ಮಡಿಕೇರಿಯಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣದ ನಂತರ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ನಗರದ ಕಲಾಮಂದಿರಕ್ಕೆ ಬರುತ್ತಿದ್ದಂತೆ ಕಪ್ಪು ಬಾವುಟ ಪ್ರದರ್ಶಿಸಿದರು. ಈಗ ಮೈಸೂರಿನ ಟಿ. ನರಸೀಪುರದ ಗರ್ಗೇಶ್ವರಿ ಗ್ರಾಮಕ್ಕೆ ಎಸ್ ಟಿ ಸೋಮಶೇಖರ್ ಆಗಮಿಸುವ ಮುನ್ನವೇ ಕೈ ಕಾರ್ಯಕರ್ತರು ಪ್ರತಿಭಟನರೆ ನಡೆಸಿದ್ದು ಈ ಘಟನೆ ಸಂಬಂಧ ಕೈ ಕಾರ್ಯಕರ್ತರು, ಸಿದ್ದು ಅಭಿಮಾನಿಗಳ ಬಂಧಿಸಿದ್ದಾರೆ.
ಪೊಲೀಸರ ವಿರುದ್ಧ ದಿಕ್ಕಾರ ಕೂಗಿದ ಸಿದ್ದು ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು. ರಾಜ್ಯದಲ್ಲಿ ಬ್ರಿಟಿಷ್ ಸರ್ಕಾರ ಆಡಳಿತದಲ್ಲಿದೆ. ಶಾಂತಿಯುತ ಪ್ರತಿಭಟನೆ ನಿರತರನ್ನ ಅರೆಸ್ಟ್ ಮಾಡುವುದು ಎಷ್ಟರ ಮಟ್ಟಿಗೆ ಸರಿ.? ಪೊಲೀಸ್ ಇಲಾಖೆ ಗುಂಡಾಗಿರಿ ಅನುಸರಿಸುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಇದಕ್ಕೆಲ್ಲ ತಕ್ಕ ಉತ್ತರ ಕೊಡುತ್ತೇವೆ ಎಂದು ಗುಡುಗಿದ್ದಾರೆ.
ದೇವರಾಜ ಅರಸು ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸೋಮಶೇಖರ್ ಅವರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದ್ದಾರೆ. ಸೋಮಶೇಖರ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಕಲಾ ಮಂದಿರದ ಒಳಗೆ ಪ್ರವೇಶಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದ ಪೊಲೀಸರು ಕಾರ್ಯಕ್ರಮ ಮುಗಿದ ಬಳಿಕ ಸಚಿವರನ್ನು ಹಿಂದಿನ ಗೇಟ್ ನಿಂದ ಕಳುಹಿಸಿದ್ಧಾರೆ. ಇಂದು ಟಿ. ನರಸೀಪುರದ ಗರ್ಗೇಶ್ವರಿ ಗ್ರಾಮಕ್ಕೆ ಭೇಟಿ ನೀಡಲು ಬಂದಿದ್ದ ಅವರ ವಿರುದ್ದ ಪ್ರತಿಬಟನೆ ದಾಖಲಾಗಿದೆ.