9 ಕೋಟಿ ರೂಪಾಯಿ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ಖ್ಯಾತ ನಟ ರಾಜ್ಪಾಲ್ ಯಾದವ್ ತಿಹಾರ್ ಜೈಲು ಸೇರಿದ್ದರು. ಈಗ ರಾಜ್ ಪಾಲ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನುನೀಡಿದೆ.

ಸಂಬಂಧಿಕರ ಮದುವೆ ಇದೆ ಎಂಬ ಕಾರಣವನ್ನು ನೀಡಿ ರಾಜ್ಪಾಲ್ ಯಾದವ್ ಅವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು (ಫೆ.16) ವಿಚಾರಣೆ ನಡೆಸಿದ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಮಧ್ಯಾಹ್ನ 3 ಗಂಟೆ ಒಳಗೆ 1.3 ಕೋಟಿ ರೂಪಾಯಿ ಹಣವನ್ನು ಪಾವತಿ ಮಾಡುವಂತೆ ಸೂಚಿಸಲಾಗಿತ್ತು. ಹಣ ಹೊಂದಿಸಿದ ಬಳಿಕ ಅವರಿಗೆ ಜಾಮೀನು ನೀಡಲಾಯಿತು.

2010 ರಲ್ಲಿ ಯಾದವ್ ಮೊದಲ ಬಾರಿ ನಿರ್ದೇಶಿಸಿದ್ದ ಅತಾ,ಪತಾ,ಲಾಪತಾ ಸಿನಿಮಾಗಾಗಿ ಮುರಳಿ ಪ್ರಾಜೆಕ್ಟ್ಸ್ ಕಂಪನಿ ಹತ್ತಿರ 5 ಕೋಟಿ ರೂಪಾಯಿ ಸಾಲವನ್ನು ಪಡೆದಿದ್ದರು. ಈ ಹಣವನ್ನು ಹಿಂದಿರುಗಿಸಿದ ಹಿನ್ನಲೆ ಈ ಕಂಪನಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತು. ಸಾಲ ಪಡೆದ ಮೊತ್ತವನ್ನು ಮರು ಪಾವತಿಸದ ಕಾರಣ ಈಗ ರಾಜ್ಪಾಲ್ 9 ಕೋಟಿ ರೂಪಾಯಿ ಆರ್ಥಿಕ ವಂಚನೆ ಪ್ರಕರಣದಲ್ಲಿ ಜೈಲನ್ನು ಸೇರಿದ್ದಾರೆ.
ಮಾರ್ಚ್ 18ರ ತನಕ ರಾಜ್ಪಾಲ್ ಯಾದವ್ ಅವರು ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಇರಲಿದ್ದು, ಮತ್ತೆ ಈ ಪ್ರಕರಣದ ವಿಚಾರಣೆ ನಡೆಯಲಿದೆ.






