ಮೈಸೂರು(Mysore) ಲೋಕಸಭಾ(LokaSaba) ಕ್ಷೇತ್ರಕ್ಕೆ ಬಿಜೆಪಿ(BJP) ಅಭ್ಯರ್ಥಿಯಾಗಿ ಯದುವೀರ್(Yaduveer) ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ಕಾಂಗ್ರೆಸ್(Congress) ಮುಂದಾಗಿದೆ.
ರಾಜವಂಶಸ್ಥರಿಗೆ ಮಣೆ ಹಾಕಿರುವ ಬಿಜೆಪಿ ಲೆಕ್ಕಾಚಾರಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನಿಂದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು(Devraja Urs) ಅವರ ಮೊಮ್ಮಗ(Grandson) ಸೂರಜ್ ಹೆಗ್ಡೆ ಅವರನ್ನು ಕಣಕ್ಕಿಳಿಸಲು ಸಿಎಂ ಸಿದ್ದರಾಮಯ್ಯ(Siddaramaiah) ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಸೂರಜ್ ಹೆಗ್ಡೆ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಕಾಂಗ್ರೆಸ್‌ಗೆ ಲಾಭ ಎಂಬುದು ಕಾಂಗ್ರೆಸ್ ನಾಯಕರ ನಿರೀಕ್ಷೆಯಾಗಿದೆ.

ಸೂರಜ್ ಹೆಗ್ಡ ಅವರೇ ಕಾಂಗ್ರೆಸ್(Congress) ಅಭ್ಯರ್ಥಿ ಯಾಕೆ?ಎಂಬುದು ಸದ್ಯಕ್ಕೆ ಪ್ರಶ್ನೆ ಮೂಡಿಸಿದ್ದರೂ, ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್(Yaduveer Wadiyar) ಅವರಿಗೆ ಪ್ರತಿ ಸ್ಪರ್ಧಿಯಾಗಲು ಸೂರಜ್ ಹೆಗ್ಡೆ(SurajHegde) ಅವರೇ ಸೂಕ್ತ ಎನ್ನುತ್ತಿದೆ ಹಿಂದಿನ ಇತಿಹಾಸ.

ಸೂರಜ್ ಹೆಗ್ಡ ತಮ್ಮದೇ ಬದ್ಧತೆ, ಐಡಿಯಾಲಜಿ(Ideology) ಹೊಂದಿರುವ ಕಾಂಗ್ರೆಸ್ ಲೀಡರ್ ಆಗಿದ್ದು, ಮಾಜಿ ಸಿಎಂ ದಿ. ದೇವರಾಜ ಅರಸು ಅವರ ಮೊಮ್ಮಗ ಎಂಬ ಖ್ಯಾತಿ ಇದೆ. ಅಲ್ಲದೇ ದೇವರಾಜ ಅರಸು ಕುಟುಂಬಕ್ಕೆ ಈ ಹಿಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್(Srikantadutta Wadiyar) ಅವರನ್ನ ಸೋಲಿಸಿದ ಇತಿಹಾಸ ಇದೆ. ಈ ಹಿಂದೆ 1991ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮೈಸೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಶ್ರೀಕಂಠದತ್ತ ಒಡೆಯರ್ ಅವರನ್ನ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಚಂದ್ರಪ್ರಭಾ ಅರಸ್(Chandraprabha Urs) ಸೋಲಿಸಿದ್ದರು.
ಅಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಂದ್ರಪ್ರಭಾ ಅರಸ್ ಅವರು ದಿ. ದೇವರಾಜ ಅರಸು ಅವರ ಪುತ್ರಿ ಎಂಬುದು ಇತಿಹಾಸ(History) ಈಗ ಮತ್ತೊಮ್ಮೆ ಇದೇ ಇತಿಹಾಸ ಪುನರ್ ನಿರ್ಮಾಣದ ನಿರೀಕ್ಷೆ ಕಾಂಗ್ರೆಸ್(Congress) ಹೊಂದಿದೆ. ಅಲ್ಲದೇ ಮೈಸೂರು ಭಾಗದ ಬಡಜನರಿಗೆ ದೇವರಾಜ ಅರಸು ಅವರ ಬಗ್ಗೆ ಇರುವ ಅಭಿಮಾನದ ಲಾಭ ಪಡೆಯುವುದು ಕೈ ಲೆಕ್ಕಾಚಾರ.
#LokaSaba #MysoreKodagu #Yaduveer #Congress #SurajHegde #Siddaramaiah


