~ಡಾ. ಜೆ ಎಸ್ ಪಾಟೀಲ.
ಬಿಜೆಪಿ ಮತ್ತು ಅದನ್ನು ನಿಯಂತ್ರಿಸುವ ಸಂಘವು ಅಧಿಕಾರದಲ್ಲಿ ಇಲ್ಲದಿರುವ ಕಾಲದಿಂದಲೆ ಇತಿಹಾಸ ತಿರುಚಿ ಜನರಿಗೆ ಹೇಳುವ ಕಲೆಯನ್ನು ಕರಗತ ಮಾಡಿಕೊಂಡಿತ್ತು. ೧೯೯೮ ರಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದ ಮೇಲೆ ಮೊದಲು ಮಾಡಿದ ಕೆಲಸವೆಂದರೆ ಸಂಘಕ್ಕೆ ಹತ್ತಿರವಾದ ಬ್ರಾಹ್ಮಣನೊಬ್ಬನನ್ನು ಶಿಕ್ಷಣ ಮಂತ್ರಿ ಮಾಡಿ ಭಾರತದ ನೈಜ ಇತಿಹಾಸವನ್ನು ತಿರುಚುವ ಹಾಗು ಶಿಕ್ಷಣವನ್ನು ಕೇಸರೀಕರಿಸುವ ಕುಕೃತ್ಯ. ಸ್ವಾತಂತ್ರ ಚಳುವಳಿˌ ಗಾಂಧಿ-ನೆಹರುರ ಕುರಿತ ರಾಜಕೀಯ ಹಾಗು ವೈಯಕ್ತಿಕ ಚಾರಿತ್ರ್ಯ ಹರಣ ಬಿಜೆಪಿಯವರ ಏಕೈಕ ಉದ್ದೇಶವಾಯಿತು. ಏಕೆಂದರೆ ಸಂಘ ಮತ್ತು ಬಿಜೆಪಿಗೆ ಈ ದೇಶಕ್ಕೆ ತಾವು ಮಾಡಿದ ಒಳಿತಿನ ಕುರಿತ ಯಾವ ಇತಿಹಾಸವೂ ಇರಲಿಲ್ಲ. ಅದರ ಪಾಪದ ಭೂತಕಾಲವನ್ನು ಜನರಿಂದ ಮರೆಮಾಚಲು ದೇಶಭಕ್ತರ ತೇಜೋವಧೆ ಮಾಡುವುದು ಅದಕ್ಕುಳಿದ ಅನಿವಾರ್ಯ ಕರ್ಮವಾಗಿತ್ತು. ಹಾಗಾಗಿ ಸುಳ್ಳು ಹೇಳುವುದನ್ನೆ ಸಂಘ ಹಾಗು ಬಿಜೆಪಿ ತಮ್ಮ ಮೂಲ ಉದ್ಯೋಗವನ್ನಾಗಿಸಿಕೊಂಡವು.
ಅದು ೧೯೭೧ ರ ನವಂಬರ್ ತಿಂಗಳು.
‘ಒಂದುವೇಳೆ ಭಾರತವು ಪಾಕಿಸ್ತಾನದ ಆಂತರಿಕ ವಿಷಯದಲ್ಲಿ ಮೂಗು ತೂರಿಸಿದರೆ ಅಮೆರಿಕ ಭಾರತಕ್ಕೆ ತಕ್ಕ ಪಾಠ ಕಲಿಸಲಿದೆ.”
~ ರಿಚರ್ಡ್ ನಿಕ್ಸನ್, ಅಮೆರಿಕೆಯ ಅಂದಿನ ಅದ್ಯಕ್ಷ
‘ಭಾರತವು ಅಮೆರಿಕದ ಸ್ನೇಹ ಬಯಸುತ್ತದೆ. ಆದರೆ ಅದನ್ನು ಬಾಸ್ ಎಂದು ಯಾವತ್ತೂ ಪರಿಗಣಿಸುವುದಿಲ್ಲ. ಭಾರತವು ತನ್ನ ಭವಿಷ್ಯವನ್ನು ಸ್ವತಃ ನಿರ್ಮಿಸಿಕೊಳ್ಳುವಷ್ಟು ಸಶಕ್ತವಾಗಿದೆ. ನಾವು ಪರಿಸ್ಥಿತಿಗೆ ಅನುಗುಣವಾಗಿ ಪ್ರತಿಯೊಬ್ಬರೊಡನೆ ಹೇಗೆ ವ್ಯವಹರೀಸಬೇಕೆಂದು ಬಲ್ಲೆವು.”
