2024 ರ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ, ಮುಂದಿನ ವಾರದೊಳಗೆ ಮೊದಲ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಸಂಪೂರ್ಣ ಸಿದ್ಧತೆ ಮುಕ್ತಾಯವಾಗಿರಬೇಕು ಎಂದು ರಾಜ್ಯ ನಾಯಕರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಾಕೀತು ಮಾಡಿದ್ದಾರೆ. ಜೊತೆಗೆ ರಾಜ್ಯದ ಬಿಜೆಪಿ ನಾಯಕರಿಗೆ ಟಾಸ್ಕ್ ಕೊಟ್ಟು ದೆಹಲಿಗೆ ತೆರಳಿದ್ದಾರೆ ಅಮಿತ್ ಶಾ.

ಕಳೆದ ಮೂರು ದಿನಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ್ದ ಅಮಿತ್ ಶಾ,
ಭೇಟಿಯ ವೇಳೆ ನಾಯಕರಿಗೆ ಹೊಸ ಟಾಸ್ಕ್ ಕೊಟ್ಟಿದ್ದಾರೆ. ಮುಂದಿನ ಒಂದು ವಾರದೊಳಗೆ ಮೊದಲ ಹಂತದ ಮತದಾನ ನಡೆಯುವ ಕ್ಷೇತ್ರಗಳ ಸಂಪೂರ್ಣ ಸಿದ್ಧತೆ ಮುಗಿದಿರಬೇಕು. ಪೇಜ್ ಪ್ರಮುಖ್, ಬೂತ್‌ಮಟ್ಟದ ಸಂಘಟನೆಯಲ್ಲಿ ಗೊಂದಲ ನಿವಾರಣೆ, ಪ್ರತಿ ಕಾರ್ಯಕರ್ತರ ಮೊಬೈಲ್ ಡಿಪಿಯಲ್ಲಿ ನರೇಂದ್ರ ಮೋದಿ ಫೋಟೋ, ಧನ್ಯವಾದ್ ಅಭಿಯಾನಕ್ಕೆ ಬೆಂಬಲ, ಹೀಗೆ ಎಲ್ಲಾ ಸಂಪೂರ್ಣ ಸಿದ್ಧತೆ ಮುಂದಿನ ವಾರದೊಳಗೆ ಎಲ್ಲವನ್ನೂ ಮುಗಿಸಬೇಕು.
2018 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಹೇಗೆ ಕಾರ್ಯನಿರ್ವಹಣೆ ಮಾಡಿದ್ರೋ, ಹಾಗೆಯೇ ಈಗಲೂ ಆಗಬೇಕು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಮಧ್ಯಾಹ್ನ 1 ಘಂಟೆಯೊಳಗೆ ಮತದಾನ ಮುಗಿದಿರಬೇಕು.ಅದರ ರಿಪೋರ್ಟ್ ದೆಹಲಿಗೆ ತಲುಪಿಸಬೇಕು.ಎಲ್ಲಿಯೂ ಗೊಂದಲ ಎಡವಟ್ಟು ಬೇಡ. 14 ಕ್ಷೇತ್ರಗಳಿಗೆ 14 ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಬೇಕೆಂದು ಟಾಸ್ಕ್ ಕೊಟ್ಟು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಅಮಿತ್ ಶಾ.


