ಕರಾವಳಿ ಎಂದ ತಕ್ಷಣ ಮೊದಲು ನೆನಪಾಗುತ್ತಿದ್ದ ಕೋಮು ವೈಷಮ್ಯದ ಪ್ರಕರಣಗಳು ಇದೀಗ ಕರಾವಳಿಯಲ್ಲಿ ಮಾತ್ರವಲ್ಲದೆ ರಾಜ್ಯದ ಬೇರೆ ಜಿಲ್ಲೆಗಳಲ್ಲೂ ಹೆಚ್ಚು ಹೆಚ್ಚು ವರದಿಯಾಗುತ್ತಿದೆ. ಹೆಚ್ಚಾಗಿ ಜಾತಿ ವೈಷಮ್ಯ ಕಾಣಿಸಿಕೊಳ್ಳುತ್ತಿದ್ದ ಜೆಲ್ಲೆಗಳಲ್ಲಿ ಇದೀಗ ಕೋಮು ವೈಷಮ್ಯದ ಪ್ರಕರಣಗಳು ಕಾಣಿಸಿಕೊಳ್ಳಲು ಶುರುವಾಗಿದೆ.
ಯಾವ ಇತರ ಜಿಲ್ಲೆಗಳಲ್ಲಿ ಕೋಮು ಸೂಕ್ಷ್ಮ ಪ್ರಕರಣಗಳು ನಡೆದಿದ್ದವು? ಅವುಗಳು ಯಾವ ಮಟ್ಟದಲ್ಲಿ ಆರಂಭವಾದವು ಎನ್ನುವುದನ್ನು ಗಮನಿಸುವುದಾದರೆ, ಪ್ರತೀ ಬಾರಿ ಚುನಾವಣಾ ಸಂದರ್ಭಗಳಲ್ಲಿ ಕೋಮು ಸಂಬಂಧಿತ ವೈಷಮ್ಯದ ಪ್ರಕರಣಗಳು ಕಾಣಿಸಿಕೊಳ್ಳುವುದು ಸಹಜವಾಗಿದೆ. ಇದೀಗ ಇಂತಹ ಒಂದಿಷ್ಟು ಪ್ರಕರಣಗಳನ್ನು ರಾಜ್ಯದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದೆ.
ಪ್ರಕರಣ 1- ಬೆಳಗಾವಿ ಶಿರಚ್ಛೇದ ಪ್ರಕರಣ
ಬೆಳಗಾವಿಯಲ್ಲಿ 24 ವರ್ಷದ ಅರ್ಬಜ್ ಎಂಬ ಯುವಕ ಹಿಂದೂ ಯುವತಿಯನ್ನು ಪ್ರೇಮಿಸಿದ ಎನ್ನುವುದು ಆತನ ಜೀವಕ್ಕೇ ಮುಳುವಾಗಿದೆ. ಅದು ಧರ್ಮ ಮೀರಿ ಹುಟ್ಟಿದ ಪ್ರೇಮವಾಗಿತ್ತು. ಅರ್ಬಾಜ್ ಮುಲ್ಲಾ ಮೂಲತಃ ಬೆಳಗಾವಿ ಜಿಲ್ಲೆಯ ಖಾನಾಪುರ ನಿವಾಸಿ. ಅವನು ಪ್ರೀತಿಸಿದ್ದ ಹುಡುಗಿ ಕೂಡ ಖಾನಾಪುರ ಮೂಲದವಳು.