~ ಶ್ರೀಮತಿ ಇಂದಿರಾ ಗಾಂಧಿ, ಅಂದಿನ ಭಾರತದ ಪ್ರಧಾನಿ.
ಭಾರತದ ಅಂದಿನ ಪ್ರಧಾನಿ ಶ್ರೀಮತಿ ಇಂಧಿರಾ ಗಾಂಧಿಯವರು ಶ್ವೇತ ಭವನದಲ್ಲಿ ಅಮೆರಿಕ ಅಧ್ಯಕ್ಷದ ಎದುರಿಗೆ ಕುಳಿತು ಆತನ ಕಣ್ಣಲ್ಲಿ ಕಣ್ಣಿಟ್ಟು ನೇರವಾಗಿ ಯಾವ ಭಯವೂ ಇಲ್ಲದೆ ಅಂದಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ನರಿಗೆ ಈ ಮಾತನ್ನು ಹೇಳಿದ್ದರು. ಅಂದು ಪೂರ್ವ ನಿಯೋಜಿತ ಜಂಟಿ ಪತ್ರಿಕಾಗೋಷ್ಠಿಯನ್ನು ರದ್ದು ಮಾಡಿದ ಇಂದಿರಾ ಶ್ವೇತಭವನದಿಂದ ಹೊರಬಿದ್ದಿದ್ದರು. ಶ್ರೀಮತಿ ಇಂದಿರಾರನ್ನು ಕಾರಿನವರೆಗೆ ಬಿಳ್ಕೊಡಲು ಬಂದ ಹೆನ್ರಿ ಕಿಸಿಂಜರ್ ಇಂದಿರಾರನ್ನು ಕೇಳುತ್ತಾರೆ: “ಮೇಡಂ ಪ್ರಧಾನಮಂತ್ರಿಯವರೆ, ಅದ್ಯಕ್ಷರೊಂದಿಗೆ ಇಷ್ಟೊಂದು ಧೈರ್ಯದಿಂದ ಮಾತನಾಡುವ ಬದಲಿಗೆ ಸೌಮ್ಯವಾಗಿ ನಿಮ್ಮ ಕೆಲಸ ಮಾಡಿಕೊಳ್ಳಬಹುದಿತ್ತಲ್ಲವೆ?” ಶ್ರೀಮತಿ ಇಂದಿರಾ ಹೀಗೆ ಉತ್ತರಿಸುತ್ತಾರೆ: “ತಮ್ಮ ಅಮೂಲ್ಯ ಸಲಹೆಗಾಗಿ ಶ್ರೀಮಾನ್ ಕಾರ್ಯದರ್ಶಿಗಳಿಗೆ ಧನ್ಯವಾದಗಳು, ಒಂದು ಅಭಿವೃದ್ಧಿಶೀಲ ರಾಷ್ಟ್ರವಾಗಿ ನಮ್ಮ ನಿಲುವು ಅಚಲವಾಗಿದೆ. ನಮ್ಮಲ್ಲಿ ಪ್ರತಿಯೊಂದು ಅನ್ಯಾಯಗಳ ವಿರುದ್ಧ ಹೋರಾಡುವ ಸೂಕ್ತ ಇಚ್ಛಾಶಕ್ತಿ ಮತ್ತು ಸಂಪನ್ಮೂಲಗಳಿವೆ. ದೂರದಲ್ಲಿ ಕುಳಿತು ಯಾವುದೇ ರಾಷ್ಟ್ರವನ್ನು ನಿಯಂತ್ರಿಸಬಲ್ಲೆವು ಎನ್ನುವ ನಿಮ್ಮ ನಂಬಿಕೆಯ ಕಾಲ ಕಳೆದು ಹೋಗಿದೆ ಎಂದು ನಾವು ನಿರೂಪಿಸಬಲ್ಲೆವು.”

