ಬೆಂಗಳೂರು : ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿ ತಲೆಮರೆಸಿಕೊಂಡಿದ್ದ ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನ ಬಂಧನವಾಗಿದೆ. ಕೇರಳದಲ್ಲಿ ಕರ್ನಾಟಕದ ಪೊಲೀಸರ ಬಲೆಗೆ ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ರಾಜೀವ್ ಗೌಡನನ್ನು ಕೋರ್ಟ್‌ಗೆ ಕರೆತರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ನ್ಯಾಯಾಲಯದ ಒಳಗಡೆ ರಾಜೀವ್ ಗೌಡ ಕುಟುಂಬಸ್ಥರಿಗೆ ಪೊಲೀಸರು ಪ್ರವೇಶ ನಿರಾಕರಿಸಿದ್ದು. ನಿರಾಸೆಯಿಂದಲೇ ಸಹೋದರಿ ನಿರ್ಮಲ, ತಂಗಿ ಸೇರಿ ನಾಲ್ವರು ಕೋರ್ಟ್ ಆವರಣದಿಂದ ಹೊರನಡೆದಿದ್ದಾರೆ.
ಇದನ್ನೂ ಓದಿ : 400 ಕೋಟಿ ರೂ ದರೋಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಹಾರಾಷ್ಟ್ರದಲ್ಲಿ ಚಾಲಕರ ಬಂಧನ..?
ಇಂದು ಬೆಳಿಗ್ಗೆ ಶಿಡ್ಲಘಟ್ಟದ ಗೆಸ್ಟ್ ಹೌಸ್‌ನಲ್ಲಿ ರಾಜೀವ್ ಗೌಡನನ್ನು ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸೆ ವಿಚಾರಣೆ ನಡೆಸಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಕೋರ್ಟ್‌ಗೆ ಹಾಜರು ಪಡಿಸುವ ಪ್ರಕ್ರಿಯೆ ನಡೆ ಮುಂದುವರೆದಿದೆ. ಈ ನಡುವೆಯೇ ಗೆಸ್ಟ್ ಹೌಸ್‌ನಿಂದ ಹೊರಬರುತ್ತಿದ್ದಂತೆ ಬೆಂಬಲಿಗರತ್ತ ಕೈ ಬೀಸಿದ ರಾಜೀವ್ ಗೌಡಗೆ ಧೈರ್ಯವಾಗಿರಿ ಅಣ್ಣಾ ಎಂದು ಅಭಿಮಾನಿಗಳು ಧೈರ್ಯ ತುಂಬಿದ್ದಾರೆ.

ಕೋರ್ಟ್‌ಗೆ ಕರೆತರುವ ವೇಳೆ ರಾಜೀವ್ ಗೌಡನನ್ನು ದಿಬ್ಬೂರಹಳ್ಳಿ ರಸ್ತೆ ಮಾರ್ಗವಾಗಿ ಪೊಲೀಸರು ಶಿಡ್ಲಘಟ್ಟ ಕೋರ್ಟ್ ಗೆ ಕರೆತಂದರು. ಕೋರ್ಟ್ ಬಳಿ ತಮ್ಮ ಬೆಂಬಲಿಗರಿಗೆ ಶೇಕ್ ಹ್ಯಾಂಡ್ ಕೊಟ್ಟು ರಾಜೀವ್ ಗೌಡ ಒಳಗೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ರಾಜೀವ್ ಗೌಡಗೆ ಜೈಲಾ..? ಅಥವಾ ಬೇಲಾ ಎನ್ನುವ ಆತಂಕ ರಾಜೀವ್ ಗೌಡ ಬೆಂಬಲಿಗರಲ್ಲಿ ಮನೆ ಮಾಡಿದೆ.












