• Home
  • About Us
  • ಕರ್ನಾಟಕ
Saturday, December 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಅಂಕಣ | ಆರ್‌ಎಸ್‌ಎಸ್‌ ಶಾಲೆಗಳು: ಕೋಮುವಾದದ ಪಠ್ಯಪುಸ್ತಕಗಳುˌ ವಿಷ ಬಿತ್ತುವಿಕೆ – ಭಾಗ 9

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
August 1, 2023
in ಅಂಕಣ, ಅಭಿಮತ
0
ಅಂಕಣ | ಆರ್‌ಎಸ್‌ಎಸ್‌ ಶಾಲೆಗಳು: ಕೋಮುವಾದದ ಪಠ್ಯಪುಸ್ತಕಗಳುˌ ವಿಷ ಬಿತ್ತುವಿಕೆ – ಭಾಗ 9
Share on WhatsAppShare on FacebookShare on Telegram

~ಡಾ. ಜೆ ಎಸ್ ಪಾಟೀಲ.

ADVERTISEMENT

ಸಂಘ ಸಂಚಾಲಿತ ಶಾಲೆಗಳು ಅಲ್ಲಿ ಕಲಿಯುವ ಮಕ್ಕಳನ್ನು ವಿದ್ಯಾರ್ಥಿಗಳಿಂದ ಹಿಂದುತ್ವದ ಕಾಲಾಳುಗಳಾಗಿ ಬದಲಾಯಿಸುತ್ತವೆ ಎನ್ನುತ್ತಾರೆ ಅಲ್ಲಿನ ಹಳೆಯ ವಿದ್ಯಾರ್ಥಿಗಳು. ದಿ ವೈರ್ ವರದಿಗಾರರು ಮಾಡಿದ ಹಳೆ ವಿದ್ಯಾರ್ಥಿಗಳ ಸಂದರ್ಶನಗಳ ಸರಣಿಯಲ್ಲಿ, ವಿದ್ಯಾಭಾರತಿ ಶಾಲೆಗಳ ಮಾಜಿ ವಿದ್ಯಾರ್ಥಿಗಳು ತಮ್ಮ ಶಾಲೆಗಳು ಆಯೋಜಿಸಿದ ಪಠ್ಯಕ್ರಮˌ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳು ತಮ್ಮನ್ನು ಹಿಂದುತ್ವ ಪರಿಸರ ವ್ಯವಸ್ಥೆಯ ಭಾಗವಾಗಿ ಹೇಗೆ ಮಾಡಿದವು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅವರಲ್ಲಿ ಕೆಲವರು ಇನ್ನೂ ತಮ್ಮನ್ನು ಸಂಪೂರ್ಣವಾಗಿ ಆ ಹಿಂದುತ್ವದಿಂದ ಹಿಂದೆ ಸರಿಯಲು ಸಾಧ್ಯವಾಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ೬೦ ವರ್ಷದ ಮುದುಕರಿಂದ ಹಿಡಿದು ಹದಿಹರೆಯದ ಯುವಕರು, ಅಲ್ಲಿ ಗರಿಗರಿಯಾದ ಖಾಕಿ ಹಾಫ್ ಚಡ್ಡಿ ಮತ್ತು ಶುಭ್ರ ಬಿಳಿ ಅಂಗಿ ತೊಟ್ಟು, ತಲೆಯ ಮೇಲೆ ಕಪ್ಪು ಟೋಪಿಗೆಯನ್ನು ಧರಿಸುತ್ತಿದ್ದರು. ಆರ್‌ಎಸ್‌ಎಸ್ ನ ‘ಶಕ್ತಿ ಪ್ರದರ್ಶನ’ ಭಾಗವಾದ ಪಥಸಂಚಲನದ ಮೆರವಣಿಗೆಯಲ್ಲಿ ಅವರೆಲ್ಲರು ಭಾಗವಹಿಸುತ್ತಿದ್ದರು ಎಂದು ಆ ಹಳೆ ವಿದ್ಯಾರ್ಥಿಗಳು ಹೇಳುತ್ತಾರೆ.

