ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ತೀವ್ರ ಹಿನ್ನಡೆ ಹಾಗೂ ಸೋಲನ್ನು ಅನುಭವಿಸುತ್ತಿದೆ ಇದಕ್ಕೆ ಸರಿಯಾದ ನಾಯಕತ್ವ ಹಾಗೂ ಪಕ್ಷ ಸಂಘಟನೆಯ ಅಗತ್ಯವಿದೆ ಎಂದು ಸ್ವತಃ ಕಾಂಗ್ರೆಸ್ ನಾಯಕರೇ ಹಲವು ಭಾರೀ ಆರೋಪಿಸಿದ್ದಾರೆ. ಆದರೆ, ಈ ಮಧ್ಯೆ ಚುನಾವಣಾ ಚಾಣಕ್ಯ ಹಾಗೂ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗೆ ಕಠಿಣ ಸವಾಲು ಒಡ್ಡುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಇತ್ತೀಚಿಗೆ ಸುದ್ಧಿಮಾಧ್ಯಮಕ್ಕೆ ನೀಡಿದ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ 2024ರ ಚುನಾವಣೆಯಲ್ಲಿ ಬಿಜೆಪಿಗೆ ಕಠಿಣ ಸವಾಲನ್ನು ಒಡಬಹುದು ಅದಕ್ಕೆ ಸಂಘಟಿತ ಹೋರಾಟ ಮತ್ತು ಮುಂದಿನ 15 ವರ್ಷಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದ್ದರೆ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.
ಇತ್ತೀಚಿಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಕುರಿತು ಪರಾಮರ್ಶೆ ಮಾಡಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನು (CWC) ದೆಹಲಿಯಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಸಭೆಯಲ್ಲಿ ಹಂಗಾಮಿ ಅಧ್ಯಕ್ಷ ಸೋನಿಯಾ ಗಾಂಧಿಗೆ ಸಂಘಟನಾ ದೌರ್ಬಲ್ಯ, ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ನಾಯಕತ್ವ ಬದಲಾವಣೆ ಕುರಿತು ವ್ಯಾಪಕವಾಗಿ ಆಗ್ರಹ ಕೇಳಿ ಬಂದಿತ್ತು.

ದೇಶಾದ್ಯಂತ ಬಿಜೆಪಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡರು ಬಿಹಾರ, ಆಂಧ್ರ ಪ್ರದೇಶ, ತಮಿಳ್ನಾಡು, ತೆಲಂಗಾಣ, ಬಂಗಾಳ, ಒಡಿಶಾ, ಕೇರಳದಂತಹ ರಾಜ್ಯಗಳಲ್ಲಿ 50 ಸ್ಥಾನಗಳನ್ನು ಪಡೆಯಲು ಹೆಣಗಾಡುತ್ತಿದೆ. ನಾನು ಪುನಃ ಕಾಂಗ್ರೆಸ್ಗೆ ಮರಳಿ ಅದಕ್ಕೆ ಪುನರ್ಜನ್ಮ ನೀಡಬೇಕು ಕಲ್ಪನೆ ಹಾಗೂ ಸಿದ್ಧಾಂತಗಳು ಹಾಗೆಯೇ ಉಳಿದಿವೆ ಮಿಕ್ಕೆಲ್ಲವೂ ಹೊಸದಾಗಿರಬೇಕು ಎಂದು ತಿಳಿಸಿದ್ದಾರೆ.
ಒಂದು ವೇಳೆ ಗಾಂಧಿ ಪರಿವಾರವು ಕಾಂಗ್ರೆಸ್ ತೊರೆದರು ಪಕ್ಷಕ್ಕೆ ಪುನಶ್ಚೇತನ ಸಾಧ್ಯವಿಲ್ಲ . ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಯಾವುದೇ ಬೃಹತ್ ಸದಸ್ಯತ್ವ ಅಭಿಯಾನವನ್ನು ನಡೆಸಿಲ್ಲ ಆಂತರಿಕ ಪ್ರಜಾಪ್ರಭುತ್ವ ಛಾಯೆಗಿಂತ ಅಧಿಕಾರದ ಮೇಲೆ ಆಸೆ ಹೆಚ್ಚಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯವಾಗಿ ರಾಷ್ಟ್ರೀಯ ಪಕ್ಷವಾಗಿ ಹೊಹೊಮ್ಮಲು ಬಯಸುವ ಪಕ್ಷಗಳು ಕನಿಷ್ಠ 10-15 ವರ್ಷಗಳ ದೂರದೃಷ್ಟಿ ಹೊಂದಿರಬೇಕು ಇದಕ್ಕೆ ಯಾವುದೇ ಅಡ್ಡ ದಾರಿ ಇರುವುದಿಲ್ಲ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.