ಸಿಎಂ ಸಿದ್ದಾರಾಮಯ್ಯ ಮೂಡ ಹಗರಣ ಪ್ರಕರಣ ಸಂಬಂಧ ಇಂದು ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಲಿರುವ ಲೋಕಾಯುಕ್ತ ಅಧಿಕಾರಿಗಳು ಧಾರವಾಡ ಹೈಕೋರ್ಟ್ ಪೀಠದಲ್ಲಿ ವರದಿ ಸಲ್ಲಿಕೆ ಮಾಡಲಿರುವ ಅಧಿಕಾರಿಗಳು.
ಆದರೆ, ಇದು ಅಂತಿಮ ವರದಿಯಲ್ಲ, ಈವರೆಗಿನ ತನಿಖಾ ಪ್ರಗತಿ ವರದಿಯಷ್ಟೇ. ಇನ್ನೂ ವರದಿಗೆ ಮತ್ತಷ್ಟು ಕಾಲಾವಕಾಶ ಕೋರಲು ಮುಂದಾಗಿದ್ದಾರೆಂದು ಮೂಲಗಳು ತಿಳಿಸಿವೆ.
ಹಗರಣ ಸಂಬಂಧ ವರದಿ ಸಲ್ಲಿಸಲು ನ್ಯಾಯಾಲಯ ಜ.27ರ ಗಡುವು ನೀಡಿದ್ದು, ಜನವರಿ 27ಕ್ಕೆ ಒಂದು ದಿನ ಮುಂಚಿತವಾಗ ವರದಿ ಸಲ್ಲಿಸುವಂತೆ ಸೂಚಿಸಿದೆ. ಇದರಂತೆ ಜ.26 ಭಾನುವಾರವಿದ್ದು, ಲೋಕಾಯಕ್ತ ಅಧಿಕಾರಿಗಳು ಜ.25ರಂದೇ ಅಂದರೆ ಇಂದೇ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದು.
ಜನವರಿ 27 ಕ್ಕೆ ಮುಡಾಹಗರಣ ವಿಚಾರಣೆ ನಿಗಧಿ ಮಾಡಿದ್ದ ಕೋರ್ಟ್ ಇಂದು ಅರ್ಜಿ ವಿಚಾರಣೆಗು ಮುನ್ನ ನ್ಯಾಯಾಲಯಕ್ಕೆ ಲೋಕಾಯುಕ್ತ ತನಿಖಾ ವರದಿ ಸಲ್ಲಿಕೆಗೆ ಸೂಚಿಸಲಾಗಿತ್ತು.ಈ ಹಿನ್ನೆಲೆ ಇಂದು ಹೈಕೋರ್ಟ್ ಗೆ ಧಾರವಾಡ ಪೀಠಕ್ಕೆ ವರದಿ ಸಲ್ಲಿಕೆ ಮಾಡಲಿದ್ದಾರೆ.