ಇಂದಿರಾ ತಮ್ಮ ಏಯರ್ ಇಂಡಿಯಾ ಬೋಯಿಂಗ್ ವಿಮಾನ ದಿಲ್ಲಿಯ ಪಾಲಮ್ ರನ್ವೇ ಮೇಲೆ ಇಳಿದ ತಕ್ಷಣ ಅಂದಿನ ವಿಪಕ್ಷ ನಾಯಕ ಅಟಲ್ ಬಿಹಾರಿ ವಾಜಪೇಯಿಯನ್ನು ತಮ್ಮ ನಿವಾಸಕ್ಕೆ ಕರೆಸಿಕೊಳ್ಳುತ್ತಾರೆ. ಮುಚ್ಚಿದ ಬಾಗಿಲ ಮನೆಯಲ್ಲಿ ಉಭಯ ನಾಯಕರು ಒಂದು ಗಂಟೆ ಚರ್ಚಿಸುತ್ತಾರೆ. ಮಾತುಕತೆ ಮುಗಿತ ತಕ್ಷಣ ವಾಜಪೇಯಿ ಗಡಿಬಿಡಿಯಲ್ಲಿ ಹೊರನಡೆಯುತ್ತಾರೆ. ಆನಂತರ ವಾಜಪೇಯಿಯವರು ಸಂಯುಕ್ತ ರಾಷ್ಟ್ರ ಸಂಸ್ಥೆಯ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸುವ ವಿಷಯ ಬಹಿರಂಗಗೊಳ್ಳುತ್ತದೆ. ಬಿಬಿಸಿ ವಾಹಿನಿಯ ಡೋನಾಲ್ಡ್ ಪಾಲ್ ವಾಜಪೇಯಿಯವರನ್ನು ಹೀಗೆ ಪ್ರಶ್ನಿಸುತ್ತಾರೆ: “ಇಂದಿರಾಜಿ ತಮ್ಮನ್ನು ಒಬ್ಬ ಉಗ್ರ ಟೀಕಾಕಾರರಾಗಿ ನೋಡುತ್ತಾರೆ. ಆದರೂ ತಾವು ಭಾರತ ಸರಕಾರದ ನಿಲುವನ್ನು ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿ ಬೆಂಬಲಿಸುತ್ತೀರಾ?”
ವಾಜಪೇಯಿ ಹೀಗೆ ಉತ್ತರಿಸುತ್ತಾರೆ: “ಒಂದು ಗುಲಾಬಿ ಹೂ ಒಂದು ಉದ್ಯಾನವನ್ನು ಅರ್ಥಮಾಡಿಕೊಳ್ಳುತ್ತದೆ. ಉದ್ಯಾನವನ್ನು ಅರ್ಥ ಮಾಡಿಕೊಳ್ಳುವ ಕೆಲಸ ಲಿಲಿ ಕೂಡ ಮಾಡಬಲ್ಲುದು. ಉದ್ಯಾನವು ಸಂಕಷ್ಟದಲ್ಲಿದ್ದಾಗ ಎಲ್ಲರೂ ಅದರ ನೆರವಿಗೆ ಧಾವಿಸಬೇಕಾಗುತ್ತದೆ. ನಾನು ಭಾರತವೆಂಬ ಉದ್ಯಾನದ ನೆರವಿಗೆ ಬಂದಿದ್ದೇನೆ. ಇದನ್ನು ಭಾರತೀಯ ಜನತಂತ್ರ ವ್ಯವಸ್ಥೆ ಎಂದು ಗುರುತಿಸಲಾಗುತ್ತದೆ.” ಆನಂತರದ ಇತಿಹಾಸ ನಾವೆಲ್ಲರೂ ಬಲ್ಲೆವು. ಅಮೆರಿಕವು ಪಾಕಿಸ್ತಾನದ ನೆರವಿಗೆ ೨೭೦ ಪ್ರಸಿದ್ಧ ಶಕ್ತಿಶಾಲಿ ಯುದ್ಧ ನೌಕೆಗಳನ್ನು ಕಳುಹಿಸಿತ್ತು. ಅಮೆರಿಕ ಜಗತ್ತಿಗೆ ತನ್ನ ಯುದ್ಧ ನೌಕೆಗಳು ವಿಶೇಷ ತಂತ್ರಜ್ಞಾನ ಹೊಂದಿವೆ ಎಂದು ತೋರಿಸುವ ಇರಾದೆ ಹೊಂದಿತ್ತು. ಇದು ಜಗತ್ತಿನ ಬೇರೆ ರಾಷ್ಟ್ರಗಳು ಭಾರತವನ್ನು ಬೆಂಬಲಿಸಬಾರದು ಎನ್ನುವ ಅಮೆರಿಕೆಯ ಎಚ್ಚರಿಕೆಯ ಸಂದೇಶ ಕೂಡ ಆಗಿತ್ತು. ಅಮೆರಿಕೆಯ ಜೊತೆಗೆ ಸೇರಿ ಯುಕೆ ಕೂಡ ಭಾರತವನ್ನು ಹೆದರಿಸುವ ಕಾರ್ಯಕ್ಕೆ ಕೈಹಾಕಿತು.
೫೦ ವರ್ಷಗಳ ಹಿಂದೆ ೧೯೭೧ ರಲ್ಲಿ, ಅಮೆರಿಕವು ಬಾಂಗ್ಲಾ ವಿಭಜನೆಯ ೧೯೭೧ರ ಭಾರತ-ಪಾಕ್ ಯುದ್ಧವನ್ನು ನಿಲ್ಲಿಸುವಂತೆ ಭಾರತಕ್ಕೆ ಬೆದರಿಕೆ ಹಾಕಿದ್ದ ಘಟನೆ ಇದು. ಗಾಬರಿಗೊಂಡ ಭಾರತವು ಸೋವಿಯತ್ ಒಕ್ಕೂಟಕ್ಕೆ SOS (ಸೇವ್ ಅವರ್ ಶಿಪ್) ಅನ್ನು ಕಳುಹಿಸಿತು. ಭಾರತೀಯ ಇತಿಹಾಸ ಪುಸ್ತಕಗಳಿಂದ ಬಹುತೇಕ ಅಳಿಸಿಹೋಗುತ್ತಿರುವ ರೋಚಕ ಕಥೆ ಇದು. ೧೯೭೧ ರ ಯುದ್ಧದಲ್ಲಿ ಪಾಕಿಸ್ತಾನ ಇನ್ನೇನು ಸೋಲುತ್ತದೆ ಎನ್ನುವಾಗ, ಹೆನ್ರಿ ಕಿಸ್ಸಿಂಜರ್ ನಿಕ್ಸನ್ ಅವರನ್ನು USS ಎಂಟರ್‌ಪ್ರೈಸ್ ನೇತೃತ್ವದ ಅಣುಶಕ್ತಿ-ಚಾಲಿತ ವಿಮಾನವಾಹಕ ನೌಕೆ US-೭ ನೇ ಫ್ಲೀಟ್‌ನ ಟಾಸ್ಕ್ ಫೋರ್ಸ್ ಅನ್ನು ಬಂಗಾಳ ಕೊಲ್ಲಿಗೆ ಕಳುಹಿಸಿದರು. ೧೯೭೦ ರ ದಶಕದಲ್ಲಿ USS ಎಂಟರ್‌ಪ್ರೈಸ್, ೭೫,೦೦೦ ಟನ್ ಸಾಮರ್ಥ್ಯದ, ೭೦ ಕ್ಕೂ ಹೆಚ್ಚು ಯುದ್ಧ ವಿಮಾನಗಳು ಹೊಂದಿದ್ದ ವಿಶ್ವದ ಅತಿದೊಡ್ಡ ಪರಮಾಣು-ಚಾಲಿತ ಒಂದು ದೈತ್ಯಾಕಾರದ ವಿಮಾನವಾಹಕ ನೌಕೆಯಾಗಿತ್ತು. ಭಾರತೀಯ ನೌಕಾಪಡೆಯು ೨೦,೦೦೦ ಟನ್ ಸಾಮರ್ಥ್ಯದ ೨೦ ಲಘು ಯುದ್ಧ ವಿಮಾನಗಳು ಹೊಂದಿರುವ ವಿಮಾನವಾಹಕ ನೌಕೆ ವಿಕ್ರಾಂತ್ ಹೊಂದಿತ್ತು.
USS ಎಂಟರ್‌ಪ್ರೈಸ್ ಬಾಂಗ್ಲಾದೇಶದಲ್ಲಿರುವ ತನ್ನ ಪ್ರಜೆಗಳನ್ನು ಸುರಕ್ಷಿತವಾಗಿ ವಾಪಸ್ಸು ತರಲು ಬರುತ್ತಿರುವುದಾಗಿ ಅಮೆರಿಕಾ ಅಧಿಕೃತ ಹೇಳಿಕೆ ನೀಡಿತ್ತು. ಅನಧಿಕೃತವಾಗಿ ಇದು ಭಾರತೀಯ ಪಡೆಗಳನ್ನು ಬೆದರಿಸುವುದು ಮತ್ತು ಪೂರ್ವ ಪಾಕಿಸ್ತಾನದ (ಬಾಂಗ್ಲಾ) ವಿಮೋಚನೆಯನ್ನು ತಡೆಯುವುದಾಗಿತ್ತು. ಇದಷ್ಟೇ ಅಲ್ಲದೆ ಭಾರತಕ್ಕೆ ಮತ್ತೊಂದು ಕೆಟ್ಟ ಸುದ್ದಿ ಬಂದೆರಗಿತ್ತು. ಕಮಾಂಡೋ ವಾಹಕ HMS ಅಲ್ಬಿಯಾನ್, ಮತ್ತು ಹಲವಾರು ವಿಧ್ವಂಸಕಗಳು ಹಾಗು ಇತರ ಹಡಗುಗಳೊಂದಿಗೆ ವಿಮಾನವಾಹಕ ನೌಕೆ HMS ಈಗಲ್ ನೇತೃತ್ವದ ಪ್ರಬಲ ಬ್ರಿಟಿಷ್ ನೌಕಾಪಡೆಯು ಪಶ್ಚಿಮದಿಂದ ಅರೇಬಿಯನ್ ಸಮುದ್ರದ ಕಡೆಗೆ ಭಾರತದವನ್ನು ಸಮೀಪಿಸುತ್ತಿದೆ ಎಂದು ಸೋವಿಯತ್ ಗುಪ್ತಚರ ಇಲಾಖೆಯು ಭಾರತಕ್ಕೆ ವರದಿ ಮಾಡಿತ್ತು. ಬ್ರಿಟಿಷರು ಮತ್ತು ಅಮೆರಿಕನ್ನರು ಭಾರತವನ್ನು ಬೆದರಿಸಲು ಸಂಘಟಿತ ಪಿನ್ಸರ್ ದಾಳಿಯನ್ನು ಯೋಜಿಸಿದ್ದರು. ಅರೇಬಿಯನ್ ಸಮುದ್ರದಲ್ಲಿನ ಬ್ರಿಟಿಷ್ ಹಡಗುಗಳು ಭಾರತದ ಪಶ್ಚಿಮ ಕರಾವಳಿಯನ್ನು ಗುರಿಯಾಗಿಸಿದ್ದವು.
ಆದರೆ ಅಮೆರಿಕನ್ನರು ಚಿತ್ತಗಾಂಗ್ ದಿಗ್ಭಂದಿಸಲು ಹುನ್ನಾರ ಮಾಡಿದ್ದರು. ಬ್ರಿಟಿಷರು ಮತ್ತು ಅಮೆರಿಕದ ಹಡಗುಗಳ ನಡುವೆ ಭಾರತೀಯ ನೌಕಾಪಡೆ ಸಿಕ್ಕಿಬಿದ್ದಿತ್ತು. ಅದು ಡಿಸೆಂಬರ್ ೧೯೭೧, ವಿಶ್ವದ ಎರಡು ಪ್ರಮುಖ ಪ್ರಜಾಪ್ರಭುತ್ವಗಳಾದ ಅಮೆರಿಕ ಮತ್ತು ಬ್ರಿಟೀಷ್ ದೇಶಗಳು ಆಗ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಭಾರತಕ್ಕೆ ಬೆದರಿಕೆ ಹಾಕಿದ್ದವು. ತಕ್ಷಣ
ದೆಹಲಿಯಿಂದ SOS ಅನ್ನು ಮಾಸ್ಕೋಗೆ ಕಳುಹಿಸಲಾಗುತ್ತದೆ. USS ಎಂಟರ್‌ಪ್ರೈಸ್ ಅನ್ನು ನಿರ್ಬಂಧಿಸಲು ರಷ್ಯಾದ ರೆಡ್ ನೇವಿ ಶೀಘ್ರದಲ್ಲೇ ೧೬ ಸೋವಿಯತ್ ನೌಕಾ ಘಟಕಗಳನ್ನು ಮತ್ತು ಆರು ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ವ್ಲಾಡಿವೋಸ್ಟಾಕ್‌ನಿಂದ ರವಾನಿಸುತ್ತದೆ. ಭಾರತೀಯ ನೌಕಾಪಡೆಯ ಪೂರ್ವ ಕಮಾಂಡ್ ಮುಖ್ಯಸ್ಥ ಅಡ್ಮಿರಲ್ ಎನ್.ಕೃಷ್ಣನ್ ಅವರು ತಮ್ಮ ‘ನೋ ವೇ ಬಟ್ ಸರೆಂಡರ್’ ಪುಸ್ತಕದಲ್ಲಿ ಅಮೆರಿಕನ್ನರು ಚಿತ್ತಗಾಂಗ್ ತಲುಪುತ್ತಾರೆ ಎಂಬ ಭಯವನ್ನು ವ್ಯಕ್ತಪಡಿಸಿದ್ದರು. ಅವರು ಇದು ಯುಎಸ್ ಎಂಟರ್‌ಪ್ರೈಸ್ ದಾಳಿಯನ್ನು ನಿಧಾನಗೊಳಿಸಲು ‘ಮಾಡು ಇಲ್ಲವೆ ಮಡಿ’ ಸಂದರ್ಭವಾಗಿತ್ತು ಎಂದು ಉಲ್ಲೇಖಿಸಿದ್ದಾರೆ.
ಡಿಸೆಂಬರ್ ೨ ನೇ ವಾರ ೧೯೭೧ ರಂದು, ದೈತ್ಯಾಕಾರದ USS ಎಂಟರ್‌ಪ್ರೈಸ್ ನೇತೃತ್ವದ US-೭ ನೇ ಫ್ಲೀಟ್‌ನ ಟಾಸ್ಕ್ ಫೋರ್ಸ್ ಬಂಗಾಳ ಕೊಲ್ಲಿಗೆ ಆಗಮಿಸುತ್ತದೆ. ಬ್ರಿಟಿಷ್ ನೌಕಾಪಡೆಯು ಅರಬ್ಬೀ ಸಮುದ್ರವನ್ನು ಇನ್ನಷ್ಟೇ ಸೇರಬೇಕಿತ್ತು. ಇಡೀ ಜಗತ್ತು ಉಸಿರನ್ನು ಬಿಗಿ ಹಿಡಿದು ಈ ಸನ್ನಿವೇಶವನ್ನು ನೋಡುತ್ತಿತ್ತು. ಆದರೆ, ಅಮೆರಿಕನ್ನರಿಗೆ ಸೋವಿಯತ್ ಜಲಾಂತರ್ಗಾಮಿ ನೌಕೆಗಳು ಸಮುದ್ರದ ನೀರಿನ ಆಳದಲ್ಲಿ ಅವರನ್ನು ಹಿಂದಿಕ್ಕಿವೆ ಎನ್ನುವುದು ತಿಳಿದಿರಲಿಲ್ಲ. USS ಎಂಟರ್‌ಪ್ರೈಸ್ ಪೂರ್ವ ಪಾಕಿಸ್ತಾನದ ಕಡೆಗೆ ಚಲಿಸುತ್ತಿದ್ದಂತೆ, ಸೋವಿಯತ್ ಜಲಾಂತರ್ಗಾಮಿ ನೌಕೆಗಳು ಯಾವುದೇ ಎಚ್ಚರಿಕೆಯಿಲ್ಲದೆ ಹೊರಹೊಮ್ಮಿ ತಕ್ಷಣ ಭಾರತ ಮತ್ತು ಯುಎಸ್ ನೌಕಾಪಡೆಯ ನಡುವೆ ದುತ್ತೆಂದು ನಿಂತುಬಿಡುತ್ತವೆ. ಯಾವ ಸುಳಿವೂ ಇಲ್ಲದೆ ಬಂದ ಸೋವಿಯತ್ ಪಡೆಗಳನ್ನು ನೋಡಿ ಅಮೆರಿಕನ್ನರು ಆಘಾತಕ್ಕೊಳಗಾಗುತ್ತಾರೆ. ಅಡ್ಮಿರಲ್ ಗಾರ್ಡನ್ ೭ ನೇ ಅಮೇರಿಕನ್ ಫ್ಲೀಟ್ ಕಮಾಂಡರ್‌ಗೆ: “ಸರ್, ನಾವು ತುಂಬಾ ತಡವಾಗಿದ್ದೇವೆ. ಸೋವಿಯತ್ ಪಡೆಗಳು ಈಗಾಗಲೇ ಭಾರತದ ನೆರವಿಗೆ ಧಾವಿಸಿವೆ” ಎಂದು ಹೇಳುತ್ತಾರೆ.

ಭಾರತದ ನೆರವಿಗೆ ಬಂದ ಸೋವಿಯತ್ ಜಲಾಂತರ್ಗಾಮಿ ಸಮರ ನೌಕೆಗಳನ್ನು ನೋಡಿ ಅಮೇರಿಕನ್ ಮತ್ತು ಬ್ರಿಟಿಷ್ ನೌಕಾಪಡೆಗಳು ಹಿಂದೆ ಸರಿಯುತ್ತವೆ. ಭಾರತ ಯಶಸ್ವಿಯಾಗಿ ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾ ವಿಭಜನೆಗೆ ನಾಂದಿ ಹಾಡುತ್ತದೆ. ಬಂಗಾಳಕೊಲ್ಲಿಯಲ್ಲಿ ಜಗತ್ತಿನ ಎರಡು ಮಹಾಶಕ್ತಿಗಳ ನಡುವಿನ ಈ ಬೃಹತ್ ನೌಕಾ ಚದುರಂಗದ ಯುದ್ಧವನ್ನು ಹೆಚ್ಚಿನ ಭಾರತೀಯರು ಇಂದು ಮರೆತಿದ್ದಾರೆ. ಅಥವಾ ಆ ಉದಾತ್ ದೇಶಭಕ್ತಿಯ ರೋಚಕ ಘಟನೆಯನ್ನು ಭಾರತೀಯರು ಮರೆಯುವಂತೆ ಪಟ್ಟಭದ್ರ ಶಕ್ತಿಗಳು ಹುನ್ನಾರ ಮಾಡುತ್ತಿವೆ. ಪಾಕಿಸ್ತಾನವನ್ನು ಬೆಂಬಲಿಸಿ ಭಾರತದೊಂದಿಗೆ ಕಾಲು ಕೆದರಿದ ಅಮೆರಿಕಾ ಮುಖಭಂಗಕ್ಕೀಡಾಗಿ ಸುಮ್ಮನೆ ಕೂಡಲಿಲ್ಲ. ಭಾರತಕ್ಕೆ ಇಂಧನ ಪೂರೈಸುತ್ತಿದ್ದ ಅಮೆರಿಕೆಯ ಏಕೈಕ ಬರ್ಮಾ-ಸೆಲ್ ಕಂಪನಿಗೆ ಅಮೆರಿಕಾ ಸರಕಾರ ನಿಲ್ಲಿಸಲು ಆದೇಶಿಸಿತು. ತಾನು ಭಾರತದೊಂದಿಗೆ ಎಲ್ಲ ವ್ಯವಹಾರಗಳನ್ನು ನಿಲ್ಲಿಸಿತು. ಭಾರತವು ಮುಂದೊಂದು ದಿನ ಸ್ವಾವಲಂಬಿ (ಆತ್ಮನಿರ್ಭರ್) ಯಾಗಲು ಅಂದೇ ಶ್ರೀಮತಿ ಇಂದಿರಾ ನಾಂದಿ ಹಾಡಿದರು.
ಇದರ ನಂತರ ಇಂದಿರಾರ ತೀಕ್ಷ್ಣ ರಾಜನೀತಿಯ ಫಲದಿಂದ ಭಾರತವು ಉಕ್ರೇನ್ ಮೂಲಕ ಇಂಧನ ಆಮದು ಪ್ರಕ್ರೀಯೆ ಆರಂಭಿಸಿತು. ಒಂದು ದಿನದ ಯುದ್ಧದಲ್ಲಿ ಅಮೆರಿಕೆಯ ೨೭೦ ಅಧುನಿಕ ಯುದ್ಧ ನೌಕೆಗಳು ಧ್ವಂಸವಾದವು. ಧ್ವಂಸಗೊಂಡ ನೌಕೆಗಳನ್ನು ಪ್ರದರ್ಶಿಸಲಾಯಿತು. ಮುಂದೆ ೧೮ ದಿನಗಳು ನಡೆದ ಯುದ್ಧದಲ್ಲಿ ಪಾಕಿಸ್ತಾನದ ಒಂದು ಲಕ್ಷ ಸೈನಿಕರನ್ನು ಯುದ್ಧ ಕೈದಿಗಳನ್ನಾಗಿ ಮಾಡಲಾಯಿತು. ಮುಜಿಬುರ್ ರೆಹಮಾನ್ ಲಾಹೋರಿನ ಜೈಲಿನಿಂದ ಬಿಡುಗಡೆಗೊಂಡರು. ಅದು ಸರಿಯಾಗಿ ಮಾರ್ಚ್ ತಿಂಗಳುˌ ಶ್ರೀಮತಿ ಗಾಂಧಿ ಭಾರತದ ಸಂಸತ್ತಿನಲ್ಲಿ ಬಾಂಗ್ಲಾದೇಶವನ್ನು ಒಂದು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿ ಮಾನ್ಯತೆ ನೀಡಿದರು. ವಿಪಕ್ಷ ನಾಯಕ ವಾಜಪೇಯಿ ಇಂದಿರಾರನ್ನು “ದುರ್ಗಾ ಮಾತಾ”ಎಂದು ವರ್ಣಿಸಿದರು.
ಈ ಇಡೀ ಘಟನೆ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಬಹುದೊಡ್ಡ ಗೌರವವನ್ನು ತಂದು ಕೊಟ್ಟಿತಲ್ಲದೆ ಭಾರತವು ತನ್ನ ಕಾಲ ಮೇಲೆ ನಿಲ್ಲುವ ಅನೇಕ ಅಭಿವೃದ್ಧಿ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಿತು. ಅಮೆರಿಕೆಯ ನಿರ್ಭಂದಕ್ಕೆ ಹೆದರದೆ ಭಾರತವು:
೧. ತನ್ನದೇ ಆದ ಇಂಡಿಯನ್ ಆಯ್ಲ್ ಕಂಪನಿ ಸ್ಥಾಪಿಸಿತು.
೨. ಜಾಗತಿಕ ಮಟ್ಟದಲ್ಲಿ ತಾನೊಂದು ಬಲಿಷ್ಟ ರಾಷ್ಟ್ರವೆಂದು ಸಾಬೀತು ಮಾಡಿತು.
೩. ನಾನ್ ಅಲೈಯನ್ಸ್ ಚಳುವಳಿಯ ನೇತೃತ್ವವನ್ನು ವಹಿಸಿಕೊಂಡಿತು. ಇದರ ನಾಯಕತ್ವವು ವಿವಾದೀತವಾಗಿತ್ತು.
ಈ ಎಲ್ಲ ನೈಜ ಐತಿಹಾಸಿಕ ಘಟನೆಗಳನ್ನು ಜನರು ಮರೆತಿರಬಹುದು ಅಥವಾ ಮರೆಸಲು ಪಟ್ಚಭದ್ರರು ಪ್ರಯತ್ನಿಸುತ್ತಿಬಹುದು. ಆದರೆ ಇತಿಹಾಸವು ನಮ್ಮ ನಡುವೆ ಎದ್ದು ನಿಂತಿದೆ. ಅದನ್ನು ನಾವು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕಿದೆ








