ರಾಷ್ಟ್ರ ರಾಜಕಾರಣದಲ್ಲಿ ಸದಾ ಚಾಲ್ತಿಯಲ್ಲಿರುವ ಹೆಸರೆಂದರೆ ಅದು ತೃಣಮೂಲ ಕಾಂಗ್ರೆಸ್ನ ಸಂಸ್ಥಾಪಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ಸದಾ ಬಿಜೆಪಿ ಮತ್ತು ಮೋದಿ-ಷಾ ಜೋಡಿಯ ವಿರುದ್ದ ಕಿಡಿಕಾರುತ್ತಿದ್ದ ಬ್ಯಾನರ್ಜಿ ಕಳೆದ ಒಂದು ತಿಂಗಳಿನಿಂದ ಕಾಂಗ್ರೆಸ್ ವಿರುದ್ದ ಟೀಕಾಪ್ರಹಾರ ನಡೆಸುತ್ತಿದ್ದು ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಕೇಂದ್ರದಲ್ಲಿ ರೈಲ್ವೆ ಮಂತ್ರಿಯಾಗಿದ್ದ ಮಮತಾ ಅನಿವಾರ್ಯ ಕಾರಣಗಳಿಂದಾಗಿ ಕಾಂಗ್ರೆಸ್ನಿಂದ ಅಂತರವನ್ನ ಕಾಯ್ದುಕೊಂಡು ಕಾಂಗ್ರೆಸ್ಗೆ ಸೆಡ್ಡು ಹೊಡೆದು ಬಂಗಾಳದಲ್ಲಿ ತಮ್ಮದೇ ಪಕ್ಷವನ್ನ ಸ್ಥಾಪಿಸಿದ್ದರು. ಅವರು ಕಾಂಗ್ರೆಸ್ಗಿಂತ ವಿರೋಧ ಪಕ್ಷದ ಪರ್ಯಾಯ ನಾಯಕಿ ಎಂಬುದನ್ನ ನಿರೂಪಿಸಲು ಹೊರಟಂತ್ತಿದೆ. ಪಕ್ಷದ ಮುಖವಾಣಿ ʻಜಾಗೋ ಬಾಂಗ್ಲಾʼ ಪತ್ರಿಕೆಯಲ್ಲಿ ಶುಕ್ರವಾರ ಪ್ರಕಟವಾಗಿರುವ ಲೇಖನದ ಪ್ರಕಾರ, ಕಾಂಗ್ರೆಸ್ ʻಡೀಪ್ ಫ್ರೀಜ್ʼ ಆಗಿ ಹೋಗಿದೆ ದೇಶದ ಎಲ್ಲಾ ವಿರೋಧ ಪಕ್ಷಗಳು ಸದ್ಯ ಖಾಲಿ ಇರುವ ವಿರೋಧ ಪಕ್ಷ ಸ್ಥಾನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯತ್ತ ನೋಡುತ್ತಿವೆ ಎಂದು ವರದಿ ಮಾಡಿದೆ. ಈ ಒಂದು ಸುದ್ದಿ ಈಗ ರಾಷ್ಟ್ರ ರಾಜಕಾರಣದಲ್ಲಿ ವ್ಯಾಪಕ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ತೃಣಮೂಲ ಕಾಂಗ್ರೆಸ್ ಪಶ್ಷಿಮ ಬಂಗಾಳದಲ್ಲಿ ತನ್ನ ನೆಲೆಯನ್ನ ವಿಸ್ತರಿಸಿದಂತೆಯೇ ದೇಶಾದಂತ್ಯ ತನ್ನ ನೆಲೆಯನ್ನು ವಿಸ್ತರಿಸಲು ಯೋಜನೆ ರೂಪಿಸಿದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಮುಂದಿನ ವರ್ಷ ಚುನಾವಣೆ ನಡೆಯಲ್ಲಿರುವ ಮೇಘಾಲಯ ಮತ್ತು ಗೋವಾದಲ್ಲಿ ಈಗಾಗಲೇ ಒಂದು ಸುತ್ತು ಕಾಂಗ್ರೆಸ್ ಮತ್ತು ಅಲ್ಲಿನ ಪ್ರಾದೇಶಿಕ ಪಕ್ಷದ ನಾಯಕರನ್ನ ಬರಮಾಡಿಕೊಂಡಿರುವುದು. ಮೇಘಾಲಯದಲ್ಲಿ ಇತ್ತೀಚಿಗೆ ಮೇಘಾಲಯದಲ್ಲಿ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಸೇರಿದಂತೆ ಕಾಂಗ್ರೆಸ್ನ 17 ಶಾಸಕರ ಪೈಕಿ 12 ಶಾಸಕರನ್ನು ತನ್ನತ ಸೆಳೆದುಕೊಂಡಿರುವುದು. ಗೋವಾದಲ್ಲಿ ಮಾಜಿ ಮುಖ್ಯಮಂತ್ರಿ ಲುಯಿಝಿನ್ಹೊ ಫಲೈರೊ,ಹರಿಯಾಣ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ ಅಶೋಕ್ ತನ್ವರ್ ಮತ್ತು ಮಾಜಿ ಕ್ರಿಕೆಟಿಗ-ರಾಜಕಾರಣಿ ಕೀರ್ತಿ ಅಜಾದ್ ಸೇರಿದಂತೆ ಕಾಂಗ್ರೆಸ್‌ನ ಅನೇಕ ನಾಯಕರನ್ನು ತನ್ನ ಪಕ್ಷಕ್ಕೆ ಬರ ಮಾಡಿಕೊಂಡಿದೆ. ಅದಕ್ಕೆ ಮುಖ್ಯ ಕಾರಣ ಚುನವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ ದೀದಿ ಜೊತೆಗೆ ಕೈ ಜೋಡಿಸಿರುವುದು. ಇದು ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಮೋಡಿ ಮಾಡಿತ್ತು ಸಹ. ಇತ್ತೀಚಿಗೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕೂಡ ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಶಾಂತ್, ಕಾಂಗ್ರೆಸ್‌ನಲ್ಲಿ ನಾಯಕತ್ವವು ʻವ್ಯಕ್ತಿಯ ದೈವಿಕ ಹಕ್ಕಲ್ಲʼ ಎಂದು ಹೇಳಿದ್ದಾರೆ. ವಿರೋಧ ಪಕ್ಷದ ನಾಯಕತ್ವವನ್ನ ಪ್ರಜಾಸತಾತ್ಮಕವಾಗಿ ನಿರ್ಧರಿಸಬೇಕು ಎಂದು ಕರೆ ನೀಡಿದ್ದಾರೆ. ಪಕ್ಷದ ಮುಖವಾಣಿಯಲ್ಲಿ ಪ್ರಶಾಂತ್‌ರವರ ಟ್ವೀಟ್ ಬಗ್ಗೆ ಒತ್ತಿ ಹೇಳಲಾಗಿದೆ. ಚುನಾವಣಾ ತಂತ್ರಗಾರಷ್ಟೇ ಅಲ್ಲ ಕಾಂಗ್ರೆಸ್ ನಾಯಕರೇ ಸ್ವತಃ ಪಕ್ಷದ ನಾಯಕತ್ವವನ್ನೆ ಟೀಕಿಸುತ್ತಿದ್ದಾರೆ ಎಂದು ಹೇಳಿದೆ. ಬಿಜೆಪಿ ವಿರುದ್ದ ಹೋರಾಡಲು ತೃಣಮೂಲ ಕಾಂಗ್ರೆಸ್ ಬದ್ಧವಾಗಿದೆ ಮತ್ತು ಕಾಂಗ್ರೆಸ್ ಡೀಪ್ ಫ್ರೀಜರ್‌ನಲ್ಲಿದೆ ಎಂದು ಪ್ರತಿಪಾದಿಸಿದೆ. ಕಾಂಗ್ರೆಸ್ ಸದ್ಯ ದೇಶದಲ್ಲಿ ನಿಷ್ಪ್ರಯೋಜಕ ಶಕ್ತಿ ಅವರಿಗೆ ಹೋರಾಡುವ ಉತ್ಸಾಹವಿಲ್ಲ ಮತ್ತು ಬಿಜೆಪಿ ವಿರುದ್ದ ಹೋರಾಡಲು ಶಕ್ತಿಯು ಸಹ ಇಲ್ಲ. ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್ ಪಕ್ಷ ಎಷ್ಟು ಕುಗ್ಗಿದೆ ಎಂದರೆ ಅವರು ಪ್ರಮುಖ ವಿರೋಧ ಪಕ್ಷ ಯುಪಿಎಯನ್ನು ಪುನಃ ಕಟ್ಟಲು ಶಕ್ತರಾಗಿಲ್ಲ ಎಂದು ಹೇಳಿದೆ. ಇತ್ತೀಚಿಗೆ ರಾಷ್ಟ್ರೀಯ ಕಾಂಗ್ರೆಸ್ ನಾಯಕ ಶರದ್ ಪವಾರ್‌ರನ್ನು ಮುಂಬೈನಲ್ಲಿ ಭೇಟಿ ಮಾಡಿದ ದೀದಿ ʻಯುಪಿಎ ಎಂದರೇನು? ಅಸಲಿಗೆ ಯುಪಿಎ ಅಸ್ಥಿತ್ವದಲ್ಲಿದೆಯೇʼ ಎಂದು ಟೀಕಿಸಿದ್ದರು. ದೇಶದಲ್ಲಿ ಪ್ರಸ್ತುತ ಪರ್ಯಾಯ ವಿರೋಧ ಪಕ್ಷದ ಅಗತ್ಯವಿದೆ ಮತ್ತು ಆ ಸ್ಥಾನವನ್ನ ಮಮತಾ ಬ್ಯಾನರ್ಜಿಗೆ ನೀಡಿವೆ. ಏಕೆಂದರೆ ಅವರು ದೇಶದ ಪ್ರಮುಖ ವಿರೋಧ ಪಕ್ಷದ ಮುಖವಾಗಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕರು ಮಮತಾ ಬ್ಯನರ್ಜಿ ಮತ್ತು ಪ್ರಶಾಂತ ಕಿಶೋರ್ ವಿರುದ್ದ ತೀವ್ರ ವಾಗ್ದಾಳಿಯನ್ನ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಐಸಿಸಿ ವಕ್ತಾರರಾದ ಪವನ್ ಖೇರಾ ಮತ್ತು ಸುಪ್ರಿಯಾ ಶ್ರೀನಾಟೆ ʻರಾಹುಲ್ ಗಾಂಧಿ ಎಂದಿಗೂ ಫ್ಯಾಸಿಸ್ಟಗಳನ್ನು ಸೇರುವುದಿಲ್ಲʼ ಎಂಬುದನ್ನು ದೇಶದ ಜನರು ಅರಿತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಜೆಡಿಎಸ್ – ಬಿಜೆಪಿ ಮೈತ್ರಿ ಸರಕಾರ ಬಂದೇ ಬರುತ್ತದೆ;ನಮ್ಮ Unfinished ಅಜೆಂಡಾ ಪೂರ್ಣಗೊಳಿಸುತ್ತೇವೆ:ಹೆಚ್.ಡಿ.ಕುಮಾರಸ್ವಾಮಿ
ಸಕಲೇಶಪುರ / ಹಾಸನ: ಮುಂದೆ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ನಾನು ಸಿಎಂ ಆಗಿದ್ದ ಎರಡು ಅವಧಿಗಳಲ್ಲಿ ಅಪೂರ್ಣವಾಗಿರುವ ಎಲ್ಲಾ ಕೆಲಸಗಳನ್ನೂ ಆಗ ನಾವು...
Read moreDetails