ಮಂಗಳೂರು : ಮಂಗಳೂರಿನಲ್ಲಿಂದು ಎರಡನೇ ಹಂತದ ಕರಾವಳಿ ಪ್ರಜಾಧ್ವನಿ ಯಾತ್ರೆಗೆ ಚಾಲನೆ ದೊರಕಿದೆ. ಮಂಗಳೂರು ಹೊರವಲಯದ ಕೈಕಂಬ ಬಳಿಯಲ್ಲಿರುವ ಖಾಸಗಿ ಸಭಾಂಗಣದಲ್ಲಿ ಪ್ರಜಾಧ್ಚನಿ ಯಾತ್ರೆ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಕರಾವಳಿ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ರಾಜ್ಯಕ್ಕೆ ಪ್ರಧಾನಿ ಮೋದಿ , ಅಮಿತ್ ಶಾ ಹಾಗೂ ಜೆಪಿ ನಡ್ಡಾ ಅವಶ್ಯಕತೆಯಿಲ್ಲ ಎಂದು ಗುಡುಗಿದ್ದಾರೆ.
ಬಸವರಾಜ ಯತ್ನಾಳ್ ಬಿಜೆಪಿಯಲ್ಲಿ ಸಿಎಂ ಆಗಬೇಕು ಅಂಧರೆ ಎರಡೂವರೆ ಸಾವಿರ ಕೋಟಿ ರೂಪಾಯಿ ಕೊಡಬೇಕು ಅಂತಾರೆ. ಇವರೆಲ್ಲ ಪ್ರಜಾಪ್ರಭುತ್ವದಲ್ಲಿ ವ್ಯಾಪಾರ ಮಾಡ್ತಿದ್ದಾರಾ..? ಅಥವಾ ಜನಸೇವೆಗೆ ಬಂದಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ. ನಮ್ಮ ಕಾನೂನು ಸದೃಢವಾಗಿದೆ. ಆದರೆ ಬುಲ್ಡೋಜರ್ ನುಗ್ಗಿಸುವ ಸಂಸ್ಕೃತಿ ಬಂದಿದೆ.ನಮಗೆ ಗುಜರಾತ್ ಮಾದರಿ ರಾಜ್ಯ ಬೇಕಿಲ್ಲ. ನಮಗೆ ಉತ್ತಮ ಶಿಕ್ಷಣ, ಆರೋಗ್ಯ ಸಿಕ್ಕರೆ ಅದೇ ಸಾಕು ಎಂದು ಹೇಳಿದ್ದಾರೆ.
ನಳೀನ್ ಕುಮಾರ್ ಕಟೀಲ್ ಲವ್ ಜಿಹಾದ್ ಬಗ್ಗೆ ಮಾತನಾಡಿ ಅಂತಾ ಬಹಿರಂಗವಾಗಿ ಹೇಳ್ತಾರೆ. ಇಂಥವರನ್ನು ನೀವು ಲೋಕಸಭೆಗ ಕಳುಹಿಸಿದ್ದೀರಾ. 50-100 ಕೋಟಿ ರೂಪಾಯಿ ಆಮೀಷವೊಡ್ಡಿ ಶಾಸಕರನ್ನು ಸೆಳೆಯುವ ಬಿಜೆಪಿಗೆ ಮತದಾರರನ್ನು ಸೆಳೆಯೋದು ದೊಡ್ಡ ವಿಚಾರ ಅಲ್ಲವೇ ಅಲ್ಲ ಎಂದು ಬಿ.ಕೆ ಹರಿಪ್ರಸಾದ್ ಕುಟುಕಿದ್ರು.
ಕರಾವಳಿಯಲ್ಲಿ ಎಸ್ಡಿಪಿಐ ಸ್ಪರ್ಧೆಯಿಂದ ಕಾಂಗ್ರೆಸ್ಗೆ ಡ್ಯಾಮೇಜ್ ಆಗಲಿದೆ ಎಂಬ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಬಿ.ಕೆ ಹರಿಪ್ರಸಾದ್ , ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷ ಬೇಕಿದ್ದರೂ ಸ್ಪರ್ಧೆ ಮಾಡಬಹುದು. ಇದಕ್ಕೆ ನಮ್ಮ ಅಭ್ಯಂಥರವಿಲ್ಲ. ಚುನಾವಣೆಯಲ್ಲಿ ಜನರ ತೀರ್ಮಾನ ಮುಖ್ಯ. ಈ ಬಾರಿ ಜನರು ಅತ್ಯಂತ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಎಸ್ಡಿಪಿಐ ಸ್ಪರ್ಧೆಯಿಂದ ನಮಗೆ ಯಾವುದೇ ಡ್ಯಾಮೇಜ್ ಆಗೋದಿಲ್ಲ ಎಂದು ಹೇಳಿದ್ದಾರೆ.