ಸಂಘದ ಈ ಪಥಸಂಚಲನವು ದೇಶದ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಭಯವನ್ನು ಹುಟ್ಟಿಸುವ ಹಿಂದೂ ಬಲಪಂಥೀಯರ ಸಶಸ್ತ್ರ ಶಕ್ತಿಯ ನಿರ್ಲಜ್ಜ ಪ್ರದರ್ಶನದಂತೆ ಕಾಣುತ್ತಿತ್ತು. ತಿಲಕ್ ಪಾಲ್ ಎನ್ನುವ ಹಳೆಯ ವಿದ್ಯಾರ್ಥಿ: “ಪ್ರತಿವರ್ಷ ದಸರಾದಲ್ಲಿ ಸಂಘಿಗಳು ತಲವಾರ್ˌ ಕತ್ತಿ, ತ್ರಿಶೂಲ, ಲಾಠಿ, ಬಂದೂಕು ಮುಂತಾದ ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದು ಹಾಡು ಹಗಲೆ ಅವುಗಳ ಪ್ರದರ್ಶನದೊಂದಿಗೆ ಮೆರವಣಿಗೆ ನಡೆಸುತ್ತಿದ್ದರು ಎನ್ನುತ್ತಾರೆ. ವಿದ್ಯಾಭಾರತಿ ಮತ್ತು ಆರ್‌ಎಸ್‌ಎಸ್‌ನ ಪ್ರಾದೇಶಿಕ ಕೇಂದ್ರ ಕಛೇರಿಯಾದ ಭೋಪಾಲ್‌ನಲ್ಲಿ ‘ಶಕ್ತಿ ಪ್ರದರ್ಶನ’ ನಡೆಸಲಾಗುತ್ತಿತ್ತು. ವಿದ್ಯಾಭಾರತಿಯ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸುತ್ತಿದ್ದರು. ಯಾವುದೇ ಅಧಿಕೃತ ಸೂಚನೆ ಇಲ್ಲದಿದ್ದರೂ ಸಹಿತ, ಎಲ್ಲರೂ ಅದರಲ್ಲಿ ಭಾಗವಹಿಸುವುದು ಕಡ್ಡಾಯ ಎಂದು ಶಿಕ್ಷಕರು ತರಗತಿಯಲ್ಲಿ ಘೋಷಿಸುತ್ತಿದ್ದರು. ಅಲ್ಲದೆ, ಜನರನ್ನು ಬೆದರಿಸಲು ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಈ ಮೆರವಣಿಗೆಗಳನ್ನು ಬೇಕೆಂತಲೆ ನಡೆಸಲಾಗುವುದು ಎಂದ ಅಘೋಷಿತ ನಿಯಮವಿದೆ ಎನ್ನುತ್ತಾರೆ ಹಳೆಯ ವಿದ್ಯಾರ್ಥಿಗಳು.

