ಯುರೋ ಕಫ್ 2020 ಫುಟ್ಬಾಲ್ ಪಂದ್ಯಗಳಲ್ಲಿ ತೊಡಗಿಸಿಕೊಂಡಿರುವ ಫುಟ್ಬಾಲ್ ತಾರೆ ಕ್ರಿಷ್ಚಿಯಾನೋ ರೊನಾಲ್ಡೊ ಸುದ್ದಿಗೋಷ್ಟಿಯಲ್ಲಿ ನೀಡಿದ ಒಂದೇ ಒಂದು ಸೂಚನೆ ‘ಕೋಲಾ‘ ಕಂಪೆನಿಗೆ ಭಾರಿ ನಷ್ಟವನ್ನು ತಂದೊಡ್ಡಿದೆ.
ಮಾಧ್ಯಮಗೋಷ್ಟಿ ವೇಳೆ ತನ್ನೆದುರಿರಿಸಿದ್ದ ಕೊಕಾ ಕೋಲಾ ಬಾಟಲ್ಗಳನ್ನು ಗಮನಿಸಿದ ರೊನಾಲ್ಡೊ, ಅವುಗಳನ್ನು ಅಲ್ಲಿಂದ ದೂರ ಸರಿಸಿ, ಅಲ್ಲಿಯೇ ಇದ್ದ ನೀರಿನ ಬಾಟಲ್ ಎತ್ತಿಕೊಂಡು ‘ನೀರು ಕುಡಿಯಿರಿ, ಆರೋಗ್ಯವಾಗಿರಿ‘ ಎಂದು ಸೂಚನೆ ಕೊಟ್ಟರು.
ಈ ಒಂದೇ ಒಂದು ಸೂಚನೆಯ ಬೆನ್ನಲ್ಲೇ ಕೋಕಾ ಕೋಲ ಕಂಪೆನಿಯ ಷೇರುಮೌಲ್ಯದಲ್ಲಿ ಶೇ 1.6 ರಷ್ಟು ಕುಸಿದಿದೆ. ಅಂದರೆ ಸುಮಾರು 4 ಬಿಲಿಯನ್ ಡಾಲರ್ನಷ್ಟು ನಷ್ಟ ಸಂಭವಿಸಿದೆ.