PSI ನೇಮಕಾತಿ ಹಗರಣಕ್ಕೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ, ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅಕ್ರಮದ ತನಿಖೆಯಲ್ಲಿ ಸರ್ಕಾರದ ಪ್ರಭಾವ ವಿಚಾರ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, PSI ನೇಮಕಾತಿ ಹಗರಣದ ಬಗ್ಗೆ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಯುತ್ತಿದೆ, ಪ್ರತಿದಿನ ಆರೋಪಿಗಳು ಬಂಧನವಾಗುತ್ತಿರುವುದು ಇದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.
ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಕಾಂಗ್ರೆಸ್ ನವರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಸಂದೇಹ ಉಂಟಾಗುತ್ತಿದೆ, ಎಲ್ಲಿ ತಮ್ಮ ಬಣ್ಣ ಬಯಲಾಗುತ್ತದೋ ಎಂಬ ಭಯ ಅವರಿಗೆ ಶುರುವಾಗಿದ್ದು ಸಚಿವ ಅಶ್ವಥ್ ನಾರಾಯಣ ಹಿಟ್ ಅಂಡ್ ರನ್ ಆರೋಪ ಮಾಡತ್ತಿದೆ ಇದೆಲ್ಲವನ್ನು ಒಪ್ಪೋದಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು, ಅಶ್ವಥ್ ನಾರಾಯಣ ವಿರುದ್ಧ ಕಾಂಗ್ರೆಸ್ ನವ್ರು ಆಧಾರ ರಹಿತ ಆರೋಪ ಮಾಡ್ತಿದ್ದಾರೆ. ಹಿಟ್ ಅಂಡ್ ರನ್ ಆರೋಪವನ್ನು ಒಪ್ಪೋದಿಲ್ಲ ಆರೋಪ ಮಾಡುವಾಗ ಸಣ್ಣ ಸಾಕ್ಷಿಯಾದರೂ ಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ ನವರ ಕಾಲದಲ್ಲಿ ಸಾಕಷ್ಟು ಪರೀಕ್ಷೆ ನಡೆದು ಅಕ್ರಮಗಳು ಇವೆ, ಆದರೆ ಅದಕ್ಕೆ ಸೂಕ್ತ ತನಿಖೆಯನ್ನೇ ಮಾಡಿಲ್ಲ. ಈಗ ನಾವು ಅಕ್ರಮಗಳನ್ನು ಬಯಲಿಗೆಳೆಯುತ್ತಿರುವಾಗ ಕೆಲವು ಕಾಂಗ್ರೆಸ್ ಮುಖಂಡರ ಬಂಧನವಾಗಿದೆ ಎಂದು ಹೇಳಿದ್ದಾರೆ.