ಹಿಂದುಗಳ ಪ್ರತಿಯೊಂದು ದೊಡ್ಡ ಮಂದಿರಕ್ಕೆ ಸಮನಾಗಿ ಮುಸ್ಲಿಮರು ಈ ದೇಶದಲ್ಲಿ ಮಸೀದಿಯನ್ನು ನಿರ್ಮಿಸಿದ್ದಾರೆ ಎಂದು ನಮ್ಮ ಶಿಕ್ಷಕರು ಹೇಳುತ್ತಿದ್ದರು. ನಾವು ಮುಸ್ಲಿಮರ ವಿರುದ್ಧ ಒಂದು ಖಚಿತ ನಿಲುವು ತಾಳದಿದ್ದರೆ ನಮ್ಮ ಮಂದಿರಗಳಿಗೆ ಉಳಿಗಾಲವಿಲ್ಲ ಎನ್ನುತ್ತಿದ್ದರಂತೆ ಅಲ್ಲಿನ ಶಿಕ್ಷಕರು. ನಮ್ಮ ಶಾಲೆಗಳಲ್ಲಿ ಆರ್‌ಎಸ್‌ಎಸ್‌ನ ನೇರ ಹಸ್ತಕ್ಷೇಪವಿದೆ. ಸಂಘದ ನಾಯಕರು ಶಾಲೆಗಳಿಗೆ ಬಂದು: “ನೀವು ವಿವಿಧ ರೀತಿಯ ಶಸ್ತ್ರಾಸ್ತ್ರಗಳನ್ನು ಬಳಸಲು ಸಿದ್ಧರಾಗಿರಬೇಕು. ಇಲ್ಲದಿದ್ದರೆ, ಗಲಭೆಗಳ ಸಮಯದಲ್ಲಿ ನೀವು ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳುತ್ತೀರಿ? ತರಗತಿಗಳಲ್ಲಿ, ಹಿಟ್ಲರ್ ಒಬ್ಬ ಮಹಾನ್ ವ್ಯಕ್ತಿ ಎಂದು ನಮಗೆ ಹೇಳಲಾಗುತ್ತಿತ್ತು. ಆತ ರಾಷ್ಟ್ರೀಯವಾದಿಯಾಗಿದ್ದ ಮತ್ತು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಎಂದು ಹೇಳುತ್ತಿದ್ದರು. ನಮ್ಮ ಶಿಕ್ಷಕರು ಜನಾಂಗೀಯ ಭೇದವನ್ನು ಸಮರ್ಥಿಸುತ್ತ ನಮ್ಮ ದೇಶದ ಎಲ್ಲಾ ಸಮಸ್ಯೆಗಳಿಗೆ ಮುಸ್ಲಿಮರು ಕಾರಣ ಎಂದು ಪರೋಕ್ಷವಾಗಿ ತಿಳಿಸುತ್ತಿದ್ದರು ಎನ್ನುವುದು ಅಲ್ಲಿನ ಹಳೆಯ ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ. ಹೀಗೆ ಅನೇಕ ಹಳೆಯ ವಿದ್ಯಾರ್ಥಿಗಳು ಸಂಘ ಸಂಚಾಲಿತ ಶಾಲೆಗಳ ಮುಸ್ಲಿಮ್ ದ್ವೇಷವನ್ನು ವಿವರಿಸಿದ್ದಾರೆ.

