ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಬಸವರಾಜ್ ಬೊಮ್ಮಾಯಿ ಮೊದಲ ಸಭೆಯಲ್ಲಿಯೇ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದು, ದಕ್ಷ- ಪ್ರಾಮಾಣಿಕ-ಜನಪರ ಆಡಳಿತ ನನ್ನ ಗುರಿ, ಖರ್ಚು ಕಡಿಮೆ ಮಾಡಿ, ನಿಗದಿತ ಸಮಯದೊಳಗೆ ಯೋಜನೆಗಳು ಅನುಷ್ಠಾನಕ್ಕೆ ತರುವಂತೆ ಸೂಚಿಸಿದ್ದಾರೆ.
ಅಧಿಕಾರಿಗಳ ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಬೊಮ್ಮಾಯಿ, ದಕ್ಷ- ಪ್ರಾಮಾಣಿಕ-ಜನಪರ ಆಡಳಿತ ನನ್ನ ಗುರಿ. ಇಲಾಖೆಗಳ ನಡುವಿನ ಹೊಂದಾಣಿಕೆ ಮುಖ್ಯ. ಕಾಲಮಿತಿಯಲ್ಲಿ ಯೋಜನೆಗಳು ಕಾರ್ಯಕ್ರಮ ಅನುಷ್ಠಾನ ಆಗಬೇಕು. ಟೀಮ್ ವಕ್೯ ಆಗಬೇಕು. ಅಧಿಕಾರಿಗಳು ಏನೇ ಮಾಡಿದರೂ ನಡೆಯುತ್ತದೆ ಎಂಬುದನ್ನು ಸಹಿಸುವುದಿಲ್ಲ. ಹಣಕಾಸಿನ ಶಿಸ್ತನ್ನು ತರುವುದು ಬಹಳ ಅವಶ್ಯಕತೆ ಇದೆ. ಮಾ.31ರರೊಳಗೆ ಎಲ್ಲ ಇಲಾಖೆಯಲ್ಲೂ ಅನಗತ್ಯ ಖರ್ಚು ವೆಚ್ಚವನ್ನ ಕಡಿಮೆ ಮಾಡಬೇಕು. ಕನಿಷ್ಠ ಶೇ.5 ಆದರೂ ಇಳಿಕೆ ಮಾಡಬೇಕು. ಸಮಯಕ್ಕೆ ಸರಿಯಾಗಿ ಯೋಜನೆ ಜಾರಿಯಾಗಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪುವಂತೆ ನೋಡಿಕೊಳ್ಳಬೇಕು. ಮುಂಬರುವ ದಿನ ಫೈಲ್ ಮೂಮೆಂಟ್ಗೆ ಹೊಸ ಯೋಚನೆ ಮಾಡಲಾಗುವುದು ಎಂದು ಸಿಎಂ ಹೇಳಿದರು.
ಜನರ ಸುತ್ತ ಆಡಳಿತ ಇರಬೇಕು : ಆಡಳಿತದ ಸುತ್ತ ಜನರು ಇರಬಾರದು.!!
ಇಲಾಖೆಯ ಮುಖ್ಯಸ್ಥರು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಉತ್ತಮ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು. ಪ್ರವಾಹ ಹಾಗೂ ಕೋವಿಡ್ ಸಂದರ್ಭದಲ್ಲಿ ಅಧಿಕಾರಿಗಳು ಸಾಕಷ್ಟು ದಕ್ಷತೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು ಎಂಬ ಮಾಹಿತಿ ಲಭ್ಯವಾಗಿದೆ. ಜನಪರ, ಪಾರದರ್ಶಕತೆಯ ಸರ್ಕಾರ ನೀಡಲು ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಬೇಕು. ಜನರ ಸುತ್ತ ಆಡಳಿತ ಇರಬೇಕು ಆಡಳಿತದ ಸುತ್ತ ಜನರು ಇರುವಂತಾಗಬಾರದು. ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯವನ್ನು ನಂಬರ್ ಒನ್ ಮಾಡಲು ಶ್ರಮಿಸಬೇಕು. ಇದನ್ನು ಮಾಜಿ ಸಿಎಂ ಯಡಿಯೂರಪ್ಪ ಅವರೂ ಕೂಡಾ ಬಯಸಿದ್ದರು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಸಭೆಯಲ್ಲಿ ಗುಪ್ತರಚರ ಇಲಾಖೆಯ ಹಿರಿಯ ಅಧಿಕಾರಿಗಳು, ಸರ್ಕಾರದ ಮುಖ್ಯಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.