ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 187 ಕೋಟಿ ಹಣವನ್ನು ತೆಲಂಗಾಣ ಸೇರಿದಂತೆ ಬೇರೆ ಬೇರೆ ಕಡೆಗಳಿಗೆ ನಕಲಿ ಅಕೌಂಟ್ ಮೂಲಕ ವರ್ಗಾವಣೆ ಮಾಡಿರುವುದು ಹಳೆಯ ವಿಚಾರ. ಶಿವಮೊಗ್ಗದಲ್ಲಿ ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಬೆಳಕಿಗೆ ಬಂದ ಈ ಪ್ರಕರಣ ಈಗಾಗಲೇ ನಾಗೇಂದ್ರ ಸಚಿವ ಸ್ಥಾನವನ್ನು ಕಿತ್ತುಕೊಂಡಿದೆ. ಶಾಸನ ಬಸನಗೌಡ ದದ್ದಲ್ ಬಂಧನದ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಸರ್ಕಾರ ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎನ್ನುವ ಮೂಲಕ ನಾವು ಭ್ರಷ್ಟಾಚಾರಿಗಳನ್ನು ಸಹಿಸೋದಿಲ್ಲ. ಭ್ರಷ್ಟರನ್ನು ರಕ್ಷಣೆ ಮಾಡುವ ಕೆಲಸ ಮಾಡಲ್ಲ ಎನ್ನುವಂತೆ ವರ್ತಿಸುತ್ತಿದೆ. ಆದರೆ ಇದೀಗ ED ಜಾರಿ ನಿರ್ದೇಶನಾಲಯ ಅಧಿಕಾರಿಗಳು ನೀಡಿರುವ ಮಾಧ್ಯಮ ಪ್ರಕಟಣೆ ಬೆಚ್ಚಿ ಬೀಳಿಸುವಂತಿದೆ.
2024ರ ಸಾರ್ವತ್ರಿಕ ಚುನಾವಣೆ ವೇಳೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಬಳಸಿಕೊಂಡು ಮದ್ಯ ಖರೀದಿ ಮಾಡಿರುವುದು ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಬಯಲಾಗಿದೆ. ಅಂದರೆ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್ ಮೂಗಿನ ನೇರದಲ್ಲೇ ಈ ಭ್ರಷ್ಟಾಚಾರ ನಡೆದಿದೆ ಎನ್ನುವ ಬಿಜೆಪಿ ನಾಯಕರ ಆರೋಪಕ್ಕೆ ಪುಷ್ಟಿ ನೀಡುವಂತಿದೆ. 18 ನಕಲಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ, ಆ ಹಣವನ್ನು ಮದ್ಯ ಖರೀದಿಗೆ ಬಳಕೆ ಮಾಡಿಕೊಳ್ಳಲಾಗಿದೆ ಎನ್ನುವ ಅಂಶ ತನಿಖೆ ವೇಳೆ ಬಯಲಾಗಿದೆ. ಈ ವಿಚಾರದ ಬಗ್ಗೆ ಜಾರಿ ನಿರ್ದೇಶನಾಯಲವನ್ನು ಆಗ್ರಹ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತೆಲಂಗಾಣ ಹಾಗು ಲೋಕಸಭಾ ಚುನಾವಣೆಗೆ ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಆಗಿದೆ. ಹಣಕಾಸು ಇಲಾಖೆ ಅಧಿಕಾರಿಗಳನ್ನು ತನಿಖೆಗೆ ಒಳಪಟಿಸಬೇಕು ಎಂದು ಆಗ್ರಹ ಮಾಡಿದ್ದಾರೆ.