ವಿನಯ್ ಸುಲ್ತಾನ್ ಎಂಬ ಹಳೆಯ ವಿದ್ಯಾರ್ಥಿಯು: “ತಮ್ಮ ೬ ನೇ ವಯಸ್ಸಿನಿಂದ ಸಂಘದ ಸಮರ್ಪಿತ ಸ್ವಯಂಸೇವಕರಾಗಿದ್ದವರು ಇಂದಿನ ವರೆಗೂ ಹಾಗೆಯೇ ಇದ್ದಾರೆˌ ಇವರೆಂದಿಗೂ ಬದಲಾಗದಂತೆ ಅವರ ಮೆದುಳು ಮಜ್ಜನ ಮಾಡಲಾಗುತ್ತದೆ. ಗೋಧ್ರಾ ಹತ್ಯಾಕಾಂಡ ಸಂಭವಿಸಿದ ೨೦೦೨ ರಲ್ಲಿ ನಮ್ಮ ತರಗತಿಗಳಲ್ಲಿ ಪ್ರಚೋದನಾತ್ಮಕ ವಿಷಯಗಳನ್ನು ಹೇಳಲಾಗುತ್ತಿತ್ತು. ಅಲ್ಲಿ ರಾಮಭಕ್ತರನ್ನು ಮುಸ್ಲಿಮರು ಕೊಂದಿದ್ದಾರೆ ಎಂದು ನಮ್ಮ ಶಿಕ್ಷಕರು ಹೇಳುತ್ತಿದ್ದರು. ಪ್ರತಿ ತಿಂಗಳು ಮುಖ್ಯ ಸ್ಥಾನ ಶಾಖೆಯನ್ನು ಆಯೋಜಿಸಲಾಗುತ್ತಿತ್ತು. ನಗರದ ಎಲ್ಲಾ ಶಾಖೆಗಳು ಮತ್ತು ವಿದ್ಯಾಭಾರತಿ ಶಾಲೆಗಳು ಅದರಲ್ಲಿ ಭಾಗವಹಿಸುತ್ತಿದ್ದವು. ನನ್ನ ಶಾಖೆಯಿಂದ ಸುಮಾರು ೧೫-೨೦ ಜನರು ಭಾಗವಹಿಸಿದ್ದೇವು. ಅವರಲ್ಲಿ ನಾನೂ ಒಬ್ಬನಾಗಿದ್ದೆ. ಅಲ್ಲಿಂದ ಹಿಂತಿರುಗಿ ಬರುವಾಗ ನಾವು ಉದ್ದೇಶಪೂರ್ವಕವಾಗಿ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳ ಮೂಲಕ ಹಾದು ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತಿದ್ದದ್ದು ನನಗೆ ಸ್ಪಷ್ಟವಾಗಿ ನೆನಪಿದೆ” ಎನ್ನುತ್ತಾರೆ ವಿನಯ್.

ಆಗ ನಾವು ನಮ್ಮ ಕೈಯಲ್ಲಿ ಲಾಠಿಗಳನ್ನು ಹಿಡಿದಿದ್ದೆವು. ಆ ಲಾಠಿಯನ್ನು ನಾವು ಆರ್‌ಎಸ್‌ಎಸ್‌ನಲ್ಲಿ ‘ದಂಡ’ ಎಂದು ಕರೆಯುತ್ತೇವೆ. ಹೀಗೆ ಮಾಡುವುದು ನಮಗೆ ಒಂದು ವಿಚಿತ್ರ ರೀತಿಯ ಥ್ರಿಲ್ ಆಗಿತ್ತು. ನನ್ನ ಶಾಲೆಯ ಮುಖ್ಯೋಪಾಧ್ಯಾಯರು ಸೇರಿದಂತೆ ಅನೇಕ ಶಿಕ್ಷಕರು ಸ್ವತಃ ಕರ ಸೇವಕರಾಗಿದ್ದು ಬಾಬರಿ ಮಸೀದಿ ಧ್ವಂಸದಲ್ಲಿ ಭಾಗವಹಿಸಿದ್ದರು. ಅವರು ತರಗತಿಗೆ ಬಂದು ಅಯ್ಯೋದ್ಯೆಯಲ್ಲಿ ತಾವು ಹೇಗೆಲ್ಲ ಧೈರ್ಯದಿಂದ ಹೋರಾಡಿದೆವು ಎಂದು ವರ್ಣಿಸುತ್ತಿದ್ದರು. ಮಸೀದಿಯ ಧ್ವಂಸವನ್ನು ನಮ್ಮ ಶಿಕ್ಷಕರು ವೈಭವೀಕರಿಸುತ್ತಿದ್ದರು ಎನ್ನುತ್ತಾರೆ ವಿನಯ್. ೨೦೦೭-೦೮ ರ ಅವಧಿಯಲ್ಲಿ ರಾಮಸೇತು ಚಳವಳಿ ಮತ್ತು ಆಂದೋಲನ ನಡೆದಾಗ ಶಾಲಾ ಆಡಳಿತ ಮಂಡಳಿಯು ರಾಷ್ಟ್ರಪತಿಗಳಿಗೆ ಪ್ರತ್ಯೇಕ ಪತ್ರಗಳನ್ನು ಬರೆಯುವಂತೆಯೂ ಹಾಗು ರಾಮಸೇತುವನ್ನು ರದ್ದುಗೊಳಿಸದಂತೆ ಒತ್ತಾಯಿಸುತ್ತಿದ್ದರೂ. ಇದು ಹಿಂದೂ ಸಂಸ್ಕೃತಿಯ ಪ್ರಮುಖ ಭಾಗವಾಗಿದ್ದು ˌ ನಾವೆಲ್ಲರೂ ನಮ್ಮ ನಮ್ಮ ಮನೆಯಿಂದ ಪೋಸ್ಟ್‌ಕಾರ್ಡ್‌ಗಳನ್ನು ತರಬೇಕಾಗಿತ್ತು ಮತ್ತು ಶಾಲೆಯಲ್ಲಿ ಪತ್ರವನ್ನು ಬರೆಯಬೇಕಾಗಿತ್ತು ಎನ್ನುತ್ತಾರೆ ವಿನಯ್.

