ರಾಜ್ಯಸಭಾ(Rajya Saba) ಚುನಾವಣಾ(Election) ಫಲಿತಾಂಶ(Result) ಹೊರಬಿದ್ದ ಬಳಿಕ ಸಂಭ್ರಮಾಚರಣೆ ವೇಳೆ ನಾಸೀರ್ ಹುಸೇನ್(Nasir Hossain) ಬೆಂಬಲಿಗರು ಘೋಷಣೆ ಕೂಗುವಾಗ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿದ್ದಾರೆ ಅನ್ನೋ ಆರೋಪ ಕೇಳಿಬಂದಿತ್ತು. ಆದರೆ ಕಾಂಗ್ರೆಸ್ ನಾಯಕರು ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದಿದ್ದರು. ಆದರೇ ರಾಜಕೀಯ ಒತ್ತಡ ಹೆಚ್ಚಾದ ಬಳಿಕ FIR ದಾಖಲು ಮಾಡಿ FSL ತನಿಖೆಗೆ ಆಡಿಯೋ(Audio) ವಿಡಿಯೋ(Video) ರವಾನೆ ಮಾಡಿತ್ತು.

ಸರ್ಕಾರದ FSL ವರದಿ ಬರುವ ಮೊದಲೇ ಖಾಸಗಿ FSL ವರದಿ ಬಿಡುಗಡೆ ಆಗಿತ್ತು. ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಬಗ್ಗೆ ಸ್ಪಷ್ಟನೆ ಸಿಕ್ಕಿತ್ತು. ಆ ಬಳಿಕ ಸರ್ಕಾರದ FSL ವರದಿ ಕೂಡ ಪೊಲೀಸರ ಕೈಸೇರಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಪೊಲೀಸರು. ಇಲ್ತಾಜ್, ಮುನಾವರ್, ಮಹಮ್ಮದ್ ನಾಶಿಪುಡಿ ಬಂಧಿತ ಆರೋಪಿಗಳು. FSL ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ ವಾಯ್ಸ್(Voice) ಧೃಡ ಆಗಿರುವ ಹಿನ್ನಲೆಯಲ್ಲಿ ಮೂವರ ಬಂಧನ ಮಾಡಲಾಗಿದೆ.

ಹಾವೇರಿ(Haveri)ಯ ಬ್ಯಾಡಗಿ ಮೂಲದ ಮಹಮ್ಮದ್ ನಾಶಿಪುಡಿ , ದೆಹಲಿ ಮೂಲದ ಇಲ್ತಾಜ್, ಆರ್.ಟಿ ನಗರದ ಮುನಾವರ್ ಬಂಧಿತ ಆರೋಪಿಗಳು. ಮೂವರು ಆರೋಪಿಗಳನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದ ವೈದ್ಯಕೀಯ(Medical) ಪರೀಕ್ಷೆ(Test) ಮಾಡಿಸಿದ್ದು, ವೈದ್ಯಕೀಯ ಪರೀಕ್ಷೆ ಬಳಿಕ ಕೋರಮಂಗಲ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲು ನಿರ್ಧಾರ ಮಾಡಿದ್ದಾರೆ. ಆದರೆ ಇಲ್ತಾಜ್, ಮುನಾವರ್, ಮಹಮ್ಮದ್ ನಾಶಿಪುಡಿ ಸೇರಿ ಮೂವರ ನಾಸೀರ್ ಹುಸೇನ್ ಬೆಂಬಲಿಗರು ಎನ್ನಲಾಗಿದ್ದು, ಕಾಂಗ್ರೆಸ್(Congress)ಗೆ ಮುಜುಗರ ತಂದೊಡ್ಡಿದೆ.
#RajyaSaba #Election #Result #Congress #FSLreport #NasirHossain #Siddaramaiah #DKShivakumar