ಶಿವಮೊಗ್ಗ : ಏ.10: ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳಿಗೆ ಪ್ರಚಾರಕ್ಕೆ ಯಾವುದೇ ವಿಷಯವಿಲ್ಲ. ಅಪಪ್ರಚಾರ ಮಾಡುವುದೇ ಅವರ ವಿಚಾರ ಎಂದು ಸಂಸದ ಬಿ.ವೈ. ರಾಘವೇಂದ್ರ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಟಲಿ ದೇಶದ ಗ್ಲಾಸ್ ಹಾಕಿಕೊಂಡು ನೋಡುವ ಪ್ರವೃತ್ತಿ ಇದೆ. ಹಾಗಾಗೀ ಎಲ್ಲವೂ ಅವರಿಗೆ ಹಾಗೇ ಕಾಣುತ್ತಿದೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಅಭಿವೃದ್ಧಿ ನೋಡಲು ಅವರಿಗೆ ಆಗುತ್ತಿಲ್ಲ. ಅವರು ಹಾಳು ಮಾಡಿದ ವ್ಯವಸ್ಥೆಯನ್ನು ಸರಿ ಮಾಡುತ್ತಿದ್ದೇವೆ. ಒಳ್ಳೆಯ ಕೆಲಸ ಮಾಡದಿದ್ದರೂ ಪರವಾಗಿಲ್ಲ. ಒಳ್ಳೆಯ ಕೆಲಸ ಮಾಡುವವರ ಟೀಕೆ ಮಾಡುವುದನ್ನು ನಿಲ್ಲಿಸಲಿ. ಹಾಗಾದ್ರೇ, ವಿರೋಧ ಪಕ್ಷದ ಸ್ಥಾನವಾದ್ರೂ ಉಳಿಸಿಕೊಳ್ಳಲು ಅವಕಾಶವಿದೆ ಎಂದರು.
ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧಿಸ ಬೇಕೆನ್ನುವುದು ಕಾರ್ಯಕರ್ತರ ಇಚ್ಛೆ. 24 ಗಂಟೆಯಲ್ಲಿ ಪಕ್ಷದ ಅಭ್ಯರ್ಥಿಗಳ ಘೋಷಣೆ ಆಗುತ್ತೆ. ಕಾಯುತ್ತಿದ್ದೇವೆ.. ಪಕ್ಷ ಅವಕಾಶ ಮಾಡಿಕೊಡುವ ವಿಶ್ವಾಸವಿದೆ ಎಂದರು. ಬಿಜೆಪಿ ಎಂಎಲ್ ಸಿ ಆಯನೂರು ಮಂಜುನಾಥ್ ಹಾಲಿ ಶಾಸಕ ಕೆ.ಎಸ್ ಈಶ್ವರಪ್ಪ ರೆಬೆಲ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಪಕ್ಷದ ಹಿರಿಯರು ಕರೆದು, ಮಾತನಾಡ್ತಾರೆ, ಬಗೆಹರಿಸ್ತಾರೆ ಎಂದರು.

ಇನ್ನು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಚುನಾವಣೆ ಕಾರ್ಯಾಲಯ ಉದ್ಘಾಟನೆ ಮಾಡಿ ಮಾತನಾಡಿದ ರಾಘವೇಂದ್ರ, ಯುದ್ಧದ ಸಮಯದಲ್ಲಿ ನಾವು ಶಸ್ತ್ರಾಭ್ಯಾಸ ಮಾಡುತ್ತಿಲ್ಲ ಎಂದರು. ಕಳೆದ ಐದು ವರ್ಷ ನಿರಂತರವಾಗಿ ಕಾರ್ಯಕರ್ತರು ತಪಸ್ಸಿನ ರೀತಿ ಕೆಲಸ ಮಾಡಿದ್ದಾರೆ. ಅದರ ಪರೀಕ್ಷೆ, ಪ್ರತಿಫಲವನ್ನು ನೋಡುವ ಚುನಾವಣಾ ಸಮಯ ಈಗ ಬಂದಿದೆ. ಶಿವಮೊಗ್ಗ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಜೊತೆಗೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರಿನಲ್ಲೂ ಕೂಡ ಗೆಲ್ಲುತ್ತವೆ.
8 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದರಲ್ಲಿ

ಯಾವುದೇ ಅನುಮಾನ ಇಲ್ಲ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಗೆದ್ದ ಕ್ಷೇತ್ರವನ್ನು ಈ ಬಾರಿ ಹೆಚ್ಚು ಅಂತದಲ್ಲಿ ಗೆಲ್ಲುತ್ತೇವೆ. ಸರ್ಕಾರಗಳ 5 ವರ್ಷದ ಅಭಿವೃದ್ಧಿ ಕಾರ್ಯ ಹಾಗೂ ಕಾರ್ಯಕರ್ತರು ಪರಿಶ್ರಮದಿಂದ ಒಟ್ಟಾಗಿ ತೇರು ಎಳೆದಿದ್ದೇವೆ. ಹೀಗಾಗಿ ಜನ ನಮಗೆ ಆಶೀರ್ವಾದ ಮಾಡ್ತಾರೆ ಎಂದು ಸಂಸದ ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.