ವಿದ್ಯಾ ಭಾರತಿ ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವ ವಿನಯ್ ಸುಲ್ತಾನ್ ಅವರು ತಮ್ಮ ಕೆಲವೇ ಶಬ್ಧಗಳಲ್ಲಿ ಈ ಶಾಲೆಗಳ ಮುಖ್ಯ ಉದ್ದೇಶ ಏನು ಎಂಬುದನ್ನು ಸಂಕ್ಷಿಪ್ತವಾಗಿ ಹೇಳಿದ್ದಾರೆ: “ವಿದ್ಯಾರ್ಥಿಗಳಾದ ನಾವು ಎಂದಿಗೂ ಸಂಘದ ನಿಘೂಡ ಉದ್ದೇಶವನ್ನು ತಿಳಿಯುವುದಿಲ್ಲ, ಆದರೆ ನಿಧಾನವಾಗಿ ಮತ್ತು ಸ್ಥಿರವಾಗಿ, ಅಲ್ಲಿ ನಮ್ಮೊಳಗೆ ಹಿಂದುತ್ವದ ವಿಷವನ್ನು ತುಂಬುತ್ತಾರೆ. ಹಾಗಾಗಿ ದೇಶದಲ್ಲಿ ಎಲ್ಲೇ ಕೋಮುಗಲಭೆಗಳು ನಡೆದಾಗಲೆಲ್ಲ ವಿದ್ಯಾರ್ಥಿಗಳೆಲ್ಲ ಕಟ್ಟರ್ ಹಿಂದೂಗಳಾಗಿ ಎದ್ದು ನಿಲ್ಲುವಂತೆ ನಮ್ಮ ಮೆದುಳು ಮಜ್ಜನ ಮಾಡಲಾಗುತ್ತದೆ. ಅಂತಹ ದಂಗೆˌ ದೊಂಬಿˌ ಗಲಭೆಗಳಿಗಾಗಿಯೆ ಸಂಘ ನಮ್ಮನ್ನು ಸಜ್ಜುಗೊಳಿಸುತ್ತದೆ” ಎನ್ನುತ್ತಾರೆ ವಿನಯ್. ಇದು ಸಂಘ ದೇಶದಲ್ಲಿ ಈ ಮೊದಲು ಗುಪ್ತವಾಗಿ ಹಾಗ ಇತ್ತೀಚಿಗೆ ಬಹಿರಂಗವಾಗಿಯೆ ಮಾಡುತ್ತಿರುವ ಅರಾಜಕತೆಯ ದಾರುಣ ಕತೆಯಾಗಿದೆ. ದಿ ವೈರ್ ವೆಬ್ ಜರ್ನಲ್ಲಿನಲ್ಲಿ ಈ ಇಡೀ ಲೇಖನವನ್ನು ಬರೆದು ಸಂಘ ಸಂಚಾಲಿತ ಶಾಲೆಗಳ ಬಂಡವಾಳ ಬಯಲು ಮಾಡಿದವರು ನವದೆಹಲಿ ಮೂಲದ ಆಸ್ತಾ ಸವ್ಯಸಾಚಿ ಎಂಬ ಪತ್ರಕರ್ತೆ. ಲೇಖಕರು ಈ ಲೇಖನವನ್ನು ಇಂಡಿಯನ್ ಅಮೇರಿಕನ್ ಮುಸ್ಲಿಂ ಕೌನ್ಸಿಲ್ ನೀಡಿದ ಮಾನವ ಹಕ್ಕುಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯ ಅನುದಾನದ ಅಡಿಯಲ್ಲಿ ವರದಿ ಮಾಡಿರುವುದಾಗಿ ಘೋಷಿಸಿದ್ದಾರೆ.

