸವರಾಜ ಬೊಮ್ಮಾಯಿ(cm basavaraj bommmai) ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು. ಇಂದು ಹುಬ್ಬಳ್ಳಿಯಲ್ಲಿ(hubballi) ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ʻಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ಕಾಂಗ್ರೆಸ್ ವರ್ತಿಸುತ್ತಿದೆ . ನಾವು ಎಸ್.ಡಿ.ಪಿ.ಐ, ಪಿಎಫ್ಐ ವಿರುದ್ಧ ಮಾತನಾಡಿದ್ರೆ ಕಾಂಗ್ರೆಸ್ ನಾಯಕರಿಗೆ ತಳಮಳ ಶುರುವಾಗುತ್ತದೆ.  ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ(politics) ಮಾಡುತ್ತಿದೆ. ಪಿಎಫ್ಐ ಬ್ಯಾನ್ ಆಗಿದ್ದರೂ ತಮ್ಮ ಪರವಾಗಿ ಮಾತನಾಡುತ್ತಿಲ್ಲ ಎಂಬ ಅಸಮಾಧಾನ ಪಿಎಪಿಐಗಿದೆ. ನಮಗೆ ರಕ್ಷಣೆ ಕೊಡುತ್ತಿಲ್ಲ. ನಾವು ಯಾಕೆ ನಿಮಗೆ ರಕ್ಷಣೆ ಕೊಡಬೇಕು ಅಂತ ಪಿ.ಎಫ್.ಐ ನಾಯಕರು ಪ್ರಶ್ನಿಸುತ್ತಿದ್ದಾರೆ ಅಂತ ಹೇಳಿದ್ರು .

ADVERTISEMENT

ಬಳಿಕ ಮಾತ್ನಾಡಿದ ಅವರು, ʻಪಿಎಫ್‌ಐನ ಇನ್ನೊಂದು ರೂಪ ಎಸ್.ಡಿ.ಪಿ.ಐ ಬೆಂಬಲವನ್ನು ಕಾಂಗ್ರೆಸ್(congress) ಬಹಿರಂಗವಾಗಿ ಕೇಳಿತ್ತು. ಆದರೆ ಅವರು ಕೊಡುವುದಿಲ್ಲ ಎಂದಿದ್ದಾರೆ.ಕಾಂಗ್ರೆಸ್ ನ ಕಾಲದಲ್ಲಿ ಎಸ್.ಡಿ‌.ಪಿ.ಐ., ಪಿ.ಎಫ್.ಐ ಪ್ರಬಲವಾಗಿ ಬೆಳೆದಿದ್ದವು. ಬಾಲವೇ ದೇಹವನ್ನು ಅಲುಗಾಡಿಸುವ ಸ್ಥಿತಿ ಇದೆ. ಎಸ್.ಡಿ.ಪಿ.ಐ‌ ಬಿಜೆಪಿಯ(BJP) ಬಿ. ಟೀಂ ಅಲ್ಲ. ಬಿ ಟೀಂ ಆಗಿದ್ದರೆ ನಾವು ಪಿ.ಎಫ್.ಐ ಬ್ಯಾನ್ ಮಾಡ್ತಿದ್ದೆವಾ..? ತಾವು ಮಾಡಿದ ತಪ್ಪನ್ನು ಮುಚ್ಚಲು ಈ ರೀತಿಯ ಆರೋಪ‌ ಮಾಡುತ್ತಿದ್ದಾರೆ ಅಂತ ಸಿಎಂ ಬಸವರಾಜ ಬೊಮ್ಮಾಯಿ(basavaraj bommai) ಆಕ್ರೋಶ ವ್ಯಕ್ತಪಡಿಸಿದ್ರು.

ಭಜರಂಗ ದಳಕ್ಕೆ ಆಂಜನೇಯನಿಗೆ ಏನು ಸಂಬಂಧ ಎಂಬ  ಕೆಪಿಸಿಸಿ ಅಧ್ಯಕ್ಷ  ಡಿ.ಕೆ.ಶಿವಕುಮಾರ್(dk shivakumar) ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ʻರಾಮನಿಗೂ ಹನುಮನಿಗೂ ಏನು ಸಂಬಂಧ ಇದೆಯೋ, ಅದೇ ಸಂಬಂಧ. ಆಂಜನೇಯನಿಗೂ ಭಜರಂಗ(bhajarangdal) ದಳಕ್ಕಿದೆ.  ಇದನ್ನು ಕಾಂಗ್ರೆಸ್ ನವರು ಅರ್ಥ ಮಾಡಿಕೊಳ್ಳಬೇಕು. ಜನರ ಭಾವನೆಗಳಿಗೆ ಧಕ್ಕೆ ಬರೋ ರೀತಿಯಲ್ಲಿ ಮಾತನಾಡೋದು ಸರಿಯಲ್ಲʼ ಎಂದರು.

