ಬೆಂಗಳೂರು : ರಾಜ್ಯದಲ್ಲಿ ನಾವು ಕಂಡಿರುವ ಚುನಾವಣೆಯ ಸೋಲಿಗೂ ಮೋದಿಗೂ ಸಂಬಂಧವಿಲ್ಲ ಎಂದು ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿ ಕೇವಲ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿದ್ದರು. ಕಾಂಗ್ರೆಸ್ ಇಡೀ ದೇಶವನ್ನೇನು ಗೆದ್ದಿಲ್ಲ ಎಂದಿದ್ದಾರೆ.
ಚುನಾವಣೆಯಲ್ಲಿ ಉಂಟಾದ ಸೋಲಿನ ಬಗ್ಗೆ ಪಕ್ಷದ ಕಚೇರಿಯಲ್ಲಿ ಪರಾಮರ್ಶೆ ಮಾಡಿದ್ದೇವೆ. ವಿಧಾನಸಭೆ ಕ್ಷೇತ್ರವಾರು ಪರಮಾರ್ಶೆಯನ್ನೂ ಶೀಘ್ರದಲ್ಲಿಯೇ ಮಾಡುತ್ತೇವೆ ಎಂದಿದ್ದಾರೆ.
ಇನ್ನು ನಾವು ಲೋಕಸಭಾ ಚುನಾವಣೆಯತ್ತ ಗಮನ ನೆಟ್ಟಿದ್ದೇವೆ. ಪಕ್ಷ ಸಂಘಟನೆ ಮಾಡುತ್ತೇವೆ. ಕಾಂಗ್ರೆಸ್ ನಾಯಕತ್ವ ಇಡೀ ದೇಶದಲ್ಲಿ ಸೋತಿದೆ ಎಂಬುದು ಅವರ ಗಮನದಲ್ಲಿರಲಿ ಎಂದು ವಾಗ್ದಾಳಿ ನಡೆಸಿದ್ದಾರೆ.