ಕಳೆದ ಎರಡು ವರ್ಷಗಳಿಂದ ಅರ್ಬಾಜ್ ಹಾಗೂ ಯುವತಿ ಪರಸ್ಪರ ಇಷ್ಟಪಟ್ಟು ಜೊತೆಯಲ್ಲೇ ಓಡಾಡುತ್ತಿದ್ದರು. ಆದರೆ, ಹಿಂದೂ ಸಂಘಟನೆಯೊಂದಿಗಿನ ಕಲಹದಿಂದ ಅರ್ಬಾಜ್ ನ ಕೈಕಾಲುಗಳನ್ನು ಕಟ್ಟಿ, ತಲೆ ಕತ್ತರಿಸಿ, ರೈಲ್ವೇ ಹಳಿಗಳ ಮೇಲೆ ಎಸೆಯಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ, ಶ್ರೀ ರಾಮ ಸೇನೆ ಹಿಂದೂ ಸ್ಥಾನ್ ಸಂಘಟನೆಯ ಎಂಟು ಜನರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣ 2- ಬೆಂಗಳೂರು, ಬೆಳಗಾವಿಯಲ್ಲಿ ಮುಸ್ಲಿಂ ಮೂಲಭೂತವಾದಿಗಳ ನೈತಿಕ ಪೊಲೀಸ್ಗಿರಿ
ಕೆಲ ದಿನಗಳ ಹಿಂದೆ ಬೆಳಗಾವಿಯಲ್ಲಿ ಅನ್ಯಕೋಮಿಯ ಯುವತಿಯ ಜೊತೆ ಸುತ್ತಾಡುತ್ತಿದ್ದ ಯುವಕ ಹಾಗೂ ಯುವತಿಯ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ್ದ ಆಟೋ ಚಾಲಕ ದಾವತ್ ಕತೀಬ್, ಅಯೂಬ್ ಮತ್ತು ಯುಸೂಫ್ ಪಠಾಣ್ನನ್ನು ಪೊಲೀಸರು ಬಂಧಿಸಿದ್ದಾರೆ. ಅನ್ಯಕೋಮಿನ ಯುವತಿಯ ಜತೆ ಸುತ್ತಾಡಿದ್ದಕ್ಕೆ ಆರೋಪಿಗಳು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಯುವಕ ಹಾಗೂ ಯುವತಿಯ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇತ್ತೀಚೆಗೆ ಬೆಂಗಳೂರಿನಲ್ಲಿ ಕೂಡಾ ತನ್ನ ಸಹೋದ್ಯೋಗಿ ಯುವತಿಯನ್ನು ಮನೆಗೆ ಡ್ರಾಪ್ ಮಾಡಲು ತೆರಳುತ್ತಿದ್ದ ವೇಳೆ, ಕೆಲವು ಮುಸ್ಲಿಂ ಸಮುದಾಯದ ವ್ಯಕ್ತಿಗಳು ಗಾಡಿಗೆ ಅಡ್ಡಗಟ್ಟಿ ನೈತಿಕ ಪೊಲೀಸ್‌ಗಿರಿ ನಡೆಸಿ, ಗಲಾಟೆ ನಡೆಸಿದ್ದರು. ಅನ್ಯಧರ್ಮದ ಯುವಕನ ಜೊತೆಗೆ ತೆರಳುತ್ತಿದ್ದಕ್ಕಾಗಿ ಯುವತಿಯನ್ನು ನಿಂದಿಸಿದ್ದರು. ಆ ಸಂದರ್ಭದಲ್ಲಿ ಯುವತಿ ತನ್ನ ಗಂಡನ ದೂರವಾಣಿ ಸಂಖ್ಯೆ ನೀಡಿದ್ದರು. ಬೇರೆ ಯುವಕನ ಜೊತೆಗೆ ಹೆಂಡತಿಯನ್ನು ಕಳುಹಿಸಿದಕ್ಕಾಗಿ ಯುವತಿಯ ಪತಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ್ದರು. ಯುವತಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳಾದ ಸೊಹೇಲ್ ಹಾಗೂ ನಯಾಜ್ ವಿರುದ್ಧ ಐಪಿಸಿಯ 7 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ: 3 – ಗಂಗೊಳ್ಳಿಯಲ್ಲಿ ನಡೆದ ಘಟನೆ
ರಾಜ್ಯದ ಪ್ರಮುಖ ಮೀನುಗಾರಿಕಾ ಸ್ಥಳ ಗಂಗೊಳ್ಳಿ. ಇಲ್ಲಿ ಕಳೆದ ತಿಂಗಳು ಅಕ್ಟೋಬರ್ 1 ರಂದು ಗೋಹತ್ಯೆ ವಿರೋಧದ ಬಗ್ಗೆ ಹಿಂದೂಗಳ ಗುಂಪು ರ್ಯಾಲಿ ನಡೆಸಿದೆ. ಪ್ರವಾದಿ ಹಾಗೂ ಮುಸ್ಲಿಂ ಸಮುದಾಯದ ವಿರುದ್ಧ ನಡೆದ ಅವಹೇಳನಕಾರಿಯಾದ ಘೋಷನೆಗಳನ್ನು ಕೂಗುತ್ತಾ ಹಿಂದೂ ಸಂಘಟನೆ ಸ್ಥಳದಲ್ಲಿ ಉದ್ವಿಗ್ನದ ಪರಿಸ್ಥಿತಿ ಸೃಷ್ಟಿಸಿತ್ತು.