ʻನಾವು ನಮ್ಮ ಕಾರ್ಯಕ್ರಮಗಳ ಆಧಾರದಲ್ಲಿ ಚುನಾವಣೆ ಎದುರಿಸಿತ್ತಿದ್ದೇವೆ. ಕಾಂಗ್ರೆಸ್  ಅವರು  ಭರವಸೆಗಳ ಮೇಲೆ ಚುನಾವಣೆ ಎದುರಿಸುತ್ತಿದ್ದಾರೆ.  ಅನಾವಶ್ಯಕವಾಗಿ ಕೆದಕಿ ಕೆದಕಿ ಚುನಾವಣೆಯ(election) ವಾತಾವರಣವನ್ನು ಜಾತಿ, ಧರ್ಮ, ಕೋಮು ಭಾವನೆಗಳ ಮೂಲಕ ಕೆರಳಿಸೋದು ಸರಿಯಲ್ಲ.  ಇದು ಕಾಂಗ್ರೆಸ್ ನ ತುಷ್ಟೀಕರಣ ರಾಜಕಾರಣ ತೋರ್ಪಡಿಸುತ್ತೆ ಅಂತ ಕಾಂಗ್ರೆಸ್‌ ವಿರುದ್ಧ ಸಿಎಂ ಬೊಮ್ಮಾಯಿ ಕಿಡಿಕಾರಿದರು. ಕೊನೆಯದಾಗಿ ಸೋನಿಯಾಗಾಂಧಿ ಹುಬ್ಬಳ್ಳಿ(hubballi) ಭೇಟಿ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ʻಸೋನಿಯಾಗಾಂಧಿ(sonia gandhi) ಬರಲಿ..  ನಾವು ಕಾಂಗ್ರೆಸ್(congress) ನಾಯಕರ ರೀತಿ ಅಳೋಲ್ಲ.  ಮೋದಿ, ಅಮಿತ್ ಶಾ(amith shah) ಯಾಕೆ ಬಂದರು ಎಂದು  ಕಾಂಗ್ರೆಸ್(congress) ನವರು ಕೇಳಿದಂತೆ ನಾವು ಕೇಳುವುದಿಲ್ಲ ಅಂತ ಸಿಎಂ ಬೊಮ್ಮಾಯಿ ಹೇಳಿದ್ರು.

Tags: #basavarajbommai#bjp#congress#election2023#jds#karnataka#karnatakaassemblyelection#pfi#pratidhvani#pratidhvanidigital#pratidhvaninews#sdpi
Previous Post

ಬಸವರಾಜ ಬೊಮ್ಮಾಯಿಗೆ ಮುಸ್ಲಿಂ ಸಮುದಾಯದಿಂದ ದೊಡ್ಡ ಬೆಂಬಲ: ಮುಖಂಡರಿಗೆ ಕಿವಿಮಾತು ಹೇಳಿದ ಸಿಎಂ

Next Post

ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ್ ಪ್ರಚಾರಕ್ಕೆ ಅನುಮತಿ ನೀಡದ ಪೊಲೀಸರು..!

Related Posts

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..
Top Story

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಸುಸ್ಥಿರ ಅಭಿವೃದ್ಧಿ ಗುರಿಗಳು (SDGs) ರಾಷ್ಟ್ರಗಳಿಗೆ ಬೆಳವಣಿಗೆ ಮತ್ತು ಸಸ್ಥಿರತೆಯನ್ನು ಸಮನ್ವಯಗೊಳಿಸುವ ಜಾಗತಿಕ ಚೌಕಟ್ಟನ್ನು ಒದಗಿಸುತ್ತವೆ. ಆದ್ದರಿಂದ ಅಭಿವೃದ್ಧಿ ಮತ್ತು ಸುಸ್ಥಿರತೆ ಹಾಗೂ ಒಳಗೊಳ್ಳುವಿಕೆಯ ಗುರಿಯ...

Read moreDetails
ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

April 18, 2026
Next Post
ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ್ ಪ್ರಚಾರಕ್ಕೆ ಅನುಮತಿ ನೀಡದ ಪೊಲೀಸರು..!

ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ್ ಪ್ರಚಾರಕ್ಕೆ ಅನುಮತಿ ನೀಡದ ಪೊಲೀಸರು..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada