
ತುಮಕೂರಿನಲ್ಲಿ ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ವಿರೋಧಿ ಹೋರಾಟ ನಡೆಯುತ್ತಿದ್ದು, ಗುಬ್ಬಿ ಕಾಂಗ್ರೆಸ್ ಶಾಸಕ ಎಸ್.ಆರ್ ಶ್ರೀನಿವಾಸ್ ವಿರೋಧ ಪಕ್ಷಗಳ ಹೋರಾಟಕ್ಕೆ ನನ್ನ ಸಹಮತ ಇದೆ ಎಂದಿದ್ದಾರೆ. ಎಕ್ಸ್ಪ್ರೆಸ್ ಕೆನಾಲ್ ಮಾಡೋದ್ರಿಂದ ನಮ್ಮ ಜಿಲ್ಲೆಗೆ ಅನ್ಯಾಯ ಆಗಲಿದೆ. ಎಕ್ಸ್ಪ್ರೆಸ್ ಕೆನಾಲ್ ಯೋಜನೆಯನ್ನು ನಾನು ಹಿಂದೆಯೂ ವಿರೋಧಿಸಿದ್ದೆ. ಈಗಲೂ ವಿರೋಧಿಸುತ್ತೇನೆ ಎಂದಿದ್ದಾರೆ.

ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಟೆಕ್ನಿಕಲ್ ಕಮಿಟಿ ವರದಿ ಇನ್ನೂ ಬಿಡುಗಡೆ ಆಗಿಲ್ಲ. ಕಮಿಟಿ ವರದಿ ಆಧರಿಸಿ ನಾವೂ ಹೋರಾಟ ರೂಪಿಸುತ್ತೇವೆ ಎಂದಿರುವ ಕಾಂಗ್ರೆಸ್ ಶಾಸಕ ಶ್ರೀನಿವಾಸ್, ನಾನು ಸರ್ಕಾರದ ಭಾಗ ಆಗಿರೋದ್ರಿಂದ ನಮ್ಮದೇ ಚೌಕಟ್ಟಿನಲ್ಲಿ ವಿರೋಧಿಸುತ್ತೇನೆ. ವಿರೋಧ ಪಕ್ಷದವರು ಹೋರಾಟ ಮಾಡಲಿ ಎಂದಿದ್ದಾರೆ. ಆದರೆ ರಕ್ತಪಾತ ಆಗುತ್ತದೆ ಎಂದು ಜನರನ್ನು ಎತ್ತಿಕಟ್ಟುವ ಕೆಲಸ ಬೇಡ ಎನ್ನುವ ಮೂಲಕ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆಗೆ ಸಹಮತ ಸೂಚಿಸಿದ್ದಾರೆ.
ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಹೋರಾಟದಲ್ಲಿ ರಕ್ತಪಾತ ಆಗುತ್ತದೆ ಎನ್ನುವಂತ ಮಾತನ್ನು ವಿರೋಧ ಪಕ್ಷದವರು ಹೇಳಬಾರದಿತ್ತು. ಜನರನ್ನು ಎತ್ತಿಕಟ್ಟುವ ಕೆಲಸಕ್ಕೆ ಡಿಸಿಎಂ ವಿರೋಧಿಸಿದ್ದಾರೆ. ಗಲಭೆ ದೊಂಬಿ ಆದರೆ ಸರ್ಕಾರದ ಕೆಲಸ ಸರ್ಕಾರ ಮಾಡುತ್ತದೆ ಎಂದು ಹೇಳಿದ್ದಾರೆ ಹೊರತು.. ಎಕ್ಸ್ಪ್ರೆಸ್ ಕೆನಾಲ್ ಮಾಡಿಯೇ ಮಾಡುತ್ತೇವೆ ಎಂದು ಹೇಳಿಲ್ಲ. ಎಕ್ಸ್ಪ್ರೆಸ್ ಕೆನಾಲ್ ಯೋಜನೆ ರದ್ದಾಗುವ ಎಲ್ಲಾ ವಿಶ್ವಾಸ ನನಗಿದೆ ಎಂದಿದ್ದಾರೆ.