ಅದಾದ ಬಳಿಕ ಸ್ಥಳೀಯ ಮುಸ್ಲಿಮರು ಹಿಂದೂ ಮೀನು ಮಾರಾಟಗಾರರೊಂದಿಗೆ ವ್ಯಾಪಾರ, ವಹಿವಾಟು ನಡೆಸುವುದನ್ನು ಬಹಿಷ್ಕರಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.

ಪ್ರಕರಣ ೪- ಮೂಡಬಿದ್ರೆಯಲ್ಲಿ ಹಿಂದೂ ಸಂಘಟನೆಗಳ ನೈತಿಕ ಪೊಲೀಸ್ ಗಿರಿ
ಕಾರಿನಲ್ಲಿ ತೆರಳುತ್ತಿದ್ದ ಕಾರ್ಕಳ ಮೂಲದ ಮುಸ್ಲಿಂ ದಂಪತಿ ಜೊತೆ ತೆರಳಿದ್ದ ಹಿಂದೂ ಸಮುದಾಯದ ಇಬ್ಬರು ಯುವತಿಯರನ್ನು ಸುಮಾರು 8 ಹಿಂದೂ ಸಂಘಟನೆಯ ಜನರು ತಡೆದು ನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆ. ಮೊದಲಿಗೆ ಯುವತಿಯರನ್ನು ಯಾವ ಧರ್ಮದವರೆಂದು ಪ್ರಶ್ನಿಸಿ, ನಂತರ ಹಿಂದೂ ಯುವತಿರನ್ನು ಮುಸ್ಲಿಂ ಧರ್ಮದವರ ಜೊತೆ ಯಾಕೆ ತೆರಳಿದ್ದೀರಿ ಎಂದು ಪ್ರಶ್ನಿಸಿ ಅವಮಾನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ 5- ವಿದ್ಯಾರ್ಥಿಗಳ ಮೇಲಿನ ಹಲ್ಲೆ
ಗದಗದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಮತ್ತೊಂದು “ಬಾಬರಿ ಮಸೀದಿಯಂತಹ ಚಳುವಳಿ” ಗಾಗಿ ಮುಕ್ತ ಕರೆ ನೀಡಿದ್ದರು, ಇದರಿಂದ ಪ್ರೇರೇಪನೆಗೊಂಡ ಯುವಕರ ತಂಡವೊಂದು ಬಾಗಲಕೋಟೆ ಜಿಲ್ಲೆಯ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ಸ್ಕಲ್ ಕ್ಯಾಪ್ ಧರಿಸಿದ್ದಕ್ಕಾಗಿ ಹಲ್ಲೆ ನಡೆಸಿದ್ದರು.

ತೀರಾ ಇತ್ತೀಚಿನ ಪ್ರಕರಣಗಳಲ್ಲಿ ಒಂದಾಗಿರುವ ವಿಜಯಪುರ ಪ್ರಕರಣ ಕೋಮು ಸೌಹಾರ್ದತೆಯ ನಡುವಿನ ಬಿರುಕನ್ನು ಮತ್ತೊಮ್ಮೆ ನೆನಪಿಸುವಂತಿದೆ. ಮುಸ್ಲಿಂ ಯುವತಿಯೊಂದಿಗೆ ಸಂಬಂಧ ಹೊಂದಿದ್ದ ಕಾರಣಕ್ಕಾಗಿ ವಿಜಯಪುರ ಜಿಲ್ಲೆಯ ಅಲ್ಮೆಲ್ ಎಂಬಲ್ಲಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಸರಣಿ ನೈತಿಕ ಪೋಲಿಸ್ಗಿರಿ ನಡೆದರೂ ತಲೆಕೆಡಿಸಿಕೊಳ್ಳದ ಮುಖ್ಯಮಂತ್ರಿ.!
ರಾಜ್ಯದಲ್ಲಿ ಕೋಮು ವೈಷಮ್ಯ ಸೃಷ್ಟಿಸುವಂತಹ ಹಲವು ಪ್ರಕರಣಗಳು ದಾಖಲಾಗುತ್ತಿದ್ದರೂ ರಾಜ್ಯದ ಮುಖ್ಯಮಂತ್ರಿ ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಕರಣಗಳನ್ನು ಹತ್ತಿಕ್ಕಲು ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳದೇ ಕೇವಲ ಹಾರಿಕ…






