ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ವಿಡಿಯೋ ವೈರಲ್ ವಿಚಾರದಲ್ಲಿ ದೂರು ದಾಖಲು ಆಗಿದೆ. ಶಾಸಕ ಇಕ್ಬಾಲ್ ಹುಸೇನ್ ವಿಡಿಯೋ ವೈರಲ್ ಮಾಡಿದವರ ವಿರುದ್ಧ ರಾಮನಗರದ ಸೆನ್ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ. ವೈರಲ್ ಆಗಿದ್ದ ವಿಡಿಯೋ ಬಗ್ಗೆ ಅಶ್ಲೀಲವಾಗಿ ಚರ್ಚೆ ಮಾಡಿದ್ದಾರೆಂದು ಸಂತ್ರಸ್ತ ಯುವತಿಯಿಂದ ದೂರು ಸಲ್ಲಿಸಿದ್ದಾರೆ.

ನನ್ನ ಹಾಗು ಶಾಸಕ ಇಕ್ಬಾಲ್ ಹುಸೇನ್ ಅವರದ್ದು ತಂದೆ ಮಗಳ ಸಂಬಂಧ. ನನ್ನ ಅವರ ವಿಡಿಯೋ ಕಾಲ್ ರೆಕಾರ್ಡ್ ದುರುಪಯೋಗ ಮಾಡಲಾಗಿದೆ. ಒಳ ಉಡುಪಿನಲ್ಲಿ ಇರುವ ಹಾಗೇ ಸೃಷ್ಟಿಸಲಾಗಿದೆ. ತಮ್ಮಣ್ಣ ಗೌಡ ಗುಂಡ್ಕಲ್ ಎಂಬುವರ ಫೇಸ್ ಬುಕ್ ಖಾತೆ ಮೂಲಕ ವಿಡಿಯೋ ವೈರಲ್ ಆಗಿದೆ ಎಂದಿದ್ದಾರೆ.

ಶಾಸಕರ ಜೊತೆಗೆ ನಾನು ಮಾತನಾಡಿರುವುದನ್ನ ತಿರುಚಲಾಗಿದೆ. ಈ ಬಗ್ಗೆ ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ ಸಂತ್ರಸ್ತ ಯುವತಿ. ಆ ವಿಡಿಯೋದಲ್ಲಿ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಬಟ್ಟೆ ತೆಗೆಯುವಂತೆ ಸಂಜ್ಞೆ ಮಾಡಿರುವಂತೆ ಕಾಣಿಸುತ್ತಿದೆ. ಆದರೆ ಅದು ಮಾರ್ಫ್ ವಿಡಿಯೋ ಎಂದು ದೂರು ನೀಡಿದ್ದಾರೆ ಕಾಂಗ್ರೆಸ್ ಕಾರ್ಯಕರ್ತೆ.
