ಸಿಎಂ ಇಬ್ರಾಹಿಂ ಕಾಂಗ್ರೆಸ್ ನಲ್ಲೇ ಇದ್ದಾರೆ ಎಲ್ಲೂ ಹೋಗಿಲ್ಲ ಅವರು 10ದಿನದ ಹಿಂದೆ ಬೇಜಾರಾಗಿ ಹಾಗೆ ಹೇಳಿದ್ದರು. ಸಿದ್ದರಾಮಯ್ಯ ಅವರನ್ನ ಬಿಟ್ಟು ಅವರು ಎಲ್ಲೂ ಹೋಗಲ್ಲ ಎಂದು ಶಾಸಕ ಜಮೀರ ಅಹ್ಮದ್ ಹೇಳಿದರು.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, 15ದಿನಗಳ ಹಿಂದೆಯೇ ಇಲ್ಲಿ ಸಭೆ ಫಿಕ್ಸ್ ಆಗಿತ್ತು. ನನಗೆ ಸಿಎಂ ಇಬ್ರಾಹಿಂ ಅವರೇ ನಾಯಕರು, ನಮ್ಮ ಸಮಾಜದ ನಾಯಕರು. ನಮ್ಮ ನಾಯಕರು ಅಂತ ನಾನೇ ಒಪ್ಪಿಕೊಂಡಿದ್ದೀನಿ. ಅವರ ಅನುಭವದ ಮುಂದೆ ನಾನೇನು ಅಲ್ಲ ಎಂದಿದ್ದಾರೆ.
ಇದೇ ವೇಳೆ ಹಿಜಾಬ್ ವಿವಾದದ ಕುರಿತು ಮಾತನಾಡಿದ ಅವರು, ಸ್ವಾತಂತ್ರ್ಯ ಬರುವ ಮುನ್ನವೇ ಹಿಜಾಬ್ ಹಾಕಿಕೊಂಡು ಬರ್ತಿದ್ದಾರೆ. ಹಿಜಾಬ್ ವಿಷಯವನ್ನು ಸರ್ಕಾರ ಅದನ್ನು ಸರಳವಾಗಿ ತೆಗೆದುಕೊಂಡರು. ಈ ವಿವಾದ ಈಗ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ ಕಾದು ನೋಡೋಣ ಎಂದು ಹೇಳಿದ್ದಾರೆ.
ಮಕ್ಕಳಲ್ಲಿ ಜಾತಿ ಬೀಜ ಹಾಕಿ ರಾಜಕೀಯ ಮಾಡುತ್ತಿದ್ದಾರೆ. ಕೋರ್ಟ್ ತೀರ್ಪು ನೂರಕ್ಕೆ ನೂರು ನಮ್ಮ ಪರ ಬರುತ್ತೆ ಅನ್ನೋ ನಂಬಿಕೆ ಇದೆ. ಬಿಜೆಪಿ ಅವರು ರಾಜಕೀಯ ಲಾಭಕ್ಕೆ ಈ ರೀತಿ ಮಾಡುತ್ತಿದ್ದಾರೆ. ಹಿಜಾಬ್ ಹಾಕೋದು ಅವರ ರೈಟ್ಸ್. ಹೀಗಾಗಿ ನೂರಾರು ವರ್ಷದಿಂದ ಹಾಕಿಕೊಂಡು ಬರ್ತಿದ್ದಾರೆ. ರಾಮಮಂದಿರವೇ ಬೇರೆ ಹಿಜಾಬೇ ಬೇರೆ, ರಾಮಮಂದಿರ ತೀರ್ಪು ಬಂದಾಗ ನಾವು ಸ್ವಾಗತ ಮಾಡಿದ್ದೆವು. ಪಕ್ಷ ಅಧಿಕಾರಕ್ಕೆ ಬರಬೇಕು ಅಂತ ಈಗ ರಾಜ್ಯ ಪ್ರವಾಸ ಮಾಡ್ತಿದ್ದೀವಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಾತ್ರ ಜನರಿಗೆ ಒಳ್ಳೆದಾಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ಸಿಎಂ ಯಾರು ಅನ್ನೋದನ್ನ ಕೇವಲ ನಮ್ಮ ಅಭಿಪ್ರಾಯ ಹೇಳ್ತೀವಿ. ಆದ್ರೆ ಹೈಕಮಾಂಡ್ ಏನು ನಿರ್ಧಾರ ಮಾಡ್ತಾರೋ ಅದೇ ಅಂತಿಮ. ಸಿಎಂ ಇಬ್ರಾಹಿಂ 40 ಕೋಟಿ ಸಾಲದ ಬಗ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ನಮ್ಮ ಮುಂದೆ ಸಾಲದ ಬಗ್ಗೆ ಬೇಡಿಕೆ ಇಟ್ಟಿಲ್ಲ ಎಂದಿದ್ದಾರೆ.