ಕಾಂಗ್ರೆಸ್ ಪಕ್ಷಕ್ಕೆ ಇತ್ತೀಚಿನ ದಿನಗಳಲ್ಲಿ ಮೇಲಿಂದ ಮೇಲೆ ಹೊಡೆತ ಬೀಳುತ್ತಿದ್ದು ಮೊದಲಿಗೆ ಜಿ-23 ಮೂಲಕ ಶುರುವಾದ ಬಂಡಾಯ ನಂತರ ಹಿರಿಯ ಹಾಗೂ ಕಿರಿಯ ನಾಯಕರ ಸಾಲು ಸಾಲು ರಾಜೀನಾಮೆಯಿಂಧ ಮುಂದುವರೆದಿದೆ.
ಇದೀಗ ಪಕ್ಷದ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ಜೈವೀರ್ ಶೆರ್ಗಿಲ್ ರಾಜೀನಾಮೆ ನೀಡಿದ್ದು ಪಕ್ಷವನ್ನ ತೊರೆಯುವುದಾಗಿ ಹೇಳಿದ್ದಾರೆ.
ಇನ್ನು ಈ ಕುರಿತು ಮಾತನಾಡಿರುವ ಶೆರ್ಗಿಲ್ ಪಕ್ಷ ತೆಗೆದುಕೊಳ್ಳುತ್ತಿರುವ ನಿರ್ಧಾರ ದೇಶದ ಹಿತಾಸಕ್ತಿಗೆ ಒಳಿತಾಗುತ್ತಿಲ್ಲ ಬದಲಿಗೆ ಅದು ಯಾರೋ ಒಬ್ಬರ ಮೆಚ್ಚಿಸಲು ತೆಗೆದುಕೊಳ್ಳಲಾಗುತ್ತಿರುವುದು ಎಂದಿದ್ದಾರೆ.
ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಪತ್ರ ಬರೆದಿರುವ ಶೆರ್ಗಿಲ್ ಪ್ರಸ್ತುತ ಕಾಂಗ್ರೆಸ್ ಪಕ್ಷವು ತೆಗೆದುಕೊಳ್ಳುತ್ತಿರುವ ನಿರ್ಧಾರವು ಸಿದ್ಧಾಂತ ಹಾಗೂ ದೇಶದ ಯುವಜನತೆಯ ದೂರದೃಷ್ಟಿಯ ಆಕಾಂಕ್ಷೆಗಳೊಂದಿಗೆ ಹೊಂದಾಣಿಕೆಯಾಗುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪಕ್ಷವು ಸದ್ಯ ತೆಗೆದುಕೊಳ್ಳುತ್ತಿರುವ ನಿರ್ಧಾರ ದೇಶದ ಹಿತಾಸಕ್ತಿಗಲ್ಲ ವೈಯಕ್ತಿಕ ಹಿತಾಸಕ್ತಿಗಾಗಿ ಎಂದು ಹೇಳಲು ನನ್ನಗೆ ತೀವ್ರ ನೋವಾಗುತ್ತಿದೆ. ಪಕ್ಷದ ಹಿತಾಸಕ್ತಿಗಿಂತ ವೈಯಕ್ತಿಕ ಹಿತಾಸಕ್ತಿಯ ಮೇಲೆ ಹೆಚ್ಚು ಅವಲಂಬಿತವಾದಂತೆ ಕಾಣುತ್ತಿದೆ. ಇದನ್ನು ಒಪ್ಪಿಕೊಂಡು ನನ್ನಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.