ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯದ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಿಕೆ ಚಾಲನೆ ಕೊಡುವ ಸರ್ಕಾರದ ನೂತನ ಯೋಜನೆಗೆ ಬಹಳ ದೊಡ್ಡ ಮಟ್ಟದ ನಿರೀಕ್ಷೆಗಳು ವ್ಯಕ್ತವಾಗಿವೆ ಅದರಂತೆ ಉಚಿತ ಪ್ರಯಾಣಿಕಾಗಿ ಸ್ಮಾರ್ಟ್ ಕಾರ್ಡ್ ಮಹಿಳೆಯರಿಗೆ ನೀಡಲಾಗುತ್ತದೆ ಎಂದು ಈ ಹಿಂದೆ ರಾಜ್ಯ ಸರ್ಕಾರ ಹೇಳಿತ್ತು ಮೊದಲ 2 ತಿಂಗಳು ಸ್ಮಾರ್ಟ್ ಕಾರ್ಡ್ ಇಲ್ಲದೆ ಉಚಿತವಾಗಿ ಪ್ರಯಾಣ ಮಾಡಬಹುದು ಅದಾದ ನಂತರ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುವುದು ಅಂತ ಈ ಹಿಂದೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿಕೆಯನ್ನು ನೀಡಿದ್ದರು
ಈಗ ಅದರ ಅನ್ವಯ ಸ್ಮಾರ್ಟ್ ಕಾರ್ಡ್ ಹೇಗಿರಲಿದೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದರ್ಶಿಸಿದ್ದಾರೆ, ಈ ವೇಳೆ ಐವರು ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡಿರುವ ಸಿದ್ದರಾಮಯ್ಯ ಅವರು ನೂತನ ಶಕ್ತಿ ಯೋಜನೆಗೆ ಅಧಿಕೃತವಾಗಿ ಚಾಲನೆಯನ್ನು ನೀಡಿದ್ದಾರೆ ಮುಂದೇ ದಿನಗಳಲ್ಲಿ ಮಹಿಳೆಯರು ಈ ಸ್ಮಾರ್ಟ್ ಕಾರ್ಡನ್ನು ಬಳಸಿಕೊಂಡು ಉಚಿತವಾಗಿ ಎಲ್ಲಿ ಬೇಕಾದರೂ ಪ್ರಯಾಣವನ್ನ ಮಾಡಬಹುದು ಎಂದು ಈ ಹಿಂದೆ ರಾಜ್ಯ ಸರ್ಕಾರವೇ ಹೇಳಿಕೊಂಡಿತ್ತು
ಅದರಂತೆ ಇದೀಗ ಅಧಿಕೃತವಾಗಿ ಸ್ಮಾರ್ಟ್ ಕಾರ್ಡ್ ಅನ್ನ ಮಹಿಳೆಯರಿಗೆ ವಿತರಣೆ ಮಾಡಲಾಗಿದೆ ಇನ್ನು ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಮಧು ಬಂಗಾರಪ್ಪ, ಕೃಷ್ಣಭೈರೇಗೌಡ, ಶಾಸಕ ರಿಜ್ವಾನ್ ಅರ್ಷದ್, ಎಂಎಲ್ಸಿ ಹರಿಪ್ರಸಾದ್, ಸಿಎಸ್ ವಂದಿತಾ ಶರ್ಮಾ, ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ.ಪ್ರಸಾದ್, ಕೆಸ ಎಂಡಿ ಅನ್ಬುಕುಮಾರ್, ಬಿಎಂಟಿಸಿ ಎಂಡಿ ಸತ್ಯವತಿ ಉಪಸ್ಥಿತರಿದ್ದು ಶಕ್ತಿ ಯೋಜನೆಯ ಚಾಲನೆಗೆ ಆಡಳಿತಾತ್ಮಕವಾಗಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ರು