
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ನಡುವೆ ಕುರ್ಚಿ ಕಿತ್ತಾಟದ ಶೀತಲ ಸಮರ ಬಹಳ ದಿನಗಳಿಂದಲೂ ನಡೀತಾಯಿದೆ. ಲೋಕ ಎಲೆಕ್ಶನ್ ರಿಸಲ್ಟ್ ಬಳಿಕ ಸಿಎಂ ಪದವಿ ಚೇಂಜ್ ಆಗುತ್ತೆ ಅನ್ನೋ ಮಾತುಗಳು ಜೋರಿದೆ. ಇದೆಲ್ಲದರ ಮಧ್ಯೆ ಶಾಸಕ ಜನಾರ್ದನ ರೆಡ್ಡಿ ಹೊಸ ಬಾಂಬ್ ಹಾಕಿದ್ದಾರೆ.

ಚುನಾವಣೆ ಮುಗಿದ ಬಳಿಕ ಸಿದ್ದರಾಮಯ್ಯರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿ ಡಿ.ಕೆ ಶಿವಕುಮಾರ್ ರನ್ನು ಮುಖ್ಯಮಂತ್ರಿ ಮಾಡಲು ರಾಹುಲ್ ಗಾಂಧಿ ಕಾಯುತ್ತಿದ್ದಾರೆ ಎಂದು ಶಾಸಕ ಜನಾರ್ಧನ ರೆಡ್ಡಿ ಹೇಳಿದ್ದಾರೆ.ಕೊಪ್ಪಳ ತಾಲೂಕಿನ ಹ್ಯಾಟಿ ಮುಂಡರಗಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ಕಾಂಗ್ರೆಸ್ ಹೈಕಮಾಂಡ್ಗೆ ದುಡ್ಡು ಕೊಡುವ ಸಿಎಂ ಬೇಕಿದ್ದಾರೆ. ಹೀಗಾಗಿ ಚುನಾವಣೆ ಮುಗಿದ ತಕ್ಷಣ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಾಯುತ್ತಿದ್ದಾರೆ ಎಂದರು.ಸಿಎಂ ಸಿದ್ದರಾಮಯ್ಯ ಯಾರ ಬಳಿಯೂ ದುಡ್ಡು ತೆಗೆದುಕೊಳ್ಳುವುದಿಲ್ಲ. ಯಾರಿಗೂ ಕೂಡ ದುಡ್ಡನ್ನು ಕೊಡಲ್ಲ. ಆದರೆ ಹೈಕಮಾಂಡ್ ಗೆ ದುಡ್ಡು ಕೊಡುವ ಸಿಎಂ ಬೇಕಾಕಿದ್ದಾರೆ. ಹೈಕಮಾಂಡ್ಗೆ ಡಿ.ಕೆ ಶಿವಕುಮಾರ್ ರಂತಹ ಮುಖ್ಯಮಂತ್ರಿ ಬೇಕಾಗಿದೆ. ಅದಕ್ಕೆ ಡಿ.ಕೆ,ಶಿವಕುಮಾರ್ ರನ್ನು ಸಿಎಂ ಮಾಡಲು ರಾಹುಲ್ ಗಾಂಧಿ ಕಾಯುತ್ತಿದ್ದಾರೆ.

ಮಂಡ್ಯ ಸಮಾವೇಶದಲ್ಲಿ ರಾಹುಲ್ ಈ ಸಂದೇಶ ರವಾನೆ ಮಾಡಿದ್ದಾರೆ ಎಂದು ಜನಾರ್ದನ ರೆಡ್ಡಿ ಟಾಂಗ್ ಕೊಟ್ಟಿದ್ದಾರೆ.