ನಮ್ಮ ಸರ್ಕಾರ ಜಾತಿ ಗಣತಿ (Caste census) ಜಾರಿ ಮಾಡೇ ಮಾಡ್ತೀವಿ ಎಂದು ದಾವಣಗೆರೆಯಲ್ಲಿ ಸಿಎಂ ಸಿದ್ದರಾಮಯ್ಯ (Cm siddaramaiah) ಹೇಳಿಕೆ ನೀಡಿದ್ದಾರೆ. ಕನಕ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದಾರೆ.

ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ, ಮುಂದಿನ ಕ್ಯಾಬಿನೆಟ್ (Cabinet)ನಲ್ಲಿ ಜಾತಿ ಗಣತಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ಮುಂದಿನ ಕ್ಯಾಬಿನೆಟ್ ನಲ್ಲಿ ಕಾಂತರಾಜ್ ಆಯೋಗ ವರದಿ ಅನುಷ್ಠಾನಕ್ಕೆ ಚರ್ಚಿಸುತ್ತೇನೆ.ನಾನು ಯಾವಾಗಲು ಜಾತಿಗಣತಿ ಪರವಾಗಿರುವವನು ಎಂದು ಹೇಳಿದ್ದಾರೆ.
ಸಮ ಸಮಾಜದ ನಿರ್ಮಾಣ ಮಾಡಬೇಕೆಂಬುದು ನನ್ನ ಕನಸು, ಹಾಗಾಗಿ ಕಾಂತರಾಜು ವರದಿ ಅನುಷ್ಠಾನಕ್ಕೆ ನಾನು ಬದ್ಧ ಎಂದ ಸಿಎಂ ಸಿದ್ದರಾಮಯ್ಯ, ಟೇಬಲ್ ಕುಟ್ಟಿ ಜಾತಿ ಗಣತಿ ಅನುಷ್ಠಾನಕ್ಕೆ ಬದ್ದ ಎಂದು ಸಿದ್ರಾಮಯ್ಯ ಅಬ್ಬರಿಸಿದ್ದಾರೆ.











