ಆನ್‌ಲೈನ್ ರಮ್ಮಿ (Rummy Game) ಹಾಗೂ ಜೂಜ್ ಆಡಿಸುವ ಕಂಪನಿಗಳ (Online Betting Apps) ವಿರುದ್ದ ದೂರು- ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದ ಜಯಪ್ರಕಾಶ್ ನಾರಾಯಣ್ (Jayaprakash Narayan) ವಿಚಾರ ವೇದಿಕೆ

ಆನ್‌ಲೈನ್ ರಮ್ಮಿ ಹಾಗೂ ಆನ್‌ಲೈನ್ ಜೂಜು ಆಡಿಸುವ ಕಂಪನಿಗಳ ವಿರುದ್ದ ಮಾನವ ಹಕ್ಕುಗಳ ಆಯೋಗಕ್ಕೆ ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ ಅಧ್ಯಕ್ಷ ಶಿವಕುಮಾರ್ (Shivakumar) ದೂರು ನೀಡಿದ್ದಾರೆ.. ಆನ್ ಲೈನ್ ಗೇಮ್‌ಗಳ (Online Games) ಬಲೆಗೆ ಬಿದ್ದು, ಲಕ್ಷಾಂತರ ಜನ ಬೀದಿಗೆ ಬಂದಿದ್ದಾರೆ. ನೂರಾರು ಜನ ಜೂಜು ಆಡಲು ಸಾಲ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.

ಹೀಗಾಗಿ, ಇಂತಾ ಆನ್ ಲೈನ್ ಜೂಜ್ ಆಡುವ ಗೇಮ್‌ಗಳನ್ನ ಬ್ಯಾನ್ ಮಾಡುವಂತೆ ಮಾನವ ಹಕ್ಕುಗಳ ಆಯೋಗಕ್ಕೆ ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ ದೂರು ನೀಡಿದೆ.. ಇನ್ನು ದೂರಿನಲ್ಲಿ ಹಲವು ವಿಚಾರಗಳನ್ನ ಮುಂದಿಟ್ಟು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.. ಇತ್ತಿಚಿನ ದಶಕದಲ್ಲಿ ಆನ್‌ಲೈನ್ ರಮ್ಮಿ ಸೇರಿದಂತೆ ಹಲವಾರು ಆನ್‌ಲೈನ್ ಜೂಜುಗಳಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಮುಕ್ತವಾಗಿ ಅವಕಾಶ ನೀಡಿವೆ.

ಈ ಆನ್‌ಲೈನ್ ಜೂಜುಗಳು ಇಂದು ದೇಶದ ಪ್ರತಿ ಮನೆ ಮನೆಯನ್ನು ಮೊಬೈಲ್ ಫೋನ್‌ಗಳ (through Mobile Phones) ಮೂಲಕ ಪ್ರವೇಶಿಸಿ ದೇಶದ ಜನರ ಬದುಕನ್ನೇ ನಾಶ ಮಾಡುತ್ತಿವೆ. ಇನ್ನು ದೇಶದ ಪ್ರಸಿದ್ಧ ಜೂಜಿನ ಕಂಪನಿಗಳು ಸ್ಟಾರ್ ಸಿನಿಮಾ ತಾರೆಯರ ಮೂಲಕ ಹಲವು ನ್ಯೂಸ್ ಚಾನೆಲ್‌ಗಳು(News Channels) , ಯೂಟ್ಯೂಬ್‌ಗಳಲ್ಲಿ (Youtube) ಹಾಗೂ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ (Social Media) ದೇಶದ ಜನರೇ ನೀವೆಲ್ಲರೂ ಜೂಜಾಡಿ, ಜೂಜಾಡಿ ಅಂತಾ ಪ್ರಚೋದಿಸುತ್ತಿದ್ದಾರೆ.
ಇದೆಲ್ಲದರ ಪರಿಣಾಮ ಬಡವ, ಶ್ರೀಮಂತ, ವಯಸ್ಕರು, ಮಕ್ಕಳು ಎಂಬ ಭೇದವಿಲ್ಲದೆ ಇಂದು ದೇಶದ ಕೋಟ್ಯಾಂತರ ಜನರು, ಈ ಆನ್‌ಲೈನ್ ಜೂಜಿಗೆ ದಾಸರಾಗಿದ್ದಾರೆ. ಇದು ಹೀಗೆ ಮುಂದುವರಿದರೆ ಜನರ ಬದುಕುವ ಹಕ್ಕುಗಳಿಗೆ ಚ್ಯುತಿ ಬರುವುದಲ್ಲದೇ, ನಮ್ಮ ದೇಶ ಜೂಜುಗಾರರ ದೇಶವಾಗಿ ಪರಿವರ್ತನೆಯಾಗುವುದರಲ್ಲಿ ಯಾವಿದೇ ಸಂಶಯವಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ..

ಇಷ್ಟಾದರೂ ಆನ್‌ಲೈನ್ ಜೂಜುಗಳ ದುಷ್ಪರಿಣಾಮಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನಕ್ಕಿದ್ದರೂ ಕೂಡ ಇದುವರೆಗೂ ಯಾವ ಸರ್ಕಾರಗಳು ನಿಷೇಧಿಸಿಲ್ಲ. ಇನ್ನಾದರೂ ಮಾನವ ಹಕ್ಕುಗಳ ಆಯೋಗ ಆನ್‌ಲೈನ್ ಜೂಜುಗಳನ್ನ ನಿಷೇಧಿಸಬೇಕೆಂದು ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ ಮನವಿ ಮಾಡಿದೆ..