~ಡಾ. ಜೆ ಎಸ್ ಪಾಟೀಲ.

Tags: HinduismHindutvaRSSRss SchoolVidhya Bharathi
Previous Post

ಪೋರ್ಚುಗೀಸ್ ಸಿವಿಲ್ ಕೋಡ್ ಗೋವಾ , ದಮನ್ ಮತ್ತು ಡಿಯು – ಒಂದುಗೂಡಿಸುವ ಕಾನೂನು- ಭಾಗ 1

Next Post

Vira Video | ಹಾವಿನ ಮರಿ ಕಚ್ಚಲು ಬಂದರೂ ಅಲುಗಾಡದ ಬೆಕ್ಕು..!

Related Posts

Top Story

ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
December 12, 2025
0

“ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಬೆಳಗಾವಿಯ ಸರ್ಕಿಟ್ ಹೌಸ್ ಹಾಗೂ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮಗಳ...

Read moreDetails

ಬಗರ್ ಹುಕುಂ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು-ಭೂ ಮಾಫಿಯಾ ವಿರುದ್ಧ ಕ್ರಿಮಿನಲ್ ಪ್ರಕರಣ: ಕೃಷ್ಣ ಬೈರೇಗೌಡ

December 12, 2025

ಅಧಿವೇಶನದ ಬಳಿಕ ಡಿಕೆಶಿ ಸಿಎಂ ಆಗೇ ಆಗ್ತಾರೆ…!! ‌ ಯತೀಂದ್ರಗೆ ಕೌಂಟರ್‌ ನೀಡಿದ ಇಕ್ಬಾಲ್‌ ಹುಸೇನ್.

December 12, 2025

ಹೆಲಿಕಾಪ್ಟರ್, ಸ್ಪೆಷಲ್ ಫ್ಲೈಟ್ ಖರೀದಿ ಮಾಡಲ್ಲ, ಬಾಡಿಗೆ ಪಡೆಯಲು ತೀರ್ಮಾನ: ಡಿಸಿಎಂ ಡಿ.ಕೆ. ಶಿವಕುಮಾರ್

December 9, 2025

ಗಣ್ಯ ವ್ಯಕ್ತಿಗಳ ಪ್ರಯಾಣಕ್ಕೆ ಚಾಪರ್, ವಿಮಾನ ಬಾಡಿಗೆ ಕುರಿತ ಸಭೆ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್‌..

December 9, 2025
Next Post
Vira Video | ಹಾವಿನ ಮರಿ ಕಚ್ಚಲು ಬಂದರೂ ಅಲುಗಾಡದ ಬೆಕ್ಕು..!

Vira Video | ಹಾವಿನ ಮರಿ ಕಚ್ಚಲು ಬಂದರೂ ಅಲುಗಾಡದ ಬೆಕ್ಕು..!

Please login to join discussion

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”
Top Story

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

by ಪ್ರತಿಧ್ವನಿ
December 13, 2025
ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ
Top Story

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

by ಪ್ರತಿಧ್ವನಿ
December 13, 2025
ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

December 13, 2025
ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada