• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಇತರೆ / Others

ಅಂಕಣ | ಮನುವಾದದ ವಿಸ್ತಾರ ಮತ್ತು ವಿಕಾಸ: ಮೋದಿ ಸರಕಾರದ ಮುಖ್ಯ ಗುರಿ

ಪ್ರತಿಧ್ವನಿ by ಪ್ರತಿಧ್ವನಿ
September 1, 2023
in ಇತರೆ / Others, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ನೂತನ ಸಂಸತ್ ಭವನ ಉದ್ಘಾಟನೆ ; ಫೋಟೋ ಝಲಕ್..!
Share on WhatsAppShare on FacebookShare on Telegram

~ ಡಾ. ಜೆ ಎಸ್ ಪಾಟೀಲ

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ವರ್ಷಗಳ ಹಿಂದೆ ಲೇಹ್‌ನಲ್ಲಿ ಮಾತನಾಡುತ್ತಾ ˌ ಇದು ವಿಸ್ತರಣಾವಾದದ ಯುಗವಲ್ಲ ಆದರೆ ಅಭಿವೃದ್ಧಿಯ ಸಿದ್ಧಾಂತವಾಗಿದೆ ಎಂದು ತಾವು ಚಿಕ್ಕವರಿರುವಾಗ ಸಂಘದ ಶಾಖೆಗಳಲ್ಲಿ ಕಲಿತ ಭಾಷೆಯಲ್ಲಿ ಅಣಿಮುತ್ತುಗಳನ್ನು ಉದುರಿಸಿದ್ದರು. ಬ್ರಾಹ್ಮಣ ಮತ್ತು ಕ್ಷತ್ರಿಯ ಸಂಯುಕ್ತ ಆಡಳಿತಗಾರರ ನೀತಿಯು ಯಾವಾಗ ವಿಸ್ತರಣಾವಾದ ಮತ್ತು ಅಭಿವೃದ್ಧಿಯ ಸಿದ್ಧಾಂತವಾಗಿತ್ತು ಎನ್ನುವುದು ಮಹಾಶಯರು ದಯವಿಟ್ಟು ಇಂದು ಸ್ಪಷ್ಟಪಡಿಸಬೇಕು. ವಿಸ್ತರಣೆ ಮತ್ತು ಅಭಿವೃದ್ಧಿ ಇವು ಬ್ರಾಹ್ಮಣ-ಬನಿಯಾ-ಕ್ಷತ್ರೀಯರ ಸಂಯುಕ್ತ ಆಡಳಿತದಲ್ಲಿ ಸಾರ್ವತ್ರಿಕರಣಗೊಳ್ಳದ ಹಾಗು ತಮ್ಮ ಹಿತಾಸಕ್ತಿಯ ಸರಕುಗಳು ಎನ್ನುವುದು ಇತಿಹಾಸದುದ್ದಕ್ಕೂ ರುಜುವಾತಾಗುತ್ತ ಬಂದಿದೆ. ಈ ಮೂರು ವರ್ಣದವರ ಹಿತಾಸಕ್ತಿಯ ಪರಮ ಉದ್ದೇಶದಿಂದ ದೇಶ ಸಾವಿರಾರು ವರ್ಷ ಪರಕೀಯರ ಆಳ್ವಿಕೆಗೆ ಒಳಪಟ್ಟಿದ್ದನ್ನು ನಾವು ಯಾವತ್ತೂ ಮರೆಯುವಂತಿಲ್ಲ.

ಈ ಮೂರು ವರ್ಣಗಳ ಆಡಳಿತವು ಇತಿಹಾಸದುದ್ದಕ್ಕೂ ಬ್ರಾಹ್ಮಣವಾದದ ವಿಸ್ತರಣೆ ಮತ್ತು ಅಭಿವೃದ್ದಿಯ ಸಿದ್ಧಾಂತವೆ ಗುರಿಯಾಗಿಸಿಕೊಂಡು ಆಡಳಿತ ಮಾಡಿದೆ. ಬ್ರಾಹ್ಮಣವಾದಕ್ಕೆ ಈ ಅಧುನಿಕ ಯುಗದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮನುವಾದಿಗಳು ರಾಷ್ಟ್ರೀಯವಾದದ ಮುಖವಾಡ ತೊಡಿಸಿದ್ದಾರೆ ಎನ್ನುವುದು ಈ ದೇಶದ ಬಹುಜನರು ಅರಿತುಕೊಳ್ಳಬೇಕಿದೆ. ದುರಂತದ ಸಂಗತಿ ಎಂದರೆ ಮನುವಾದವನ್ನು ಬಲಗೊಳಿಸಲು ಬಹುಜನರನ್ನೆ ಉದ್ದಕ್ಕೂ ಬಳಸಿಕೊಂಡಿರುವುದು. ಇಷ್ಟೆಲ್ಲ ಶೋಷಣೆಯˌ ವಂಚನೆಯ ಅನುಭವದ ಹಿನ್ನೆಲೆಯ ಹೊರತಾಗಿಯೂ ಇಂದು ಬ್ರಾಹ್ಮಣರ ಯಜಮಾನಿಕೆಯ ಸಂಘವನ್ನು ಸದೃಢಗೊಳಿಸಲು ಬೆವರು ಸುರಿಸುತ್ತಿರುವವರು ಮಾತ್ರ ಇದೆ ಬಹುಜನರು ಎನ್ನುವುದು ಅತ್ಯಂತ ನೋವಿನ ಸಂಗತಿ. ಆದರೆ ಅದರ ಫವಾನುಭವಿಗಳು ಮಾತ್ರ ಮನುವಾದಿಗಳು ಎನ್ನುವುದರಲ್ಲಿ ಆಶ್ಚರ್ಯವಿಲ್ಲ.

ಸ್ವಾತಂತ್ರ ಭಾರತದ ಆಡಳಿತದ ಚುಕ್ಕಾಣಿ ಹಿಡಿದಿರುವ ಬ್ರಾಹ್ಮಣ-ಬನಿಯಾಗಳ ಆಡಳಿತದಲ್ಲಿ ಪಾಕಿಸ್ತಾನವು ಕಾಶ್ಮೀರದ ಮೇಲೆ ಆಕ್ರಮಣ ಮಾಡಿ ತನ್ನ ಭೂ ಪ್ರದೇಶವನ್ನು ೮೬,೨೬೮ ಚದರ ಕಿಲೋಮೀಟರ್‌ಗೆ ವಿಸ್ತರಿಸಿದೆ. ಚೀನಾ ಭಾರತದ ೪೫,೦೦೦ ಚದರ ಕಿಲೋಮೀಟರ್ ಭೂಪ್ರದೇಶವನ್ನು ವಶಪಡಿಸಿಕೊಂಡಿದೆ. ಹೀಗೆ ನಮ್ಮ ಎರಡು ನೆರೆ ರಾಷ್ಟ್ರಗಳು ತಮ್ಮ ಗಡಿ ವಿಸ್ತರಣೆ ಮತ್ತು ಅಭಿವೃದ್ಧಿ ಎರಡನ್ನೂ ನಿರ್ವಿವಾದವಾಗಿ ಮಾಡಿಕೊಂಡಿವೆ. ಭಾರತದ ಮನುವಾದಿ ಆಡಳಿತಗಾರರು ಹೊರಗಿನ ಪ್ರಪಂಚದೊಂದಿಗೆ ಎಂದಿಗೂ ಹೋರಾಡಿದ ಉದಾಹರಣೆಗಳಿಲ್ಲ ˌ ಮತ್ತು ಅವು ನಮ್ಮ ನೆರೆಯ ದೇಶಗಳ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಉದಾಹರಣೆಯಿಲ್ಲ. ಆದರೆˌ ದೇಶದೊಳಗೆ ಇವರು ತಮ್ಮ ಜಾತಿಯ ಹಿತಾಸಕ್ತಿಯ ಸಿದ್ಧಾಂತಗಳ ವಿಸ್ತರಣೆ ಮತ್ತು ಅಭಿವೃದ್ಧಿ ಎರಡನ್ನೂ ಅತಿ ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಇದು ಕಳೆದ ಒಂದು ದಶಕದ ಮೋದಿ ಆಡಳಿತದಲ್ಲಿ ಇನ್ನೂ ಹೆಚ್ಚು ತೀವ್ರವಾಗಿ ಸಾಗಿಬರುತ್ತಿದೆ.

೧೯೮೦ ರಲ್ಲಿ, ದೇಶದ ೧೦% ಮೇಲ್ಜಾತಿಯ ಜನರ ಸಂಪತ್ತು ದೇಶದ ಒಟ್ಟು ಸಂಪತ್ತಿನ ೩೧% ಆಗಿತ್ತು. ಅದು ೨೦೧೨ ರಲ್ಲಿ ೫೫% ಕ್ಕೆ ಏರಿತು. ಮೋದಿಯವರ ಅವಿರತ ಶ್ರಮದಿಂದ ೨೦೧೮ ರಲ್ಲಿ ಅದು ೬೦% ಕ್ಕೆ ಏರಿಕೆಯಾಗಿದೆ. ಇತಿಹಾಸದುದ್ದಕ್ಕೂ ಈ ಮಣ್ಣಿನ ಮೇಲೆ ಪಾರುಪತ್ಯ ಹೊಂದಿದ್ದರೂ ಅಫ್ಘಾನ್ˌ ಇರಾನ್ˌ ಅರೇಬಿಯಾ ಅಥವಾ ಮಧ್ಯ ಏಷ್ಯಾದಲ್ಲಿ ಒಂದು ಇಂಚು ಭೂಮಿಯನ್ನು ಆಕ್ರಮಿಸಿಕೊಳ್ಳುವ ಧೈರ್ಯ ಈ ಮನುವಾದಿಗಳು ಮಾಡಲಿಲ್ಲ. ಆದರೆ ಭಾರತದೊಳಗೆ, ಹಿಂದುಳಿದ ವರ್ಗಗಳ ಭೂಮಿಯನ್ನು ಲೂಟಿ ಮಾಡಿˌ ಕಸಿದುಕೊಂಡು ಜಮೀನ್ದಾರರು ಮತ್ತು ಲ್ಯಾಂಡ್ ಮಾಫಿಯಾ ಆಗಿ ಇವರು ಮೆರೆಯುತ್ತಿದ್ದಾರೆ. ಆರಂಭದಲ್ಲಿ ಭೂಹೀನರಾಗಿದ್ದ ಈ ಆರ್ಯನ್ನರು ಸತ್ತಾಗ ನದಿ ಅಥವಾ ನೀರಿರುವ ದಡಗಳಲ್ಲಿ ಇವರ ಶವಗಳನ್ನು ಸುಡುವ ಪದ್ದತಿ ಹುಟ್ಟಿಕೊಂಡಿತು. ಆನಂತರ ಬೂದಿಯನ್ನು ಪಶ್ಚಿಮವಾಹಿನಿಗಳಲ್ಲಿ ಬಿಡುವ ಮೂಲಕ ಈ ಜನರು ಮಧ್ಯ ಏಷಿಯಾದ ತಮ್ಮ ನಂಟನ್ನು ಗಡ್ಡಿಯಾಗಿಸಿ ಈ ಮಣ್ಣಿಗೆ ತಮ್ಮ ನಿಷ್ಟೆಯನ್ನು ಮರೆತುಹೋದರು.

ಜನಸಂಖ್ಯೆಯಲ್ಲಿ ಶೇಕಡ ೧೫% ರಷ್ಟಿರುವ ಮೇಲ್ಜಾತಿಯವರುˌ ದೇಶದ ಸಂಪತ್ತಿನಲ್ಲಿ ೪೧% ರಷ್ಟು ಸಿಂಹಪಾಲು ಆಸ್ತಿ ಹೊಂದಿದ್ದಾರೆ. ೫೦% ಜನಸಂಖ್ಯೆ ಹೊಂದಿರುವ ಇತರ ಹಿಂದುಳಿದ ಜಾತಿಗಳ ಓಬಿಸಿಗಳು ೩೧% ರಷ್ಟು ಆಸ್ತಿಯನ್ನು ಹೊಂದಿದ್ದಾರೆ. ಇನ್ನು ಜನಸಂಖ್ಯೆಯ ೨೩% ರಷ್ಟಿರುವ ಪರಿಶಿಷ್ಟ ವರ್ಗಗಳ ಹತ್ತಿರ ೭.೬% ನಷ್ಟು ಆಸ್ತಿ ಇದೆ. ಜನಸಂಖ್ಯೆಯ ೧೨% ರಷ್ಟಿರುವ ಪರಿಶಿಷ್ಟ ಪಂಗಡದ ಜನರ ಹತ್ತಿರ ೩.೭% ನಷ್ಟು ಆಸ್ತಿ ಇದೆ. ನರೇಂದ್ರ ಮೋದಿ ಪ್ರಧಾನಿಯಾದ ನಂತರ, ದೇಶದ ಶ್ರೀಮಂತ ಮತ್ತು ಬಡವರ ನಡುವಿನ ಅಸಮಾನತೆ ಅಘಾದವಾಗಿ ಹೆಚ್ಚುತ್ತಿದೆ. ಬಿಜೆಪಿ ಸರಕಾರದ ಆರ್ಥಿಕ ನೀತಿಯು ಸಂಪೂರ್ಣವಾಗಿ ಮೇಲ್ಜಾತಿಗೆ ಅನುಕೂಲ ಮಾಡುವ ಪರಮ ಗುರಿಯನ್ನು ಹೊಂದಿದ್ದು ಇದರಿಂದ ಸ್ಪಷ್ಟವಾಗುತ್ತದೆ. ೨೦೧೪ ರ ಮೊದಲು ದೇಶದ ಜನರಿಗೆ ಪರಿಚಯವೆ ಇಲ್ಲದ ಅದಾನಿ ಇಡೀ ಜಗತ್ತಿನ ನಂಬರ್ ಒನ್ನ ಶ್ರೀಮಂತನಾಗಿ ಹೊರಹೊಮ್ಮಿದ್ದರ ಹಿಂದಿನ ಹಗರಣ ನಿಮಗೆಲ್ಲ ತಿಳಿದೆಯಿದೆ.

ಹಿಂದಿನ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ದುರ್ಬಲ ವರ್ಗಗಳ ಮೀಸಲಾತಿ ಸೌಲಭ್ಯ ೭೫ ವರ್ಷಗಳಿಂದ ದ್ವೇಷಿಸುತ್ತ ಬಂದಿರುವ ಮೇಲ್ವರ್ಗದವರು ಅದನ್ನು ನೇರವಾಗಿ ತೆಗೆದು ಹಾಕಿ ಆ ವರ್ಗಗಳ ವಿರೋಧ ಕಟ್ಟಿಕೊಳ್ಳಲಾಗುತ್ತಿಲ್ಲ. ಆದರೆ ಪರೋಕ್ಷವಾಗಿ ಮೋದಿ ಆಡಳಿತವು ಸರಕಾರಿ ಸಂಸ್ಥೆಗಳನ್ನು ಖಾಸಗಿಕರಣ ಮಾಡುವ ಮತ್ತು ಆ ಮೂಲಕ ಮೀಸಲಾತಿಯನ್ನು ಕೊನೆಗೊಳಿಸುವ ಕಾರ್ಯ ಯಶಸ್ವಿಯಾಗಿ ಮಾಡಿ ಮುಗಿಸಿದೆ. ೧೩ ಪಾಯಿಂಟ್ ರೋಸ್ಟರ್ ವ್ಯವಸ್ಥೆಯನ್ನು ಜಾರಿಗೊಳಿಸುವ ಹುನ್ನಾರವೂ ಮೋದಿ ಆಡಳಿತ ಹೊಂದಿದೆ. ಕೇಂದ್ರ ಸರಕಾರದ ದೊಡ್ಡ ಆಡಳಿತಾತ್ಮಕ ಹುದ್ದೆಗಳಿಗೆ ಪಾರ್ಶ್ವ ಪ್ರವೇಶದ (ಲ್ಯಾಟರಲ್ ಎಂಟ್ರಿ) ಮೂಲಕ ಮೇಲ್ವರ್ಗದವರನ್ನು ನೇಮಿಸುವ ಕಾರ್ಯ ಯಾವ ಅಳುಕೂ ಇಲ್ಲದೆ ಮೋದಿ ಆಡಳಿತ ರಾಜಾರೋಷವಾಗಿ ಮಾಡುತ್ತಿದೆ. ಸರಕಾರಿ ಸ್ವಾಮ್ಯದ ಸಾರ್ವಜನಿಕ ಉದ್ಯಮಗಳನ್ನು ಉದ್ದೇಶಪೂರ್ವಕವಾಗಿ ನಷ್ಟಕ್ಕೊಳಪಡಿಸಿ ಖಾಸಗಿ ಉದ್ಯಮಿಗಳಿಗೆ ಮಾರಾಟ ಮಾಡಲಾಗುತ್ತಿದೆ.

ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳ ಕೋಟ್ಯಾಂತರ ರೂಪಾಯಿ ಸಾಲವನ್ನು ಮನ್ನಾ ಮಾಡುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರಕಾರದ ಮುಖ್ಯ ಗುರಿ ಗೋಳ್ವಾಲ್ಕರ್ ಅವರ ಬಂಚ್ ಆಫ್ ಥಾಟ್ಸ್ ನ ಬ್ರಾಹ್ಮಣ ನಿಯಂತ್ರಿತ ಆರ್ಥಿಕ ನೀತಿಯ ನೇರ ಅನುಷ್ಠಾನ ಮಾಡುವುದಾಗಿದೆ. ಮೋದಿ ಸರಕಾರದ ಪ್ರತಿಯೊಂದು ಆಡಳಿತಾತ್ಮಕ ನೀತಿಗಳು ಮನುವಾದವನ್ನು ಮಾತ್ರ ವಿಸ್ತರಿಸುತ್ತಿವೆ. ಸನಾತನಿಗಳ ಸರ್ವಾಂಗೀಣ ಅಭಿವೃದ್ಧಿಯ ಗುರಿ ಹೊಂದಿರುವ ಸರಕಾರದ ನೀತಿಯಿಂದ ಲಾಭ ಪಡೆಯುತ್ತಿರುವವರು ಮಾತ್ರ ಅದಾನಿˌ ಅಂಬಾನಿˌ ಬಾಬಾ ರಾಮದೇವ್ˌ ರಘುರಾಜ್ ಪ್ರತಾಪ್ ಸಿಂಗ್ ಮತ್ತು ವಿಕಾಸ್ ದುಬೆ ಅಂಥವರು. ಇವರು ಶೂದ್ರರ ಭೂಮಿಯನ್ನು ಬಲವಂತವಾಗಿ ಕಸಿದುಕೊಂಡು ತಾವು ಮಾತ್ರ ಚೇತರಿಸಿಕೊಳ್ಳುತ್ತಾರೆ. ಬನಿಯಾಯೇತರ ಹಾಗು ದಕ್ಷಿಣ ಭಾರತದ ಬಹುಜನ ಸಮುದಾಯದ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಅವರ ಆರ್ಥಿಕ ಸಾಮ್ರಾಜ್ಯಗಳನ್ನು ನಾಶಗೊಳಿಸುವ ಕಾರ್ಯ ಮೋದಿ ಆಡಳಿತ ವ್ಯವಸ್ತಿತವಾಗಿ ಮಾಡುತ್ತ ಬರುತ್ತಿದೆ.

ಬ್ರಾಹ್ಮಣನೊಬ್ಬ ರಾಷ್ಟ್ರೀಯ ಸರಾಸರಿ ಆದಾಯಕ್ಕಿಂತ ೪೭% ಹೆಚ್ಚು ಸಂಪತ್ತು ಗಳಿಸುತ್ತಾನೆ. ಒಬಿಸಿˌ ಎಸ್‌ಸಿˌ ಎಸ್‌ಟಿಗಳು ರಾಷ್ಟ್ರೀಯ ಸರಾಸರಿ ಆದಾಯಕ್ಕಿಂತ ೩೪% ಕಡಿಮೆ ಸಂಪತ್ತು ಗಳಿಸುತ್ತಾರೆ. ದೇಶದ ಹೊರಗೆ, ಬ್ರಾಹ್ಮಣರು ವಿಸ್ತರಣಾವಾದ ಅಥವಾ ವಿಕಾಸವಾದವನ್ನು ಅನುಸರಿಸುವುದಿಲ್ಲ. ಆದರೆˌ ತಮ್ಮ ಸಮುದಾಯವನ್ನು ವಿಸ್ತರಿಸುವ ಮೂಲಕ ದೇಶದೊಳಗೆ ಅವರು ವಿಸ್ತರಣಾವಾದ ಮತ್ತು ವಿಕಾಸವಾದವನ್ನು ಚನ್ನಾಗಿ ಮಾಡುತ್ತಿದ್ದಾರೆ. ವಿಶ್ವ ಅಸಮಾನತೆ ದತ್ತಸಂಚಯದ ಪ್ರಕಾರ, ೨೦೨೪ ರ ವೇಳೆಗೆ ಮೇಲ್ಜಾತಿಯವರ ಆದಾಯದಲ್ಲಿ ೮೭% ಹೆಚ್ಚಳವಾಗಲಿದೆಯಂತೆ. ಇದು ಯಾರಿಗೂ ತಿಳಿಯದಂತೆ ನರೇಂದ್ರ ಮೋದಿಯವರು ದೇಶದೊಳಗೆ ಮೌನ ಆರ್ಥಿಕ ವಿಸ್ತರಣಾವಾದದ ಅನುಷ್ಠಾನ ಭರದಿಂದ ಮಾಡುತ್ತಿದ್ದಾರೆ. ಇದ್ಯಾವುದರ ಅರಿವೆಯಿಲ್ಲದ ಶೂದ್ರರು ಮಾತ್ರ ಮೋದಿಗೆ ಜಯಜಯಕಾರ ಹಾಕುತ್ತಿರುವುದು ಮಾತ್ರ ದುರಂತದ ಸಂಗತಿಯಾಗಿದೆ.

ಇದರಿಂದ ಸಂವೇದನಾಶೀಲ ಶೂದ್ರರು ಉದ್ವೇಗಕ್ಕೊಳಗಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ದುರ್ಬಲ ವರ್ಗಗಳಿಗೆ ಮೀಸಲಾತಿ ಸೌಲಭ್ಯ ಇರುವುದಿಲ್ಲ. ಶಿಕ್ಷಣˌ ಆರೋಗ್ಯ ˌ ಮುಂತಾದ ಸಮಾಜ ಕಲ್ಯಾಣದ ಕಾರ್ಯಗಳು ಸ್ಥಗಿತಗೊಳ್ಳಲಿವೆ. ಹೇಗೊ ಬ್ರಾಹ್ಮಣವಾದಿಗಳು ಯಾವ ಆತಂಕವೂ ಇಲ್ಲದೆ ಶೂದ್ರರ ಶ್ರಮˌ ಬೆವರಿನ ಹಣ ಹಾಗು ಅಪಾರವಾದ ಬೆಂಬಲದಿಂದ ದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ರಾಮ ಮಂದಿರವನ್ನು ನಿರ್ಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ದೇಶದ ಬಹುಜನರ ಕಿಸೆಯಲ್ಲಿ ಕಾಸಿದ್ದರೆ ಅದೇ ರಾಮ ಮಂದಿರದೊಳಗೆ ಹೋಗಿ ಬ್ರಾಹ್ಮಣ ಅರ್ಚಕನ ತಟ್ಟೆಗೆ ಅಥವಾ ಹುಂಡಿಗೆ ದಕ್ಷಿಣೆ ಹಾಕಿ ಅಲ್ಲಿರುವ ಪುರೋಹಿತರಿಗೆ ಕೈತುಂಬಾ ದಾನ ಮಾಡಬಹುದು. ಒಂದು ವೇಳೆ ಅವರ ಜೇಬಿನಲ್ಲಿ ಕಾಸಿಲ್ಲದಿದ್ದರೆ ದೇವಾಲಯದ ಹೊರಗೆ ಒಂದು ತಟ್ಟೆ ಹಿಡಿದುಕೊಂಡು ಕುಳಿತುಕೊಂಡು ಅದೇ ದೇವರ ಹೆಸರಿನಲ್ಲಿ ಅಯ್ಯಾ ದಾನ ನೀಡಿ ಎಂದು ಬೇಡುತ್ತಿರಬೇಕು. ಇದು ಮೋದಿ ಸರಕಾರದ ಬ್ರಾಹ್ಮಣವಾದದ ವಿಸ್ತರಣೆ ಮತ್ತು ಅಭಿವೃದ್ದಿಯ ಸಿದ್ದಾಂತದ ಫಲಿತಾಂಶವಾಗಲಿದೆ.

~ ಡಾ. ಜೆ ಎಸ್ ಪಾಟೀಲ.

Tags: BJPRahul GandhiSonia Gandhiನರೇಂದ್ರ ಮೋದಿಬಿಜೆಪಿಸಿದ್ದರಾಮಯ್ಯ
Previous Post

ವಿಶೇಷ ಸಂಸತ್ ಅಧಿವೇಶನದಲ್ಲಿ ಮಂಡನೆಯಾಗಲಿದೆಯಾ ‘ಒಂದು ದೇಶ ಒಂದು ಚುನಾವಣೆ’ ಮಸೂದೆ..!?

Next Post

ಅಂಕಣ | ಬಾಹ್ಯಾಕಾಶ ನಡಿಗೆಯೂ – ಮೊದಲ ಹೆಜ್ಜೆಗಳ ನೆನಪುಗಳೂ-ಭಾಗ 3

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post
ಭಾಗ-೧:  ದೇಶವನ್ನು ಖಾಸಗೀಕರಣಗೊಳಿಸುತ್ತಿರುವ ಅರ್ಬನ್ ಮತ್ತು ಅಗ್ರಹಾರ ನಾಜಿಗಳು

ಅಂಕಣ | ಬಾಹ್ಯಾಕಾಶ ನಡಿಗೆಯೂ – ಮೊದಲ ಹೆಜ್ಜೆಗಳ ನೆನಪುಗಳೂ-ಭಾಗ 3

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada