ಮಳೆಗಾಲ ಬಂತು ಅಂದ್ರೆ ಒಂದಲ್ಲ ಎರಡಲ್ಲ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಶೀತಾ, ಕೆಮ್ಮು ನೆಗಡಿಯನ್ನುವಂತದ್ದು ಮಳೆಗಾಲದಲ್ಲಿ ಕಾಮನ್. ಇವುಗಳಿಗೆ ತಕ್ಷಣಕ್ಕೆ ಔಷಧಿಗಳನ್ನ ತೆಗೆದುಕೊಂಡು ಪರಿಹಾರವನ್ನು ಕಂಡುಕೊಳ್ಳಬಹುದು. ಆದರೆ ಗರ್ಭಾವಸ್ಥೆಯಲ್ಲಿದ್ದಾಗ ಈ ಗಂಟಲು ನೋವು,ಶೀತ ನೆಗಡಿ ,ಕೆಮ್ಮು ಶುರುವಾದ್ರೆ ವೈದ್ಯರ ಸಲ ಇಲ್ಲದೆ ಯಾವುದೇ ಮಾತ್ರೆಗಳನ್ನಾಗಿ ಔಷಧಿಗಳನ್ನಾಗಿ ತೆಗೆದುಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ.

ಗರ್ಭಿಣಿಯಾಗಿದ್ದಾಗ ತಾಯಿ ಯಾವ ಆಹಾರವನ್ನ ಸೇವಿಸ್ತಾಳೋ, ಅದರಲ್ಲಿರುವ ಪೋಷಕಾಂಶಗಳು ಮಗುವಿನ ಬೆಳವಣಿಗೆಯ ಮೇಲೆ ಪ್ರಭಾವವನ್ನು ಬೀರುತ್ತದೆ. ಹಾಗಾಗಿ ಆರೋಗ್ಯ ಮತ್ತು ಆಹಾರದ ಮೇಲೆ ಹೆಚ್ಚು ಕಾಳಜಿಯನ್ನ ವಹಿಸಬೇಕು. ಈ ಮಳೆಗಾಲದಲ್ಲಿ ಕಾಡುವಂತ ಈ ಚಿಕ್ಕ ಪುಟ್ಟ ಸಮಸ್ಯೆಗಳಿಗೆ ಮನೆಯಲ್ಲಿ ಒಂದಿಷ್ಟು ಮದ್ದುಗಳನ್ನ ಮಾಡಬಹುದಾಗಿದೆ ಈ ಮದ್ದು ದೃಢದಲ್ಲಿರುವ ಮಗುವಿಗೆ ಹಾಗೂ ತಾಯಂದಿರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಹಾಗಾದ್ರೆ ಆ ಮನೆ ಮದ್ದುಗಳು ಯಾವುದು ಅನ್ನೋದರ ಮಾಹಿತಿ ಇಲ್ಲಿದೆ.
ಶುಂಠಿ
ಶುಂಠಿಯು ಉರಿಯೂತದ, ಆಂಟಿವೈರಲ್, ಆಂಟಿಬ್ಯಾಕ್ಟೀರಿಯಲ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದ್ದು ಅದು ಶೀತ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಒಂದು ಸಣ್ಣ ತುಂಡು ಶುಂಠಿಯನ್ನು ಅಗಿಯಬಹುದು ಅಥವಾ ಶುಂಠಿ ಚಹಾವನ್ನು ತಯಾರಿಸಲು ನೀರಿನಿಂದ ಕುದಿಸಬಹುದು.

ಪುದಿನ ಎಲೆಗಳು
ಮಳೆಗಾಲದಲ್ಲಿ ಕಾಡುವ ಈ ಸಮಸ್ಯೆಗಳಿಗೆ ಪುದಿನಾ ಉತ್ತಮ ಮದ್ದು.ಎಲೆಗಳನ್ನ ನೀರಿನಲ್ಲಿ ಚೆನ್ನಾಗಿ ಕುದಿಸಿ ಒಂದು ಟೇಬಲ್ ಸ್ಪೂನ್ ನಷ್ಟು ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಗಂಟಲು ನೋವು ಅಥವಾ ಶೀತವನ್ನು ಕಡಿಮೆ ಮಾಡುತ್ತದೆ ಮುಖ್ಯವಾಗಿ ಕಫವನ್ನು ನಿವಾರಣೆ ಮಾಡುತ್ತದೆ.

ಹಾಲು ಮತ್ತು ಅರಿಶಿಣ
ಅರಿಶಿಣದಲ್ಲಿ ಸಾಕಷ್ಟು ಔಷಧಿ ಗುಣಗಳು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ಶೀತ ಕೆಮ್ಮು ನೆಗಡಿ ಜೊತೆಗೆ ಹೊಟ್ಟೆ ಒಬ್ಬರ ಗ್ಯಾಸ್ ಡೈಜೆಶನ್ ಸಮಸ್ಯೆ ಇದ್ದರೂ ಕೂಡ ಪರಿಹಾರ ಒದಗುತ್ತದೆ.

ಉಪ್ಪಿನ ನೀರು
ಒಂದು ಲೋಟ ಬೆಚ್ಚಗಿನ ನೀರಿಗೆ ಅರ್ದ ಟೇಬಲ್ ಸ್ಪೂನ್ ಅಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ ನಂತರ ಆ ನೀರನ್ನ ಗಾರ್ಗಲ್ ಮಾಡಬೇಕು ಹೀಗೆ ದಿನಕ್ಕೆ ಮೂರು ಬಾರಿ ಮಾಡುವುದರಿಂದ ಗಂಟಲು ನೋವು ತಕ್ಷಣಕ್ಕೆ ಕಡಿಮೆಯಾಗುತ್ತದೆ.