ಮುಡಾ ಹಗರಣ (MUDA sam) ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ (cm siddaramaiah) ವಿರುದ್ಧ ಇಂದು ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ (Mysuru lokayukta) ದೂರು ದಾಖಲಾಗಿದೆ. ಹೈಕೋರ್ಟ್ ನಿನ್ನೆ ನೀಡಿದ ತೀರ್ಪಿನ ಪ್ರತಿಯೊಂದಿಗೆ ದೂರುದಾರ ಪ್ರದೀಪ್ ಕುಮಾರ್ ದೂರು ದಾಖಲಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ದೂರುದಾರ ಪ್ರದೀಪ್ ಕುಮಾರ್‌ಗೆ (Pradeeep kumar) ಮೈಸೂರಿನ ಜೆಡಿಎಸ್ (Ids) ನಾಯಕರು ಸಾಥ್ ನೀಡಿದ್ದಾರೆ. ಇದಕ್ಕಾಗಿಯೇ ಬೆಂಗಳೂರಿನಿಂದ ಮೈಸೂರಿನ ಲೋಕಾಯುಕ್ತ ಕಚೇರಿಗೆ ಹೋಗಿ ಪ್ರದೀಪ್ ದೂರು ನೀಡಿದ್ದಾರೆ.
ಈ ಹಿಂದೆಯೂ ಸಿಎಂ ವಿರುದ್ಧ ಲೋಕಾಯುಕ್ತಕ್ಕೆ ಪ್ರದೀಪ್ ಕುಮಾರ್ ದೂರು ನೀಡಿದ್ದರಾದ್ರೂ, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳೋದಾಗ್ಲಿ ಎಫ್.ಐ.ಆರ್ (FIR) ರಿಜಿಸ್ಟರ್ ಮಾಡೋದಾಗ್ಲಿ ಆಗಿರಲಿಲ್ಲ. ಇದೀಗ ಮತ್ತೊಮ್ಮೆ ನ್ಯಾಯಾಲಯದ ತೀರ್ಪಿನ ಪ್ರತಿಯ ಜೊತೆಗೆ ಮತ್ತೊಮ್ಮೆ ಪ್ರದೀಪ್ ಕುಮಾರ್ ದೂರು ನೀಡಿದ್ದಾರೆ.











