ಕರ್ನಾಟಕದಲ್ಲಿ ಕಾಂಗ್ರೆಸ್ ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದ್ದು ಈ ಮೂಲಕ ದಕ್ಷಿಣ ಭಾರತದಲ್ಲಿ ಮೋದಿ ಮೇನಿಯಾ ವರ್ಕೌಟ್ ಆಗಲ್ಲ ಅನ್ನೋದು ಸಾಬೀತಾದಂತಾಗಿದೆ. ಇನ್ನು ಈ ಬಾರಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿರುವ ವಿಚಾರವಾಗಿ ನಟ ಪ್ರಕಾಶ್ ರಾಜ್ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಧರ್ಮಾಧಂತೆ ಹಾಗೂ ದ್ವೇಷವನ್ನು ಕಿತ್ತೊಗೆದ ಕರ್ನಾಟಕದ ಜನತೆಗೆ ಧನ್ಯವಾದಗಳು. ಬೆತ್ತಲೆಯಾದ ಚಕ್ರವರ್ತಿ ಎಂದು ಬರೆದುಕೊಂಡಿದ್ದಾರೆ.

ಇನ್ನು ಕೆಲವು ದಿನಗಳ ಹಿಂದೆ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಕಾಣಿಸಿಕೊಂಡಿದ್ದ ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಕೂಡ ಟ್ವೀಟ್ ಮಾಡಿದ್ದು ದ್ವೇಷ ಮತ್ತು ಭ್ರಷ್ಟಾಚಾರವನ್ನು ಸೋಲಿಸಿದ್ದಕ್ಕಾಗಿ ಹಾಗೂ ಸಹೋದರತ್ವ, ಕನ್ನಡ ಹೆಮ್ಮೆ ಹಾಗೂ ಪ್ರಗತಿಯನ್ನು ಅಪ್ಪಿಕೊಂಡ ಕನ್ನಡಿಗರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ .