ಮೊನ್ನೆ ವೇದಿಕೆಯೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ಗುಬ್ಬಿ (Gubbi) ಕ್ಷೇತ್ರದ ಕಾಂಗ್ರೆಸ್ ಶಾಸಕ (congress MLA ) ಶ್ರೀನಿವಾಸ್ (Srinivas) ಅಚ್ಚರಿ ಹೇಳಿಕೆ ಕೊಟ್ಟಿದ್ದರು. ಒಂದುವೇಳೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ (parliament election )ಕಾಂಗ್ರೆಸ್ ಗೆ ಹೆಚ್ಚು ಸ್ಥಾನ ಸಿಗದಿದ್ದರೆ ಸಿಎಂ ಸಿದ್ದರಾಮಯ್ಯ (cm siddaramaiah) ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗುತ್ತದೆ ಎಂಬ ಹೇಳಿಕೆ ಕೊಟ್ಟಿದ್ದು ಕುತೂಹಲಕ್ಕೆ ಕಾರಣವಾತ್ತು.

ರಾಜ್ಯದಲ್ಲಿ ಕಾಂಗ್ರೆಸ್ (congress) ಅಧಿಕಾರಕ್ಕೆ ಬಂದಾಗಿಂದಲೂ ಸಿಎಂ ಬದಲಾವಣೆಯ ಹೇಳಿಕೆಗಳು ಒಂದಾದ ಮೇಲೆ ಒಂದರಂತೆ ಕೇಳಿಬರುತ್ತಲೇ ಇತ್ತು. ಅರ್ಧ ಅವಧಿಗೆ ಸಿದ್ದರಾಮಯ್ಯ(siddaramaiah), ಉಳಿದ ಅರ್ಧ ಅವಧಿಗೆ ಡಿಕೆ (DK) ಎಂಬ ಅರ್ಥದಲ್ಲಿ ಸ್ವತಃ ಕಾಂಗ್ರೆಸ್ ನಾಯಕರೇ (congress leaders) ಹಲವು ಬಾರಿ ಮಾತನಾಡಿದ್ರೂ ಇತ್ತೀಚೆಗೆ ಅಂಥ ಹೇಳಿಕೆಗಳಿಗೆ ಬ್ರೇಕ್ ಬಿದ್ದಿತ್ತು. ಆದ್ರೆ ಇದೀಗ ಗುಬ್ಬಿ ಶಾಸಕರು (Gubbi MLA)ಅಂಥದೊಂದು ಹೇಳಿಕೆ ಕೊಟ್ಟಿದ್ದಾರೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯರನ್ನ (cm siddaramaiah)ಕೇಳಿದಾಗ, ಗುಬ್ಬಿ ಶಾಸಕರು ಅಹ್ ಅರ್ಥದಲ್ಲಿ ಹೇಳಿಲ್ಲ ! ಗ್ಯಾರಂಟಿ ಯೋಜನೆಗಳ ಮೂಲಕ ನಾವು ಬಡವರ ಕಲ್ಯಾಣ ಮಾಡಿದ್ದೇವೆ , ಇಷ್ಟೆಲ್ಲಾ ಕೆಲ್ಸ ಮಾಡಿ , ನುಡಿದಂತೆ ನಡೆದ ಮೇಲೆ ಗೆಲ್ಲಲೇಬೇಕು ಅಲ್ಲವೆ ? ಜನ ಮತ ನೀಡಲೇಬೇಕು ಅಲ್ಲವೇ ? ಹೀಗಾಗಿ ಆ ರೀತಿ ಅರ್ಥದಲ್ಲಿ ಅವರು ಹಾಗೆ ಹೇಳಿದ್ದಾರೆ ಅಷ್ಟೇ ಎಂದು ಸಹಜವಾಗಿ ಶಾಸಕ ಶ್ರೀನಿವಾಸ್ ಹೇಳಿಕೆಯನ್ನು ಪರಿಗಣಿಸಿದ್ದಾರೆ.