ರಾಜ್ಯದಲ್ಲಿ ಹಾಲಿನ ದರ (Milk price hike), ವಿದ್ಯುತ್ ದರ,ಕಸದ ಸೆಸ್,ಡೀಸೆಲ್ ದರ (Diesel) ಏರಿಕೆ ಖಂಡಿಸಿ ರಾಜ್ಯ ಬಿಜೆಪಿ ಪಾಳಯ, ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾಗಿದ್ದು, ನಿನ್ನೆಯಿಂದ ಎಲ್ಲಾ ಜಿಲ್ಲೆಗಳಲ್ಲೂ ಜನಾಕ್ರೋಶಕ್ಕೆ ಯಾತ್ರೆ ನಡೆಸಲು ಮುಂದಾಗಿದೆ.

ಈ ಮಧ್ಯೆ ಬಿಜೆಪಿ ನಾಯಕರ ಈ ಜನಾಕ್ರೋಶ ಯಾತ್ರೆಗೆ ಡಿಸಿಎಂ ಡಿಕೆ ಶಿವಕುಮಾರ್ (Dk Shivakumar) ತಿರುಗೇಟು ಕೊಟ್ಟಿದ್ದಾರೆ. ಬೆಲೆ ಏರಿಕೆ ಆರಂಭವಾಗಿದ್ದೇ ಬಿಜೆಪಯವರಿಂದ. ಕೇಂದ್ರ ಸರ್ಕಾರ ಕೂಡ ಬೆಲೆ ಏರಿಕೆ ಮಾಡಿ ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದಿದ್ದಾರೆ.

ಕೇಂದ್ರ ಸರಕಾರ ಅಡುಗೆ ಅನಿಲದ ದರ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ (Petrol & diesel ) ಏರಿಸಿರುವುದರ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಜನಾಕ್ರೋಶ ಯಾತ್ರೆ ಮಾಡುವಂತೆ ರಾಜ್ಯ ಬಿಜೆಪಿ ಮುಖಂಡರಿಗೆ ಡಿಸಿಎಂ ಡಿಕೆ ಶಿವಕುನಾರ್ ಆಗ್ರಹಿಸಿದ್ದಾರೆ.ಆ ಮೂಲಕ ಬೆಲೆ ಏರಿಕೆ ಹಾಗೂ ಜನಾಕ್ರೋಶರ ಯಾತ್ರೆ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪರಸ್ಪರ ಜಟಾಪಟಿ ಏರ್ಪಟ್ಟಿದೆ.