ಇಡಿ ಕೊಟ್ಟಿರುವ ಮಾಹಿತಿ ಪ್ರಕಾರ ಕರ್ನಾಟಕ 23 ಸ್ಥಳಗಳಲ್ಲಿ ರೇಡ್ ಮಾಡಿ 89.62 ಕೋಟಿ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ಮಾಡಿದ್ದು, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಕ್ಕೆ ಹಣ ಹೋಗಿದೆ. 18 ನಕಲಿ ಅಕೌಂಟ್ ಮೂಲಕ ಈ ವ್ಯವಹಾರ ಮಾಡಲಾಗಿದೆ. ನಾಗೇಂದ್ರ ಹಾಗು ಬಸನಗೌಡ ದದ್ದಲ್ ಮನೆಯಲ್ಲಿ ಇದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ಲಭ್ಯವಾಗಿದ್ದು, ನಾಗೇಂದ್ರ ಸೂಚನೆಯಂತೆಯೇ ಹಣ ವರ್ಗಾವಣೆ ಮಾಡಲಾಗಿದೆ ಎಂದಿದ್ದಾರೆ. ಜುಲೈ 18ತ ತನಕ MP and MLA Court ಕಸ್ಟಡಿಗೆ ನೀಡಿದ್ದು, ವಿಚಾರಣೆ ನಡೆಯುತ್ತಿದೆ ಎಂದಿದ್ದಾರೆ. ಜೊತೆಗೆ ನಾಗೇಂದ್ರ ಪತ್ನಿ ಮಂಜುಳಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಚುನಾವಣೆಯಲ್ಲಿ ಹಂಚುವುದಕ್ಕಾಗಿ ಎಣ್ಣೆ ಖರೀದಿ ಮಾಡಿರುವುದು ಬೆಳಕಿಗೆ ಬಂದಿದೆ. ಸರ್ಕಾರದ ಮಟ್ಟದಲ್ಲಿ ತೀರ್ಮಾನ ಮಾಡದೆ ಹಣ ವರ್ಗಾವಣೆ ಆಯ್ತಾ ಎನ್ನುವುದು ಈಗ ಇರುವ ಪ್ರಶ್ನೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಇದರಲ್ಲಿ ಪಾಲುದಾರರು, ನಾಗೇಂದ್ರ ಇದರಲ್ಲಿ ಕೇವಲ ಪಾತ್ರಧಾರಿ ಎನ್ನುವುದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ನೇರ ಆರೋಪ. ED ಅಧಿಕಾರಿಗಳು ನಾಗೇಂದ್ರ ಹಾಗು ದದ್ದಲ್ ಮನೆ ಬಾಗಿಲಿಗೆ ಬಂದಿದ್ದಾರೆ. ಒಂದಿಷ್ಟು ಮಾಹಿತಿ ಸಿಕ್ಕರೂ ಸಿಎಂ ಹಾಗು ಡಿಸಿಎಂ ಮನೆ ಬಾಗಿಲು ಬೆಲ್ ಬಡಿಯುವುದರಲ್ಲಿ ಸಂದೇಹವಿಲ್ಲ. ಅಥವಾ ನೋಟಿಸ್ ಕೊಟ್ಟು ವಿಚಾರಣೆಗೆ ಬನ್ನಿ ಎಂದು ಕರೆಯುವುದು ನಿಶ್ಚಿತ ಎನ್ನಲಾಗ್ತಿದೆ. SC ST ಸಮುದಾಯದ ಪರ ಎನ್ನುವ ಕಾಂಗ್ರೆಸ್, SC-ST ಅಭಿವೃದ್ಧಿಗೆ ಬಳಕೆ ಆಗಬೇಕಿದ್ದ ಹಣವನ್ನು ಹೀಗೂ ಗುಳುಂ ಮಾಡಬಹುದು ಎಂದುಕೊಂಡಿದ್ದು ಅಸಹ್ಯಕರ ಸಂಗತಿ.
ಕೃಷ್ಣಮಣಿಕಾಂಗ್ರೆಸ್ ಸರ್ಕಾರಕ್ಕೆ ಕಂಟಕ ಆಗುವತ್ತ ವಾಲ್ಮೀಕಿ ಹಗರಣ..! ಹೊಸ ರಹಸ್ಯ ಬಯಲು

ಕೃಷ್ಣಮಣಿ