ಮೈಸೂರು ಸಾಂಸ್ಕೃತಿಕ ನಗರಿ, ವಿದ್ಯಾನಗರಿ ಸಂಸದ ಪ್ರತಾಪ ಸಿಂಹ ಅಜ್ಞಾನದ ಕಡೆಗೆ ಕರೆದುಕೊಂಡು ಹೋಗುತ್ತಿದ್ದಾನೆ ಟಿಪ್ಪು ಕುರಿತ ಪುಸ್ತಕ, ನಾಟಕ ಆಕ್ರೋಶಕ್ಕೆ ಕಾರಣವಾಗಿದೆ.
ಗಲಾಟೆಗಳು ನಡೆಯಬಾರದು ಎಂದು ಸಭೆ ನಡೆಸಿದ್ದೇನೆ ಪುಸ್ತಕದಲ್ಲಿ ಟಿಪ್ಪುನಿನ ಬಗ್ಗೆ ಕೆಟ್ಟದಾಗಿ ತೋರಿಸಲಾಗಿದೆ ಶೃಂಗೇರಿ ಶಾರದ ಪೀಠವನ್ನು ಪುನರ್ ನಿರ್ಮಿಸಿರುವುದಾಗಿ ಗುರುಗಳೇ ಹೇಳಿದ್ದಾರೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಈ ರೀತಿ ಮಾಡುತ್ತಿದ್ದಾರೆ. ಪ್ರತಾಪ್ ಸಿಂಹ ಎರಡು ಸಮಾಜಗಳ ಮಧ್ಯೆ ವಿಷ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಕಿಡಿಕಾರಿದ್ದಾರೆ.
ಪ್ರತಾಪ ಸಿಂಹ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ನಂಜುಂಡನಿಗೆ ಕೊಟ್ಟ ಪಚ್ಚೆ ವಜ್ರ ಟಿಪ್ಪು ಸುಲ್ತಾನ್ ಕೊಟ್ಟಿದ್ದು ಇದನ್ನು ಪ್ರತಾಪ ಸಿಂಹ ವಾಪಸ್ ಹಿಸ್ಕೋತಾನಾ.
ಮೋದಿ ನಿಂತು ಭಾಷಣ ಮಾಡುವ ಕೆಂಪು ಕೋಟೆಯನ್ನು ಷಹಜಹಾನ್ ಕಟ್ಟಿಸಿದ್ದು ಅಲ್ಲಿ ನಿಂತು ಯಾಕೆ ಭಾಷಣ ಬಿಗಿತೀರಿ. ಪ್ರತಾಪ ಸಿಂಹ ಅದನ್ನು ಒಡೆಸಿಬಿಡುತ್ತಾನಾ
ಬಿಜೆಪಿಯವರು ಸಾಬ್ರಿಗೂ ಗೌಡ್ರಿಗೂ ಜಗಳ ತರುವ ಕೆಲಸ ಮಾಡುತ್ತಿದ್ದಾರೆ. ಇದು ಪ್ರತಾಪ್ ಸಿಂಹನಿಗೆ ಒಳ್ಳೆಯದಲ್ಲ ಎಂದು ಎಚ್ಚರಿಸಿದ್ದಾರೆ.
ಪ್ರತಿಮೆಗೆ ನಮ್ಮಲ್ಲಿ ಅವಕಾಶವಿಲ್ಲ ಪೂಜೆ ಮಾಡುವುದು, ಕುಂಕುಮ ಹಚ್ಚುವುದು ನಮ್ಮಲ್ಲಿ ಇಲ್ಲ ಬಡವರಿಗೆ ಸಹಾಯ ಮಾಡುವುದು ನಮ್ಮಲ್ಲಿರುವುದು ಇದೇ ನಮ್ಮಲ್ಲಿರುವ ಆಚರಣೆ ಟಿಪ್ಪು ಪ್ರತಿಮೆ ಮಾಡುವ ಪ್ರಶ್ನೆಯೇ ಇಲ್ಲ ಎಲ್ಲಿಯಾದರೂ ನಮ್ಮ ಪ್ರತಿಮೆ ಇರುವುದನ್ನು ತೋರಿಸಿ ತನ್ವೀರ್ ಸೇಠ್ ಗೆ ಏನೂ ಗೊತ್ತಿಲ್ಲ ಧರ್ಮ ಗುರುಗಳನ್ನು ಕೇಳು ಎಂದು ಹೇಳಿದ್ದೇನೆ ಎಂದು ಪ್ರತಿಮೆ ನಿರ್ಮಾಣವನ್ನ ವಿರೋಧಿಸಿದ್ದಾರೆ.
ಯುವತಿ ಕೊಲೆ ಪ್ರಕರಣ
ಪ್ರಮೋದ ಮುತಾಲಿಕ್ ಗೆ ಲವ್ ಮಾಡಿ ಗೊತ್ತಿಲ್ಲ ಮೊದಲು ಲವ್ ಮಾಡಿ ಟೇಸ್ಟ್ ನೋಡಲು ಹೇಳಿ ಈ ವಿಚಾರವನ್ನು ಇಗ್ನೋರ್ ಮಾಡಿ ಚರ್ಚೆಯಾಗಬೇಕಿರುವ ವಿಚಾರಗಳು ಸಾಕಷ್ಟು ಇವೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಟಿಪ್ಪು ವಿಶ್ವವಿದ್ಯಾಲಯವನ್ನು ಕೋಲಾರ, ಶ್ರೀರಂಗಪಟ್ಟಣದಲ್ಲಿ ಮಾಡುತ್ತೇವೆ.
ಅದೇ ರೀತಿ ಕೆಂಪೇಗೌಡ ವಿಶ್ವ ವಿದ್ಯಾನಿಲಯ ಮಾಡುತ್ತೇವೆ ಇನ್ನು ಆರು ತಿಂಗಳು ತಡೆಯಿರಿ ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗ್ತಾರೆ ಇಂತಹ ಅಹಿತಕರ ಸಮಾಜದಲ್ಲಿ ಶಾಂತಿ ಕದಡುವ ಘಟನೆಗಳು ನಡೆಯದಂತೆ ನೋಡಿಕೊಳ್ತಾರೆ ಎಂದು ಭವಿಷು ನುಡಿದಿದ್ದಾರೆ.