ಮಾಜಿ ಸಿಎಂ ಕುಮಾರಸ್ವಾಮಿ ಶುರು ಮಾಡಿದ್ದ ಪೆನ್‌ಡ್ರೈವ್ ರಾಜಕಾರಣ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿಪಕ್ಷ ಬಿಜೆಪಿ ಕೂಡ ಇದಕ್ಕೆ ಬೆಂಬಲ ಕೊಟ್ಟು ಸರ್ಕಾರವನ್ನ ಹಣೆಯೋದಕ್ಕೆ ಬೇಕಾದ ಎಲ್ಲಾ ರೀತಿಯಾದ ತಯಾರಿಗಳನ್ನ ಮಾಡಿಕೊಳ್ಳುತ್ತಿದ. ಈ ವಿಚಾರ ಸದನದಲ್ಲಿ ಬಹುದೊಡ್ಡ ಮಟ್ಟಿಗೆ ಸದ್ದು ಮಾಡ್ತಾ ಇದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಬೃಹತ್ ವಾಕ್‌ಸಮರಕ್ಕೆ ಕಾರಣವಾಗಿದೆ.

ಈ ವಿಚಾರದ ಕುರಿತು ಮಾತನಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಿಎಂ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ರು, “ ದೇವೇಗೌಡ ಅವರ ಕುಟುಂಬದ ಬಗ್ಗೆ ಮಾತನಾಡಿದ್ರೆ ನೀವು ಶೇಕ್ ಹ್ಯಾಂಡ್ ಮಾಡ್ತೀರ, ಇದಕ್ಕೆ ಯಾರು ಕೇರ್ ಮಾಡೋದಿಲ್ಲ, ಅಧಿಕಾರ ಯಾರಿಗೂ ಶಾಶ್ವತ ಅಲ್ಲ,” ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ,” ನಿಮಗೂ ಯಾರೂ ಕೇರ್ ಮಾಡೋದಿಲ್ಲ,ನೀವು ಕೇರ್ ಮಾಡಿದ್ರೆ ನಾವು ಕೇರ್ ಮಾಡ್ತೀವಿ, ಇಲ್ಲಾ ಅಂದ್ರೆ ಇಲ್ಲ,ಇಲ್ಲಿ ಯಾರೂ ಕೂಡ ಹೆದರಿಕೊಳ್ಳೋದಿಲ್ಲ, ನೀವು ಕೇರ್ ಮಾಡೋಲ್ಲ ಅಂದ್ರೆ ಅದರ ಅಪ್ಪನಷ್ಟು ಕೇರ್ ಮಾಡೋಲ್ಲ” ಇಷ್ಟರಲ್ಲೇ ನಡುವಿನಲ್ಲಿ ವಾಕ್ಸಮರ ನಡೆಸಿದ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ “ಹೇ… ಹೋಗ್ರಿ ಅಚೆಗೆ ಎಂದು ಸಿಎಂ ಗದರಿದ್ದಾರೆ
ಒಟ್ಟಾರೆಯಾಗಿ ಸಿಎಂ ಸಿದ್ದರಾಮಯ್ಯ ಇವತ್ತು ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಆರೋಪಗಳಿಗೆ ಟಾಂಗ್ ಕೊಟ್ಟಿದ್ದಾರೆ.












